3ನೇ ಬಾರಿಗೆ ದೇವಸೂಗೂರು ಕೃಷ್ಣಾನದಿ ಸೇತುವೆ ಕಾಮಗಾರಿ ಆರಂಭ: ಈಗಲಾದರೂ ಪೂರ್ಣಗೊಳ್ಳುತ್ತಾ?
ರಾಯಚೂರು ಜನವರಿ 10: ದೇವಸೂಗೂರಿನ ಕೃಷ್ಣಾನದಿ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆಯ ಕಾಮಗಾರಿ 3ನೇ ಬಾರಿಗೆ ಕೈಗೆತ್ತಿಕೊಂಡಿದ್ದು ಈ ಬಾರಿಯಾದರೂ ಸಂಪೂರ್ಣವಾಗಿ ಗುಣಮಟ್ಟದ ಕಾಮಗಾರಿ ಕೈಗೊಳ್ಳಲಾಗುತ್ತಾ ಎಂಬುದು ಸಾರ್ವಜನಿಕರಲ್ಲಿ ಪ್ರಶ್ನೆ ಕಾಡುತ್ತಿದೆ.
ರಾಯಚೂರು ಮತ್ತು ಹೈದರಾಬಾದ್ ಮಧ್ಯೆ ಸಂಪರ್ಕ ಕಲ್ಪಿಸುವ ರಾಷ್ಟಿಯ ಹೆದ್ದಾರಿ 167ರ ಮಾರ್ಗದಲ್ಲಿ ಕೃಷ್ಣಾನದಿಗೆ ಅಡ್ಡಲಾಗಿ ಹೈದರಾಬಾದ್ ನಿಜಾಮರ ಆಡಳಿತದಲ್ಲಿ ನಿರ್ಮಿಸಲಾಗಿರುವ ದೇವಸೂಗೂರಿನ ಕೃಷ್ಣಾನದಿಯ ಹಳೆಯ ಸೇತುವೆ ೩೫ ಕಾಮಾನುಗಳನ್ನು ಹೊಂದಿದೆ. 20 ಅಡಿ ಅಗಲ , 2,488ಅಡಿ ಉದ್ದ , 60 ಅಡಿ ಎತ್ತರದ ಸೇತುವೆಯನ್ನು ಅಂದಿನ ಹೈದರಾಬಾದ್ ನಿಜಾಮರಾಗಿದ್ದ ಮೀರ್ ಉಸ್ಮಾನ್ ಅಲೀಖಾನ್ ಬಹದ್ದೂರ್ ನಿರ್ಮಾಣ ಮಾಡಿದ್ದರು.

ನಿತ್ಯ ಸಾವಿರಾರು ವಾಹನಗಳ ಓಡಾಟದಿಂದ 75 ವರ್ಷಗಳಷ್ಟು ಹಳೆಯ ಸೇತುವೆ ಶಿಥಿಲಗೊಂಡಿತ್ತು. ಕಾರಣ 2016 ರಲ್ಲಿ ಜೂನ್ 24 ರಿಂದ ಆಗಸ್ಟ್ 2ನೇ ವಾರದವರೆಗು ಕೇಂದ್ರ ಸರ್ಕಾರದ ಅನುದಾನದಲ್ಲಿ ಒಟ್ಟು 4.50 ಕೋಟಿ ವೆಚ್ಚದಲ್ಲಿ ದುರಸ್ತಿ ಕಾರ್ಯ ಹಾಗೂ ಸೇತುವೆ ಮೇಲ್ಭಾಗದ 800 ಮೀಟರ್ ಉದ್ದ ಡಾಂಬರೀಕರಣ ಕಾಮಗಾರಿಯನ್ನು ಮುಂಬೈ ಮೂಲದ ರಿಬಿಲ್ಟ್ ಸ್ಟಕ್ಟರ್ ನಿರ್ವಹಿಸಿತ್ತು. 2023ರಲ್ಲಿ ಫೆ.22ರಿಂದ 25ರವರೆಗೆ ದೇವಸೂಗೂರಿನ ಕೃಷ್ಣಾನದಿ ಸೇತುವೆಯ ಕಾಮಗಾರಿ 2ನೇ ಬಾರಿಗೆ ಕೈಗೊಳ್ಳಲಾಗಿತ್ತು. ಬೆಂಗಳೂರಿನ ಗುತ್ತೆದಾರ ಒಬ್ಬರು , ಈ ದುರಸ್ತಿ ಕಾರ್ಯ ಕೈಗೊಂಡಿದ್ದರು.
ಹಾರುಬೂದಿ ಲಾರಿ, ಟಿಪ್ಪರ್ ,ವಾಹನಗಳು ದೊಡ್ಡ ದೊಡ್ಡ ವಾಹನಗಳು ಸೇತುವೆಯ ಮೇಲೆ ಸಂಚಾರಿಸುತ್ತಿರುವ್ಯದರಿದ ಕಳಪೆ ಕಾಮಗಾರಿಯಿ ಂದಾಗಿ ಸೇತುವೆಯ ಮೇಲ್ಭಾಗದ ರಸ್ತೆ ಪದೇ ಪದೇ ಹಾಳಾಗುತ್ತಿದೆ.ಈಗ ಮತ್ತೆ ಪ್ರಸಕ್ತ ವರ್ಷ ದೇವಸೂಗೂರಿನ ಕೃಷ್ಣಾ ಸೇತುವೆಯ ಕಾಮಗಾರಿಗೆ ರಾಷ್ಟಿಯ ಹೆದ್ದಾರಿ ಪ್ರಾಧಿಕಾರ ಸೇತುವೆ ದುರಸ್ತಿ ಕಾರ್ಯ ಕೈಗೆತ್ತಿಕೊಂಡಿರುವ ಜ. 10ರಿಂದ 45 ದಿನಗಳವರೆಗೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ಹಿಂದೆ , ಇದೇ ರೀತಿ 40 ದಿನಗಳು ರಸ್ತೆ ಬಂದ ಮಾಡಿ ಅಂದಾಜು ಎರಡು ಫೀಟ್ ಅಡಿ ಸೇತುವೆಯ ಮೇಲ್ಭಾಗದಲ್ಲಿ ತೋಡಿ ಒಳಗಡೆ ಕೇವಲ ಕಲ್ಲು ಉಸುಕು ತುಂಬಿ ಮೇಲೆ ರಾಡುಗಳನ್ನು ಹಾಕಿ ಕೇವಲ ಎರಡು, ಮೂರು ಇಂಚು ಮಾತ್ರ ಆರ್,ಸಿ,ಸಿ ಹಾಕಿದ್ದಾರೆ.
ಕಳಪೆ ಗುಣಮಟ್ಟದ ಕಾಮಗಾರಿದಿಂದಾಗಿ , ಸೇತುವೆ ರಸ್ತೆ ಸಂಪೂರ್ಣ ಹಾಳಾಗಿ ಹೋಯಿತು. ಮತ್ತೆ 3-4 ಸಲ ಡಾಂಬರ್ ಹಾಕಿ ರಿಪೇರಿ ಮಾಡಿದ್ದಾರೆ. ವಿನಾಹ ಗುಣಮಟ್ಟದ ಕಾಮಗಾರಿ ಆಗುತ್ತಿಲ್ಲ. ಇದರಿಂದಾಗಿ ಸರ್ಕಾರದ ಹಣ ವ್ಯರ್ಥವಾಗುತ್ತಿದೆ ಎಂದು ಸಾರ್ವಜನಿಕರು ಮಾತಾಡಿಕೊಳ್ಳುತಿದ್ದಾರೆ. ಸೇತುವೆಯ ಮೇಲ್ಭಾಗದ ಮೇಲೆ ಎರಡು, ಮೂರು ಇಂಚು ಆರ್,ಸಿ,ಸಿ ಹಾಕಲು ಕಾರಣವೇನು? ದೊಡ್ಡ ದೊಡ್ಡ ಸಿವಿಲ್ ಇಂಜಿನಿಯರ್ ಗಳಿಗೆ ಇದು ರ್ಥಿವಾಗಲಿಲ್ಲವೇ? ಅಥವಾ ಅಧಿಕಾರಿಗಳ ರ್ಸಂಡಟೇಜ್ ಕಾರಣದಿಂದ ಹೀಗಾಯ್ತ ಎಂದು ಜನರಲ್ಲಿ ಪ್ರಶ್ನೆಗಳು ಕೇಳಿ ಬರುತ್ತಿವೆ.
ತೆಲಂಗಾಣದ ರಾಜಧಾನಿ ಹೈದರಾಬಾದ್‌ಗೆ ತೆರಳುವ ಪ್ರಯಾಣಿಕರು, ಇನ್ನೂ 45 ದಿನ ಸುತ್ತು ಬಳಸಿ ಪ್ರಯಾಣಿಸುವುದು ಅನಿವರ್ಯದವಾಗಿದೆ. ಸದ್ಯ ಹೈದರಾಬಾದ್‌ಗೆ ಸಂಚರಿಸುವ ವಾಹನಗಳು ಗದ್ವಾಲ್-ಪಬ್ಬೇರ್-ಕೊತ್ತಕೋಟ ಮರ್ಗಯವಾಗಿ ೩೮ ಕಿ.ಮೀ. ಸುತ್ತು ಬಳಸಿ ರಾಷ್ಟ್ರೀಯ ಹೆದ್ದಾರಿ ತಲುಪಿ ಹೈದರಾಬಾದ್‌ಗೆ ಸಾಗುತ್ತಿವೆ. ಇದರಿಂದ ಬಸ್ ಪ್ರಯಾಣಿಕರು ಹೆಚ್ಚುವರಿ ದರ ಭರಿಸಬೇಕಿದೆ. ರಾಯಚೂರಿನಿಂದ ಯಾದಗಿರಿ -ಕಲಬುರಗಿ ಕಡೆಗೆ ಹೋಗುವ ವಾಹನಗಳು ರಾಯಚೂರು ನಗರದ ಸಾಥ್ ಮೈಲ್, ಕಲಮಲಾ, ದೇವದುರ್ಗ, ಹೂವಿನಹಡಗಿ ಸೇತುವೆ ಮುಖಾಂತರ ಕಲಬುರಗಿಗೆ ಪ್ರಯಾಣಿಸುವ ಮಾರ್ಗವಾಗಿದೆ.
'ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ದೇವಸೂಗೂರಿನ ಕೃಷ್ಣಾನದಿ ಸೇತುವೆಯ ದುರಸ್ತಿ ಕಾಮಗಾರಿ ಕೈಗೆತ್ತಿಕೊಂಡಿದ್ದು ಸಾರ್ವಜನಿಕರು ಸಹಕರಿಸಬೇಕು' ಎಂದು ಹೊಸಪೇಟೆ ರಾಷ್ಟಿಯ ಹೆದ್ದಾರಿ ಪ್ರಾಧಿಕಾರ ಜ್ಯೂನಿಯರ್ ಎಂಜಿನಿಯರ್ ವೆಂಕಟರಾಮಣ್ಣ ಹೇಳಿದರು.
'ದೇವಸೂಗೂರಿನ ಕೃಷ್ಣಾನದಿ ಸೇತುವೆಯ ದುರಸ್ತಿ ಕಾಮಗಾರಿ ಪದೇ ಪದೇ ಕೈಗೊಳ್ಳುವು ದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಗುಣಮಟ್ಟದ ಕಾಮಗಾರಿ ಕೈಗೆತ್ತಿಕೊಂಡು ಜನರ ಸಂಚಾರಕ್ಕೆ ಅನುಕೂಲ ಮಾಡಿಕೊಡಲಿ' ಎಂದು ಕೃಷ್ಣ ಗ್ರಾಮದ ಗಡಿನಾಡು ಕನ್ನಡ ಸಂಘದ ಉಪಾಧ್ಯಕ್ಷ ಅಮರ್ ದೀಕ್ಷಿತ್ ಹೇಳಿದರು.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications