• search
  • Live TV
ಪುಣೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕ್ಯಾಲಿಫೋರ್ನಿಯಾ ದೋಣಿಯಲ್ಲಿ ಅಗ್ನಿ ದುರಂತ: ಭಾರತೀಯ ದಂಪತಿ ಸಾವು

|

ನಾಗ್ಪುರ, ಸೆಪ್ಟೆಂಬರ್ 09: ಸೋಮವಾರ ಅಮೆರಿಕದ ಕ್ಯಾಲಿಫೋರ್ನಿಯಾದ ಸಾಂತಾ ಕ್ರೂಜ್ ದ್ವೀಪದಲ್ಲಿ ದೋಣಿಯೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ 34 ಮಂದಿ ಸಾವಿಗೀಡಾಗಿದ್ದು, ಇವರಲ್ಲಿ ಭಾರತೀಯ ದಂಪತಿಯೂ ಸೇರಿದ್ದಾರೆ ಎನ್ನಲಾಗಿದೆ. ಆದರೆ ಈ ಕುರಿತು ಅಧಿಕೃತ ಮಾಹಿತಿ ಲಭ್ಯವಾಗಿಲ್ಲ ಎಂದು ದಂಪತಿಯ ಕುಟುಂಬಸ್ಥರು ತಿಳಿಸಿದ್ದಾರೆ.

ಸ್ಕೂಬಾ ಡೈವರ್ಸ್ ಗಳನ್ನು ಹೊತ್ತಿದ್ದ ದೋಣಿಗೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿತ್ತು, ನಂತರ ದೋಣಿ ನೀರಿನಲ್ಲಿ ಮುಳುಗಿದ ಪರಿಣಾಮ ಈ ದುರಂತ ಸಂಭವಿಸಿದೆ.

"ಆ ಭೀಕರ ಅಪಘಾತವನ್ನು ಕಣ್ಣಾರೆ ಕಂಡೆ, ಅಮ್ಮ ಕಿಟಕಿಯಿಂದ ಮಗುವನ್ನು ತಳ್ಳುತ್ತಿದ್ದರು!"

ಮಹಾರಾಷ್ಟ್ರದ ನಾಗ್ಪುರ ಮೂಲದ ಸಂಜೀರಿ ದಿಯೋಪುಜಾರಿ ಮತ್ತು ಕೌಸ್ತುಭ ನಿರ್ಮಲ್ ಎಂಬುವವರು ಎರಡು ವರ್ಷಗಳಿಂದ ಅಮೆರಿಕದಲ್ಲಿ ವಾಸವಿದ್ದರು. ದಂತವೈದ್ಯೆಯಾಗಿದ್ದ ಸಂಜೀರಿ, ಅಮೆರಿಕದ ಫೈನಾನ್ಸ್ಸ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕೌಸ್ತುಭ ಎಂಬುವವರನ್ನು ಮದುವೆಯಾಗಿದ್ದರು.

Nagpur Couple believed to have died in California Boat fire

ಇಬ್ಬರೂ ಕ್ಯಾಲಿಫೋರ್ನಿಯಾದ ಸಾಂತಾ ಕ್ರೂಜ್ ಗೆ ಸ್ಕೂಬಾ ಡೈವಿಂಗ್ ಗೆ ತೆರಳಿದ್ದಾಗ ಈ ಅವಘಡ ಸಂಭವಿಸಿತ್ತು. ದೋಣಿಯಲ್ಲಿದ್ದವರೆಲ್ಲ ನೀರಿನಲ್ಲಿ ಮುಳುಗಿದ್ದು, ಅವರೊಂದಿಗೆ ಈ ದಂಪತಿಯೂ ಇದ್ದರು.

ನಾಳೆ ಮಗಳ ಹುಟ್ಟು ಹಬ್ಬ! ಇಂದು ತಂದೆ-ಮಗುವಿನ ಭೀಕರ ಸಾವು

ಸಂಜೀರಿ ಅವರ ತಂದೆ ಸತೀಶ್ ದಿಯೋಪುಜಾರಿ ಅಮೆರಿಕಕ್ಕೆ ತೆರಳುತ್ತಿದ್ದು, ಅಮೆರಿಕದಲ್ಲೇ ವಾಸವಿರುವ ಸಂಜೀರಿ ಅವರ ಸಹೋದರಿ ಮತ್ತವರ ಕುಟುಂಬ ಘಟನೆಯ ಬಗ್ಗೆ ಅಧಿಕೃತ ಮಾಹಿತಿ ನೀಡುವಂತೆ ಅಂಬಂಧ ಪಟ್ಟ ಅಧಿಕಾರಿಗಳ ಮೊರೆಹೋಗಿದ್ದಾರೆ.

English summary
Nagpur Couple believed to have died in California Boat fire, United States. 34 more people died in the incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X