ಸೆರಂ ಇನ್ ಸ್ಟಿಟ್ಯೂಟ್ ಬೆಂಕಿ ಅವಘಡ; ಸಿಇಒ ಅದಾರ್ ಪೂನವಾಲಾ ಸ್ಪಷ್ಟನೆ...

ಪುಣೆ, ಜನವರಿ 21: ಭಾರತದಲ್ಲಿ ಕೊರೊನಾ ಲಸಿಕೆ ಕೋವಿಶೀಲ್ಡ್ ಉತ್ಪಾದನೆಯಲ್ಲಿ ತೊಡಗಿಕೊಂಡಿದ್ದ ಸೆರಂ ಇನ್ ಸ್ಟಿಟ್ಯೂಟ್ ನಲ್ಲಿ ಗುರುವಾರ ಮಧ್ಯಾಹ್ನ ಬೆಂಕಿ ಅವಘಡ ಸಂಭವಿಸಿದೆ.

ಸಂಸ್ಥೆಯ ಟರ್ಮಿನಲ್ ಗೇಟ್ 1 ಒಳಗಿನ SEZ 3 ಕಟ್ಟಡದ ನಾಲ್ಕನೇ ಹಾಗೂ ಐದನೇ ಮಹಡಿಯಲ್ಲಿ ಮಧ್ಯಾಹ್ನದ ವೇಳೆ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಘಟನೆ ಬಗ್ಗೆ ಸೆರಂ ಇನ್ ಸ್ಟಿಟ್ಯೂಟ್ ನ ಸಿಇಒ ಅದಾರ್ ಪೂನವಾಲಾ ಪ್ರತಿಕ್ರಿಯೆ ನೀಡಿದ್ದಾರೆ.

"ನಿಮ್ಮೆಲ್ಲರ ಕಾಳಜಿ ಹಾಗೂ ಪ್ರಾರ್ಥನೆಗೆ ಧನ್ಯವಾದಗಳು. ಬೆಂಕಿ ಅವಘಡ ಸಂಭವಿಸಿದ್ದು ದುರದೃಷ್ಟಕರ. ಆದರೆ ಬಹುಮುಖ್ಯ ಸಂಗತಿ ಎಂದರೆ ಈ ಘಟನೆಯಲ್ಲಿ ಯಾವುದೇ ಜೀವ ಹಾನಿ ಅಥವಾ ಯಾರೂ ಗಂಭೀರವಾಗಿ ಗಾಯಗೊಂಡಿರುವ ವರದಿಯಾಗಿಲ್ಲ. ಕಟ್ಟಡದ ಕೆಲವು ಭಾಗಗಳಿಗೆ ಮಾತ್ರ ಹಾನಿಯಾಗಿದೆ" ಎಂದು ಪೂನಾವಾಲ ತಿಳಿಸಿದ್ದಾರೆ.

 SII CEO Adar Poonawalla Reaction on Fire Accident at Serum Institute of Technology In Pune

ಘಟನೆಯಲ್ಲಿ ಕೋವಿಶೀಲ್ಡ್ ಲಸಿಕೆಗಳಿಗೆ ಹಾಗೂ ಉತ್ಪಾದನಾ ಘಟಕಕ್ಕೆ ಯಾವುದೇ ತೊಂದರೆಯಾಗಿಲ್ಲ. ಇದಕ್ಕೆ ಕಾರಣೀಕರ್ತರಾದ ಪುಣೆ ನಗರ ಪೊಲೀಸರಿಗೆ ಹಾಗೂ ಅಗ್ನಿಶಾಮಕ ಸಿಬ್ಬಂದಿಗೆ ಧನ್ಯವಾದ ಎಂದು ಹೇಳಿದ್ದಾರೆ.

ಲಸಿಕೆ ಉತ್ಪಾದನೆ ಮಾಡುತ್ತಿರುವ ಘಟಕಕ್ಕೆ ಈ ಕಟ್ಟಡ ಹೊಂದಿಕೊಂಡಿದೆ. ಸುಮಾರು ನಾಲ್ಕು ಮಂದಿ ಕಟ್ಟಡದ ಒಳಗೆ ಸಿಲುಕಿಕೊಂಡಿದ್ದು, ಮೂರು ಮಂದಿಯನ್ನು ರಕ್ಷಿಸಿರುವುದಾಗಿ ಅಗ್ನಿ ಶಾಮಕ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದ್ದು, ಒಂದು ಗಂಟೆಗಳ ಒಳಗೆ ಬೆಂಕಿ ನಿಯಂತ್ರಣಕ್ಕೆ ಬರುವುದಾಗಿ ಪುಣೆ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+