ಮದ್ಯದಂಗಡಿ ತೆರೆದ ಸರ್ಕಾರ ವಿರುದ್ಧ ಸ್ವಾಮೀಜಿ ಅಸಮಾಧಾನ
ರಾಯಚೂರು, ಮೇ 4: ತಿಂಗಳುಗಳ ನಂತರ ಮತ್ತೆ ಮದ್ಯ ಮಾರಾಟ ಶುರುವಾಗಿವೆ. ಮದ್ಯ ಪ್ರಿಯರು ಅಂಗಡಿಗಳ ಮುಂದೆ ಕ್ಯೂ ನಿಂತು ಖರೀದಿ ಮಾಡುತ್ತಿದ್ದಾರೆ. ಸರ್ಕಾರ ಈ ನಿರ್ಧಾರವನ್ನು ರಾಯಚೂರಿನ ಸಿದ್ದಲಿಂಗ ಮಹಾಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
Recommended Video
ಚಿಕ್ಕಸೂಗುರಿನ ಚೌಕಿಮಠದ ಸಿದ್ದಲಿಂಗ ಮಹಾಸ್ವಾಮಿಗಳು ಮದ್ಯ ಮಾರಾಟ ಮಾಡುವ ಸರ್ಕಾರ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ತನ್ನ ಬೊಕ್ಕಸ ತುಂಬಿಸಿಕೊಳ್ಳುವ ಆಸೆಯಿಂದ ಸರ್ಕಾರ ಮದ್ಯದಂಗಡಿಗಳನ್ನ ತೆರೆದಿದೆ. ಈ ರೀತಿ ಮಾಡದೆ, ಇನ್ನಷ್ಟು ದಿನ ಮದ್ಯದ ಅಂಗಡಿಗಳನ್ನು ಮುಚ್ಚಬೇಕಾಗಿತ್ತು ಎಂದು ಅವರು ಹೇಳಿದ್ದಾರೆ.
''ಮದ್ಯಪಾನ ನಿಷೇಧಕ್ಕೆ ಕೆಲ ಸಂಘ ಸಂಸ್ಥೆಗಳು ನಿರಂತರ ಹೋರಾಟ ನಡೆಸಿದ್ದರೂ, ಸಾಧ್ಯವಾಗದ್ದನ್ನ ಕೊರೊನಾ ವೈರಸ್ ಮಾಡಿತ್ತು. ಲಾಕ್‌ಡೌನ್ ವೇಳೆ ಶೇಕಡ 90ರಷ್ಟು ಜನ ಸಂಪೂರ್ಣವಾಗಿ ಮದ್ಯಪಾನ ತ್ಯಜಿಸಿದ್ದರು. ಇನ್ನಷ್ಟು ದಿನ ಮುಂದುವರೆದಿದ್ದರೆ ಉಳಿದ ಜನರು ಮದ್ಯಪಾನ ಮಾಡುವುದನ್ನು ಬಿಡುತ್ತಿದ್ದರು.'' ಎಂದಿದ್ದಾರೆ.

ಕೊರೊನಾ ವೈರಸ್ ತಡೆಗೆ ಮಠಗಳು ನೀಡಿರುವ ಸಲಹೆಯನ್ನು ಸರ್ಕಾರ ನಿರ್ಲಕ್ಷಾ ಮಾಡಿದೆ. ಅದನ್ನು ಪರಿಗಣಿಸಬೇಕು. ಶ್ರೀಮಂತ ಮಠಗಳಿಗೆ ಮಾತ್ರವಲ್ಲದೆ ನಮ್ಮ ಮಠಗಳಿಗೂ ಅನುದಾನ ನೀಡಬೇಕು ಎಂದಿದ್ದಾರೆ.
ಇಂದಿನಿಂದ ಮದ್ಯ ಮಾರಾಟ ಪ್ರಾರಂಭವಾಗಿದ್ದು, ಬೆಂಗಳೂರು ಸೇರಿದಂತೆ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮದ್ಯದ ಅಂಗಡಿಗಳಲ್ಲಿ ಜನ ಸಾಲುಗಟ್ಟಿ ನಿಂತು ಮದ್ಯ ಪಡೆದುಕೊಳ್ಳುತ್ತಿದ್ದಾರೆ.












Click it and Unblock the Notifications