ಪುಣೆಯ ಮಹಿಳೆಯರಲ್ಲಿ ಕಾಣಿಸಿದೆ ವಿಚಿತ್ರ ಸ್ತನರೋಗ!

Posted By:
Subscribe to Oneindia Kannada

ಪುಣೆ,ಮಾರ್ಚ್,29: ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತಿರುವ ಸ್ತನ ಕ್ಯಾನ್ಸರ್ ಹಲವಾರು ಮಹಿಳೆಯರ ನಿದ್ದೆಗೆಡಿಸಿತ್ತು. ಇದೀಗ ಇಪ್ಪತ್ತರಿಂದ ಮೂವತ್ತು ವರ್ಷದ ಮಹಿಳೆಯರಲ್ಲಿ ವಿಚಿತ್ರ ರೀತಿಯ ಸ್ತನ ರೋಗ ಕಾಣಿಸಿಕೊಂಡಿದೆ.

ಮಹಿಳೆಯರಿಗೆ ಮತ್ತಷ್ಟು ಆತಂಕ ಸೃಷ್ಠಿಸಿರುವ ಈ ನಿಗೂಢ ಸ್ತನ ರೋಗದ ಸೋಂಕಿನ ಮೂಲ ಇನ್ನೂ ಪತ್ತೆಯಾಗಿಲ್ಲ. ಆದರೆ ಈ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ತಿಂಗಳಲ್ಲಿ ಆರು ಮಹಿಳೆಯರು ಈ ರೋಗಕ್ಕೆ ತುತ್ತಾಗುತ್ತಿದ್ದಾರೆ ಎಂದು ಪುಣೆಯ ವೈದ್ಯರು ಹೇಳಿದರು.[ಕರ್ನಾಟಕದಲ್ಲಿ ಹೆಚ್ಚುತ್ತಿರುವ ಸ್ತನ ಕ್ಯಾನ್ಸರ್ ಪ್ರಕರಣ]

Mysterious breast disease grips in Pune

ನಿಗೂಢ ಸ್ತನ ರೋಗ ಕಾಣಿಸಿಕೊಂಡಿದ್ದು ಎಲ್ಲಿ?

ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಪ್ರಜಕ್ತ ಜಾಧವ್ ಅವರಿಗೆ ಸ್ತನದಲ್ಲಿ ಗಡ್ಡೆ ಕಾಣಿಸಿಕೊಂಡಿದೆ. ಬಳಿಕ ಸ್ತನಗಳಲ್ಲಿ ಉಂಟಾದ ದ್ರವದ ಸೋರಿಕೆಯಿಂದ ವಿಪರೀತ ನೋವು ಅನುಭವಿಸಿದ ಈಕೆ ಕ್ಯಾನ್ಸರ್ ತಜ್ಞರನ್ನು ಸಂಪರ್ಕಿಸಿದ್ದಾಳೆ.

ಈಕೆಯನ್ನು ಪರೀಕ್ಷಿಸಿದ ಮಹಿಳೆಯರು ಶಸ್ತ್ರ ಚಿಕಿತ್ಸೆ ನಡೆಸಿ ಸ್ತನಗಳಲ್ಲಿದ್ದ ಗಡ್ಡೆಗಳನ್ನು ಹೊರತೆಗೆದಿದ್ದಾರೆ. ಆದರೆ ಯಾವ ಕಾರಣಕ್ಕೆ ಈ ಸೋಂಕು ಕಾಣಿಸಿಕೊಂಡಿತ್ತು ಎಂದು ಇನ್ನೂ ಪತ್ತೆಯಾಗಿಲ್ಲ.[ಕಂದ ಮೊಲೆ ಕಚ್ಚಿದ ಅಂತ ತಾಯಿ 90 ಬಾರಿ ಇರಿದಳು!]

ವಿಚಿತ್ರ ಸ್ತನರೋಗದ ಲಕ್ಷಣವೇನು?

* 20 ರಿಂದ 30 ವರ್ಷದ ಮಹಿಳೆಯರಲ್ಲಿ ಈ ರೋಗ ಕಾಣಿಸಿಕೊಳ್ಳುತ್ತದೆ.

* ಸ್ತನಗಳಲ್ಲಿ ಗಡ್ಡೆಗಳು ಕಂಡು ಬರುತ್ತವೆ.[ಬೆಂಗಳೂರು, ಭಾರತದ ನೂತನ ಸ್ತನ ಕ್ಯಾನ್ಸರ್ ರಾಜಧಾನಿ!]

* ಗಡ್ಡೆ ಕಾಣಿಸಿಕೊಂಡ ಬಳಿಕ ಸ್ತನಗಳಲ್ಲಿ ದ್ರವದ ಸೋರಿಕೆಯಾಗುತ್ತದೆ. ವಿಪರೀತ ನೋವು ಕಾಣಿಸಿಕೊಳ್ಳುತ್ತದೆ.

* ಸ್ತನದ ಗಾತ್ರ ಕುಗ್ಗುತ್ತದೆ. ಸ್ತನದ ಬಣ್ಣವೂ ಕಡುಕೆಂಪು ಬಣ್ಣಕ್ಕೆ ತಿರುಗುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mysterious breast disease grips in Pune. This breast disease founds in only 20s and 30s age womens.
Please Wait while comments are loading...