ಹೆತ್ತ ಮಗನನ್ನೇ ಹೊಡೆದು ಕೊಂದಳಾ ತಾಯಿ!
ಪುಣೆ, ಆಗಸ್ಟ್, 11 : ಮಗುವನ್ನು ಹೆತ್ತು, ಹೊತ್ತು, ಸಮಾಜದಲ್ಲಿ ಅವರನ್ನು ಉನ್ನತ ಹುದ್ದೆ ತಲುಪುವಂತೆ ಮಾಡಲು ಕಷ್ಟ ಪಡುವ ತಾಯಂದಿರುವ ನಮ್ಮ ಸುತ್ತ ಮುತ್ತ ಸಾಕಷ್ಟು ಮಂದಿ ಸಿಗ್ತಾರೆ. ಆದರೆ ತನ್ನ ಮಗನನ್ನು ಕೊಂದ ತಾಯಿ ನೋಡಿದ್ದೀರಾ?
ನಿಜ..ಅಂತಹದ್ದೊಂದು ಭಯಾನಕ ಘಟನೆ ಪುಣೆಯಲ್ಲಿ ನಡೆದಿದೆ. 36 ವರ್ಷದ ರಾಖಿ ಬಾಲ್ ಪಾಂಡೆ ಎಂಬಾಕೆ ತನ್ನ 13ವರ್ಷದ ಚೈತನ್ಯ ಎಂಬ ಮಗನನ್ನು ಬ್ಯಾಟಿನಿಂದ ಹೊಡೆದು ಆತನ ಸಾವಿಗೆ ಕಾರಣಳಾಗಿದ್ದಾಳೆ ಎಂಬ ಆರೋಪ ಎದುರಿಸುತ್ತಿದ್ದಾಳೆ.[ನಾಪತ್ತೆಯಾದ ತಾಯಿ ಹುಡುಕಲು ವೆಬ್ ಸೈಟ್ ತೆರೆದ ಮಗ]

ತಾಯಿ ರಾಖಿ ಮತ್ತು ಮಗ ಚೈತನ್ಯ ಇಬ್ಬರು ಸುಮಿತ್ ಎಂಬುವರ ಫ್ಲ್ಯಾಟ್ ನಲ್ಲಿ ವಾಸಿಸುತ್ತಿದ್ದರು. ಈತನನ್ನು ಮತ್ತು ಮಗುವಿನ ತಾಯಿಯನ್ನು ಕೊಲೆ ಆರೋಪದ ಬಂಧಿಸಿದ ಪುಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇಬ್ಬರನ್ನು ಹೆಚ್ಚಿನ ತನಿಖೆಗಾಗಿ ಆಗಸ್ಟ್ 12ರ, ಬುಧವಾರದಂದು ಕೋರ್ಟ್‌ಗೆ ಹಾಜರು ಪಡಿಸಲಾಗುತ್ತದೆ.
ಏನಿದು ಘಟನೆ?
ಚೈತನ್ಯ ಬಹಳ ಒಳ್ಳೆಯ ಹುಡುಗ. ತಾಯಿ ರಾಖಿ ಯಾವಾಗಲೂ ಇಲ್ಲಸಲ್ಲದ ಕಾರಣಕ್ಕೆ ಮಗ ಚೈತನ್ಯನಿಗೆ ಭಾರೀ ಥಳಿಸುತ್ತಿದ್ದಳು. ಈ ಬಾರಿ ಮಗ ತನ್ನೆದುರಿಗೆ ಕೆಲವು ಲೈಂಗಿಕ ಚರ್ಯೆಗಳನ್ನು ಪ್ರದರ್ಶಿಸಿದ ಎಂಬ ನೆಪವೊಡ್ಡಿ ಕ್ರಿಕೆಟ್ ಬ್ಯಾಟಿನಿಂದ ಹಿಗ್ಗಾಮುಗ್ಗಾ ಬಾರಿಸಿದ ಪರಿಣಾಮ ಎದೆ ಹಾಗೂ ಹೊಟ್ಟೆಗೆ ಸಾಕಷ್ಟು ಹೊಡೆತ ಬಿದ್ದು, ಅದರ ನೋವನ್ನು ತಡೆದುಕೊಳ್ಳಲಾಗದ ಪುಟ್ಟ ಬಾಲಕ ಮೃತಪಟ್ಟಿದ್ದಾನೆ.
ಆದರೆ ಮಗನನ್ನು ಆಸ್ಪತ್ರೆಗೆ ಕರೆದುಕೊಂಡ ಹೋದ ಸಮಯದಲ್ಲಿ ಬಾತ್ ರೂಮಿನಲ್ಲಿ ಬಿದ್ದು ನೋವಿನಿಂದ ಒದ್ದಾಡುತ್ತಿದ್ದ ಎಂಬ ಕಾರಣವೊಡ್ಡಿ ಆಸ್ಪತ್ರೆಗೆ ದಾಖಲಿಸಿದ್ದಾಳೆ. ಆದರೆ ಮೃತಪಟ್ಟ ಮಗುವಿನ ಪೋಸ್ಟ್ ಮಾರ್ಟಂ ಕೈಗೊಂಡ ವೈದ್ಯರು ಹೊಡೆತದಿಂದ ಸಾವನ್ನಪ್ಪಿರುವುದಾಗಿ ಪೊಲೀಸರಿಗೆ ವರದಿ ನೀಡಿದ್ದಾರೆ. ಈ ಆಧಾರದ ಮೇಲೆ ರಾಖಿಯನ್ನು ಪೊಲೀಸರು ಬಂಧಿಸಿದ್ದಾರೆ.
ರಾಖಿಯ ತಾಯಿ, 'ರಾಖಿ ಯಾವಾಗಲೂ ಮಗುವಿನ ಮೇಲೆ ಹಗೆ ಸಾಧಿಸುತ್ತಾ ಅನುಚಿತವಾಗಿ ವರ್ತಿಸುತ್ತಿದ್ದಳು. ಒಮ್ಮೆ ಹೀಗೆ ಹೊಡೆಯುತ್ತಿದ್ದ ವೇಳೆ ಚೈತನ್ಯನನ್ನು ನಾನ್ನೊಟ್ಟಿಗೆ ನಾಗಪುರಕ್ಕೆ ಕರೆದುಕೊಂಡುಹೋಗಿದ್ದೆ.
ಮಗುವನ್ನು ಬಿಡಿಸಲು ಹೋದಾಗ ಅಪಹರಣ ಆರೋಪದ ಮೇಲೆ ಪೊಲೀಸ್‌ಗೆ ದೂರು ನೀಡುವುದಾಗಿ ಬೆದರಿಸುತ್ತಿದ್ದಳು. ಹಾಗೆಯೇ ನೆರೆಹೊರೆಯವರ ಮೇಲೆಯೂ ಎರಡು ಮೂರು ಬಾರಿ ಇದೇ ರೀತಿ ಹೆದರಿಸಿದ್ದಳು' ಎಂದಿದ್ದಾರೆ.












Click it and Unblock the Notifications