ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಣೆ: ಶೇ.50ರಷ್ಟು ಜನರಲ್ಲಿದೆ ಕೊರೊನಾ ವಿರುದ್ಧದ ಆ್ಯಂಟಿಬಾಡಿ

|
Google Oneindia Kannada News

ಪುಣೆ, ಆಗಸ್ಟ್ 18: ಪುಣೆಯ ಸೆರಾಲಾಜಿಕಲ್ ಸರ್ವೇ ನಡೆಸಿರುವ ಅಧ್ಯಯನ ಪ್ರಕಾರ ಪುಣೆಯಲ್ಲಿ ಶೇ.50ರಷ್ಟು ಮಂದಿಗೆ ಕೊರೊನಾ ಸೋಂಕು ತಗುಲಿದೆ. ಅಂತೆಯೇ ಅವರ ದೇಹದಲ್ಲಿ ಆ್ಯಂಟಿ ವೈರಸ್ ಉತ್ಪತ್ತಿಯಾಗಿದೆ ಎಂದು ತಿಳಿಸಿದೆ.

Recommended Video

Israel ಒಪ್ಪಂದದ ಬಗ್ಗೆ UAE ಮೇಲೆ ದಾಳಿ ಮಾಡುವುದಾಗಿ Iran ಬೆದರಿಕೆ ಹಾಕಿದೆ | Oneindia Kannada

ದೆಹಲಿ, ಮುಂಬೈನಲ್ಲಿ ನಡೆಸಿದ ಸಮೀಕ್ಷೆಗಿಂತ ಇದರ ಸಂಖ್ಯೆ ಹೆಚ್ಚಾಗಿದ್ದರೂ ಆಶ್ಚರ್ಯವೇನೂ ಆಗುತ್ತಿಲ್ಲ. ದೆಹಲಿಯಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಶೇ.23ರಷ್ಟು ಮಂದಿ ಆ್ಯಂಟಿಬಾಡಿ ಯನ್ನು ಹೊಂದಿದ್ದಾರೆ ಎಂದು ತಿಳಿದುಬಂದಿತ್ತು. ಮುಂಬೈ ಸಮೀಕ್ಷೆಯಲ್ಲಿ ಶೇ.40ರಷ್ಟು ಮಂದಿ ಆಂಟಿಬಾಡಿಯನ್ನು ಹೊಂದಿರುವ ಮಾಹಿತಿ ಲಭ್ಯವಾಗಿತ್ತು.

ಭಾರತದ ಕೊರೊನಾ ಹಾಟ್‌ಸ್ಪಾಟ್ ಮುಂಬೈ ಅಲ್ಲ, ಮತ್ಯಾವ್ದು?ಭಾರತದ ಕೊರೊನಾ ಹಾಟ್‌ಸ್ಪಾಟ್ ಮುಂಬೈ ಅಲ್ಲ, ಮತ್ಯಾವ್ದು?

ಕಳೆದ ಕೆಲವು ವಾರಗಳ ಹಿಂದೆ ದೆಹಲಿ, ಮುಂಬೈನಲ್ಲಿ ಸಮೀಕ್ಷೆ ನಡೆಸಿದ್ದರು. ಪುಣೆಯಲ್ಲಿ ಹೆಚ್ಚು ಕೊರೊನಾ ಸೋಂಕಿರುವ ಪ್ರದೇಶದಲ್ಲಿ ಸಮೀಕ್ಷೆ ನಡೆಸಲಾಗಿದೆ.ಹೆಚ್ಚು ಜನಸಂದಣಿ ಇರುವ ಪ್ರದೇಶದಲ್ಲಿ ಕೊರೊನಾ ಸೋಂಕು ಬೇಗ ಹರಡುತ್ತದೆ. ಶೇ.80ರಷ್ಟು ಜನರಲ್ಲಿ ಕೊರೊನಾ ಸೋಂಕಿನ ಯಾವುದೇ ಲಕ್ಷಣಗಳೇ ಇಲ್ಲ.

Pune Shows 50 Percent Have Antibodies Against Covid-19

ಹಲವು ತಿಂಗಳಳ ಕಾಲ ಯಾವುದೇ ಆರೋಗ್ಯಕ್ಕೆ ಸಂಬಂಧಿಸಿದ ತೊಂದರೆ ಬಾಧಿಸುತ್ತಿಲ್ಲ. ಎಲ್ಲಾ ಆಂಟಿಬಾಡಿಗಳು ರಕ್ಷಣೆ ಮಾಡುವುದಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.

ಭಾರತದ ಕೊರೊನಾ ಹಾಟ್‌ಸ್ಪಾಟ್ ಮುಂಬೈ ಅಲ್ಲ ಬದಲಾಗಿ ಪುಣೆ. ಭಾನುವಾರ ಅತಿ ಹೆಚ್ಚು ಕೊರೊನಾ ಸೋಂಕಿತ ಪ್ರಕರಣಗಳು ಪುಣೆಯಲ್ಲಿ ಪತ್ತೆಯಾಗಿದೆ. ಇಷ್ಟು ದಿನ ಮುಂಬೈನಲ್ಲಿ ನಿತ್ಯ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದವು.

ಮಹಾರಾಷ್ಟ್ರವು ದಕ್ಷಿಣ ಆಫ್ರಿಕಾವನ್ನು ಹಿಂದಕ್ಕೆ ಹಾಕಿದ್ದು 5,95,865 ಪ್ರಕರಣಗಳಿವೆ. ಅಮೆರಿಕದಲ್ಲಿ 5,566.632, ಬ್ರೆಜಿಲ್ 3,340,197, ರಷ್ಯಾದಲ್ಲಿ 922,853 ಪ್ರಕರಣಗಳಿವೆ.

English summary
India Coronavirus Cases: The results of a serological survey in Pune has indicated that over 50 per cent of the population could already have been infected by novel Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X