ಗೆಳಯನ ಜತೆ ಕಿತ್ತಾಟ, ಬೆಂಗಳೂರಿನ ಟೆಕ್ಕಿ ಪುಣೆಯಲ್ಲಿ ಆತ್ಮಹತ್ಯೆ

Posted By:
Subscribe to Oneindia Kannada

ಪುಣೆ, ಮೇ 18: ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ 23 ವರ್ಷದ ಟೆಕ್ಕಿಯೊಬ್ಬರು ತನ್ನ ಬಾಯ್ ಫ್ರೆಂಡ್ ಬಂದು ಭೇಟಿಯಾಗಿಲ್ಲ ಒಂದೇ ಕಾರಣಕ್ಕೆ ಮನನೊಂದು ಮಹಡಿಯಿಂದ ಹಾರಿ ಪ್ರಾಣಬಿಟ್ಟಿರುವ ಘಟನೆ ನಡೆದಿದೆ.

ಪುಣೆಯ ಕೊಂಡ್ವಾ ಬುದ್ರಕ್ ನ ಶಾಂತಿನಗರದ ಸೊಸೈಟಿಯ ಕಟ್ಟಡವೊಂದರ ನಾಲ್ಕನೇ ಮಹಡಿಯಿಂದ ಬಿದ್ದು ಜುಹಿ ನಿತಿನ್ ಗಾಂಧಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪುಣೆಯ ಕಾಲೇಜೊಂದರಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಪದವಿ ಪಡೆದು, ಬೆಂಗಳೂರಿನ ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರು.

Pune: Bengaluru Techie commits suicide after fight with boyfriend

ಜುಹಿ ಅವರ ತಾಯಿ ಇತ್ತೀಚಿಗೆ ಶಸ್ತ್ರ ಚಿಕಿತ್ಸೆಗೊಳಗಾಗಿದ್ದರು. ತಾಯಿಯನ್ನು ಕಾಣಲು ಮೂರು ದಿನಗಳ ಮಟ್ಟಿಗೆ ರಜೆ ಪಡೆದು ಪುಣೆಗೆ ಬಂದಿದ್ದರು.ಪುಣೆಯಲ್ಲಿರುವ ಗೆಳೆಯನನ್ನು ಭೇಟಿ ಮಾಡಿದ್ದಾರೆ. ಇಬ್ಬರು ಯಾವುದೋ ಕಾರಣಕ್ಕೆ ಜಗಳವಾಗಿದೆ. ಇದಾದ ಬಳಿಕ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಕಿರಣ್ ತಪಾಸೆ ಹೇಳಿದ್ದಾರೆ.

ಜುಹಿ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಯಾವುದೇ ಡೆತ್ ನೋಟ್ ದೊರಕಿಲ್ಲ. ಜುಹಿಯ ಮೊಬೈಲ್ ಪರೀಕ್ಷಿಸಿದಾಗ ಕೊನೆಯ ಬಾರಿಗೆ ಗೆಳಯನೊಂದಿಗೆ ಮಾತನಾಡಿದ್ದು ತಿಳಿದು ಬಂದಿದೆ. ಯುವಕನ್ನು ಕರೆದು ವಿಚಾರಣೆ ನಡೆಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.

ಯೆವಲೆವಾಡಿಯಲ್ಲಿರುವ ಸಿನ್ಹಾಗಡ್ ಕಾಲೇಜಿನಲ್ಲಿ ಇಬ್ಬರು ಸಹಪಾಠಿಗಳಾಗಿದ್ದರು. ಕಳೆದ ವರ್ಷ ಜುಹಿ ಪಾಸ್ ಆಗಿ ಬೆಂಗಳೂರು ಸೇರಿದ್ದರು. ಬಹುಕಾಲದ ನಂತರ ಭೇಟಿ ಆಗಲು ಬಂದಿದ್ದ ಗೆಳೆತಿಗೆ ಪರೀಕ್ಷೆಯ ನೆಪವೊಡ್ಡಿ ಅಪಾರ್ಟ್ಮೆಂಟ್ ಗೆ ಬರಬೇಡ ಎಂದು ಹೇಳಿದ್ದಾನೆ. ಆದರೆ, ಮಾತು ಕೇಳದೆ ಬಂದು ಜಗಳವಾಡಿಕೊಂಡ ಜುಹಿ, ಕೊನೆಗೆ ಸಾವನ್ನಪ್ಪಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A 23-year-old software engineer committed suicide by jumping off the fourth floor of a building after a fight with her boyfriend in Pune on Wednesday. The girl used to work in Bengaluru as a software professional
Please Wait while comments are loading...