ಮನೆ ನೋಡಿಕೊಳ್ಳಲಾಗದವ ದೇಶ ನಿಭಾಯಿಸಲಾರ: ಗಡ್ಕರಿ

ನವದೆಹಲಿ, ಫೆಬ್ರವರಿ 4 : ಈಡೇರಿಸಲು ಸಾಧ್ಯವಾಗದ ಕನಸುಗಳನ್ನು ಬಿತ್ತಿದರೆ ಜನರಿಂದ ಹೊಡೆತ ತಿನ್ನಬೇಕಾಗುತ್ತದೆ. ಹೀಗಾಗಿ ಈಡೇರಿಸಲು ಸಾಧ್ಯವಾಗುವಂತಹ ಕನಸುಗಳನ್ನು ಮಾತ್ರ ಕಾಣಿ ಎಂದು ನಿತಿನ್ ಗಡ್ಕರಿ ಗಣರಾಜ್ಯೋತ್ಸವದ ಭಾಷಣದ ವೇಳೆ ಹೇಳಿದ್ದಾರೆ.

ಆದರೆ, ಅವರ ಮಾತುಗಳಿಗೆ ಅನವಶ್ಯಕವಾಗಿ ನಾನಾ ಅರ್ಥಗಳನ್ನು ಕಲ್ಪಿಸಲಾಗುತ್ತಿದೆ.

Nitin Gadkari in nagpur abvp cant take care of home cannot manage country

ನಾಗಪುರದಲ್ಲಿ ಶನಿವಾರ ಬಿಜೆಪಿಯ ವಿದ್ಯಾರ್ಥಿ ಘಟಕ ಎಬಿವಿಪಿಯ ಮಾಜಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಗಡ್ಕರಿ, ಪಕ್ಷದ ಕಾರ್ಯಕರ್ತರು ಮೊದಲು ತಮ್ಮ ಆಂತರಿಕ ಜವಾಬ್ದಾರಿಗಳನ್ನು ನಿಭಾಯಿಸಬೇಕು ಎಂದು ಸಲಹೆ ನೀಡಿದ್ದ ನಿತಿನ್ ಗಡ್ಕರಿ, 'ಮನೆಯ ಕಾಲಜಿ ವಹಿಸಲಾಗದ ವ್ಯಕ್ತಿ ದೇಶವನ್ನು ನಿಭಾಯಿಸಲಾರ' ಎಂದು ಹೇಳಿದ್ದಾರೆ.

ದೇಶಕ್ಕಾಗಿ, ಬಿಜೆಪಿಗಾಗಿ ಜೀವನವನ್ನು ಮುಡಿಪಾಗಿಡಲು ಬಯಸುತ್ತೇವೆ ಎಂದು ಹೇಳುವ ಅನೇಕ ಜನರನ್ನು ನಾನು ಭೇಟಿ ಮಾಡಿದ್ದೇನೆ. ಆಗ ಒಬ್ಬ ಒಬ್ಬ ವ್ಯಕ್ತಿಗೆ ನಾನು ಕೇಳಿದ್ದೆ, 'ನೀನೇನು ಮಾಡುತ್ತಿರುವೆ? ನಿನ್ನ ಕುಟುಂಬದಲ್ಲಿ ಯಾರು ಯಾರು ಇದ್ದಾರೆ?'. ಅದಕ್ಕೆ ಆತ, 'ವ್ಯಾಪಾರ ಚೆನ್ನಾಗಿ ನಡೆಯುತ್ತಿರಲಿಲ್ಲ ಎಂದು ಅಂಗಡಿ ಮುಚ್ಚಿದೆ. ಮನೆಯಲ್ಲಿ ನನ್ನ ಹೆಂಡತಿ ಮಕ್ಕಳು ಇದ್ದಾರೆ' ಎಂದ.

'ಆಗ ಮೊದಲು ನಿನ್ನ ಕುಟುಂಬದ ಬಗ್ಗೆ ಕಾಳಜಿ ತೆಗೆದುಕೋ. ಏಕೆಂದರೆ ಮನೆಯನ್ನು ನೋಡಿಕೊಳ್ಳಲಾಗದವನಿಂದ ದೇಶವನ್ನು ನಿಭಾಯಿಸಲು ಸಾಧ್ಯವಿಲ್ಲ. ಹೀಗಾಗಿ ಮೊದಲು ನಿಮ್ಮ ಮನೆ ನೋಡಿಕೊಳ್ಳಿ. ನಿಮ್ಮ ಮಕ್ಕಳನ್ನು ಸರಿಯಾಗಿ ಬೆಳೆಸಿ. ಬಳಿಕ ನೀವು ದೇಶ ಮತ್ತು ಪಕ್ಷಕ್ಕಾಗಿ ಕೆಲಸ ಮಾಡಿ ಎಂದು ಸಲಹೆ ನೀಡಿದ್ದೆ' ಎಂದು ಗಡ್ಕರಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+