ರಾಯಚೂರು ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ಬಿಯರ್ ಮಾರಾಟ, 2022ರ ದಾಖಲೆ ಉಡೀಸ್, ಎಲ್ಲೆಲ್ಲಿ ಎಷ್ಟು?
ರಾಯಚೂರು, ಜೂನ್, 02: ರಾಯಚೂರು ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತ ಬಾರಿ ದಾಖಲೆ ಮಟ್ಟದಲ್ಲಿ ಬಿಯರ್ ಮಾರಾಟ ಆಗಿದೆ. ಹಾಗಾದರೆ ಎಲ್ಲೆಲ್ಲಿ ಎಷ್ಟು ಬಿಯರ್ ಬಾಕ್ಸ್‌ಗಳು ಮಾರಾಟ ಆಗಿವೆ ಹಾಗೂ ಇದಕ್ಕೆ ಪ್ರಮುಖ ಕಾರಣ ಏನು ಅನ್ನುವ ಸಂಪೂರ್ಣ ವಿವರವನ್ನು ಇಲ್ಲಿ ತಿಳಿಯಿರಿ.
ಕೊರೊನಾ ಕಾರಣದಿಂದ ಕಳೆದ ಎರಡು ವರ್ಷ ಮದ್ಯಪ್ರಿಯರು ಬೇಸಿಗೆಯಲ್ಲಿ ಮದ್ಯ ಸೇವನೆ ಕಡಿಮೆ ಮಾಡಿದ್ದರು. ಆದರೆ ಈ ಬಾರಿ ರಾಯಚೂರು ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತ ಎರಡು ತಿಂಗಳಲ್ಲಿ ಸುಮಾರು 3.29 ಲಕ್ಷ ಬಾಕ್ಸ್ ಬಿಯರ್ ಮಾರಾಟ ಮಾಡಿ ದಾಖಲೆ ನಿರ್ಮಾಣ ಆಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಪ್ರತಿ ವರ್ಷ ಬೇಸಿಗೆ ಕಾಲದಲ್ಲಿ ಬಿಯರ್ ಮಾರಾಟ ಹೆಚ್ಚಾಗುತ್ತಲೇ ಇದೆ. ಅನೇಕ ಮದ್ಯಪ್ರಿಯರು ಬೇಸಿಗೆಯಲ್ಲಿ ಕೂಲ್ ಆಗಿರಲು ಬಿಯರ್ ಕುಡಿಯಲು ಪ್ರಾರಂಭ ಮಾಡಿದ್ದಾರೆ. ಇದರಲ್ಲಿ ಆಲ್ಕೋಹಾಲ್ ಪ್ರಮಾಣ ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಮತ್ತು ಇದು ಆರೋಗ್ಯಕ್ಕೆ ಹಾನಿಕಾರಕ ಅಲ್ಲ ಎಂಬ ತಪ್ಪು ಕಲ್ಪನೆಯಿಂದ ಬೇಸಿಗೆಯಲ್ಲಿ ಬಿಯರ್ ಅನ್ನು ಜನರು ಹೆಚ್ಚಾಗಿ ಕುಡಿಯುತ್ತಿದ್ದಾರೆ.
ರಾಯಚುರು ಜಿಲ್ಲೆಯಲ್ಲಂತೂ ಯುವ ಜನತೆ ಬಿಯರ್ ಅನ್ನು ಎಳನೀರಿನಂತೆ ಕುಡಿಯುತ್ತಿರುವುದು ಬೆಳಕಿಗೆ ಬಂದಿದೆ. ಪ್ರತಿ ವರ್ಷದ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಬಿಯರ್ ಮಾರಾಟ ಹೆಚ್ಚಾಗಿರುತ್ತದೆ. ಈ ವರ್ಷ ಈಗಾಗಲೇ ಬೇಸಿಗೆಯ ಬಿಸಿಲಿಗೆ ಜಿಲ್ಲೆಯ ಜನತೆ ತತ್ತರಿಸಿದ್ದು, ರಾಜ್ಯದಲ್ಲೇ ಅತಿ ಹೆಚ್ಚಿನ ತಾಪಮಾನ ಸಿಂಧನೂರಿನ ಸಾಲಗುಂದಾದಲ್ಲಿ 45.6 ಡಿಗ್ರಿ ದಾಖಲಾಗಿತ್ತು. ಜಿಲ್ಲೆಯ ಎಲ್ಲೆಡೆ 43ರಿಂದ 45 ಡಿಗ್ರಿ ತಾಪಮಾನ ದಾಖಲಾಗಿದ್ದು, ಹೀಗೆ ಬಿಸಿಲಿನ ಝಳ ಹೆಚ್ಚಳದಿಂದ ಜನರು ಬಿಯರ್ ಮೊರೆ ಹೋಗಲು ಕಾರಣವಾಗಿದೆ.
ಈ ಬಾರಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಯರ್ ಮಾರಾಟ ಮಾಡಲಾಗಿದ್ದು, ಕಳೆದ ವರ್ಷ 6,12,709 ಬಾಕ್ಸ್ ಮಾರಾಟ ಆಗಿದ್ದರೆ, ಈ ಬಾರಿ 8,71,714 ಬಾಕ್ಸ್ ಬಿಯರ್‌ಗಳು ಮಾರಾಟ ಆಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸುಮಾರು 2,59,005 ಬಿಯರ್ ಬಾಕ್ಸ್‌ಗಳ ಮಾರಾಟ ಹೆಚ್ಚಾಗಿದೆ ಎಂದು ಅಬಕಾರಿ ಇಲಾಖೆ ಮಾಹಿತಿ ನೀಡಿದೆ.
ಎಲ್ಲೆಲ್ಲಿ ಎಷ್ಟು ಬಿಯರ್ ಮಾರಾಟ?
1. ರಾಯಚೂರು - 3,29,773
2. ಮಾನ್ವಿ 2,55,483
3. ಸಿಂಧನೂರು 1,38,915,
4. ಲಿಂಗಸೂಗೂರು 1,47,534 ಬಿಯರ್ ಬಾಕ್ಸ್‌ಗಳ ಮಾರಾಟ
ಕೇವಲ ಎರಡೇ ತಿಂಗಳಲ್ಲಿ ಬಿಯರ್ ಮಾರಾಟ ಹೆಚ್ಚಾಗಿದ್ದು, ಇದು ಕಳೆದ ವರ್ಷಕ್ಕಿಂತ ಹೆಚ್ಚಿನ ದಾಖಲೆ ಆಗಿದೆ ಎಂದು ವೈನ್ ಶಾಪ್ ಮಾಲೀಕರು ತಿಳಿಸಿದ್ದಾರೆ. ಮತ್ತೊಂದೆಡೆ ಬಿಯರ್ ಕುಡಿಯುವ ಚಟ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಬಿಸಿಲಿನ ವಾತಾವರಣದಲ್ಲಿ ಮದ್ಯಪಾನ ಮಾಡುವುದು ದೈಹಿಕ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ಪ್ರತಿ ವರ್ಷ ಬೇಸಿಗೆಯಲ್ಲಿ ಕಡಿಮೆ ದರದಲ್ಲಿ ಬಿಯರ್ ದೊರೆಯುತ್ತದೆ. ಇದರಲ್ಲಿ ನಾನಾ ಬಗೆಯ ಬಿಯರ್ ದೊರೆಯುತ್ತಿದ್ದು, ಎರಡು ಕಂಪನಿಯ ಬಿಯರ್‌ಗಳು ಮಾತ್ರ ಕೇವಲ ನೂರು ರೂಪಾಯಿಗೆ ದೊರೆಯುತ್ತದೆ. ಆಂಧ್ರಪ್ರದೇಶ ಮತ್ತು ತೆಲಂಗಾಣದ ಗಡಿಯಲ್ಲಿ ಇರುವ ಜಿಲ್ಲೆಯ ಗ್ರಾಮಸ್ಥರು ಕೇವಲ ಹತ್ತು ರೂಪಾಯಿ ದೊರೆಯುವ ಸೇಂದಿ ಮೊರೆ ಹೋಗಿದ್ದಾರೆ. ಅಬಕಾರಿ ಇಲಾಖೆ ಜಾಗೃತಿ ಮೂಡಿಸಿದರೂ ಕಳ್ಳತನದಿಂದ ಸೇಂದಿಯನ್ನು ಪಕ್ಕದ ರಾಜ್ಯಗಳಿಂದ ತಂದು ಸೇವನೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.












Click it and Unblock the Notifications