ಮಹಾರಾಷ್ಟ್ರ ಅಪ್ರಾಪ್ತ ವಿವಾಹಿತ ಮಹಿಳೆ ಮೇಲೆ 400 ಜನರಿಂದ ಅತ್ಯಾಚಾರ

ಬೀಡ್, ಮಹಾರಾಷ್ಟ್ರ ನವೆಂಬರ್ 15: ವಿವಾಹಿತ ಅಪ್ರಾಪ್ತ ಮಹಿಳೆಯ ಮೇಲೆ ಕಳೆದ 6 ತಿಂಗಳಲ್ಲಿ 400 ಮಂದಿ ಅತ್ಯಾಚಾರವೆಸಗಿದ ದಾರುಣ ಘಟನೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ನಡೆದಿದೆ. ಮಹಾರಾಷ್ಟ್ರ ಪೊಲೀಸರು ಸಹ ಸಂತ್ರಸ್ತೆಯನ್ನು ಲೈಂಗಿಕವಾಗಿ ಶೋಷಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ದೂರಿನ ಆಧಾರದ ಮೇಲೆ ಬಾಲ್ಯವಿವಾಹ ಕಾಯ್ದೆ, ಅತ್ಯಾಚಾರ, ಕಿರುಕುಳ ಮತ್ತು ಪೋಕ್ಸೊ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಬೀಡ್ ಜಿಲ್ಲೆಯ ಎಸ್ಪಿ ರಾಜಾ ರಾಮಸಾಮಿ ತಿಳಿಸಿದ್ದಾರೆ.

ಸಂತ್ರಸ್ತೆಯ ತಾಯಿಯು ಒಂದೆರಡು ವರ್ಷಗಳ ಹಿಂದೆ ನಿಧನರಾದರು. ಎಂಟು ತಿಂಗಳ ಹಿಂದೆ ಆಕೆಯ ತಂದೆ ಮಗಳ ಮದುವೆ ಮಾಡಿದರು. ಅಪ್ರಾಪ್ತ ವಿವಾಹಿತ ಮಹಿಳೆಯನ್ನು ಗಂಡನ ಕುಟುಂಬಸ್ಥರೂ ಕೆಟ್ಟದಾಗಿ ನಡೆಸಿಕೊಂಡಿದ್ದಾರೆ ಎನ್ನಲಾಗಿದೆ. ಆಕೆಯನ್ನು ಆಕೆಯ ಪತಿ ಮತ್ತು ಅತ್ತೆ-ಮಾವಂದಿರು ಥಳಿಸಿ ಕೆಟ್ಟದಾಗಿ ನಡೆಸಿಕೊಂಡರು ಎಂಬ ಸುದ್ದಿಯಿದೆ. ಹೀಗಾಗಿ ಆಕೆ ಓಡಿಹೋಗಿ ಮತ್ತೆ ತನ್ನ ತಂದೆಯೊಂದಿಗೆ ವಾಸಿಸಲು ಮರಳಿದ್ದಾಳೆ. ಹೊಟ್ಟೆಪಾಡಿಗೆ ಬೀಡ್ ಜಿಲ್ಲೆಯ ಅಂಬಾಜೋಗೈ ಬಸ್ ನಿಲ್ದಾಣದಲ್ಲಿ ಭಿಕ್ಷೆ ಬೇಡಲು ಪ್ರಾರಂಭಿಸಿದ್ದಾಳೆ. ಆಗ ಅವಳು ಲೈಂಗಿಕ ಶೋಷಣೆಯನ್ನು ಎದುರಿಸಲು ಪ್ರಾರಂಭಿಸಿದಳು ಎಂದು ವರದಿ ಹೇಳಿದೆ. ಅಂಬಾಜೋಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಯತ್ನಿಸುತ್ತಿದ್ದಾಗ ಪೊಲೀಸರು ಗಂಭೀರವಾಗಿ ಪರಿಗಣಿಸದೆ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಸಂತ್ರಸ್ತೆ ತಿಳಿಸಿದ್ದಾರೆ.

ಮಕ್ಕಳ ಕಲ್ಯಾಣ ಸಮಿತಿಗೆ ನೀಡಿದ ಹೇಳಿಕೆಯಲ್ಲಿ, "ಸಂತ್ರಸ್ತೆಯನ್ನು ಮೇಲೆ ಅನೇಕ ಜನರು ಅತ್ಯಾಚಾರ ಎಸಗಿದ್ದಾರೆ. ಆಕೆ ಅಂಬಾಜೋಗಿ ಠಾಣೆಗೆ ದೂರು ನೀಡಲು ಹಲವು ಬಾರಿ ಹೋದರೂ ಪೊಲೀಸರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿಲ್ಲ. ಬದಲಾಗಿ ಒಬ್ಬ ಪೋಲೀಸ್ ಸಂತ್ರೆಸ್ತೆಗೆ ಕಿರುಕುಳ ನೀಡಿದ್ದಾರೆ" ಎಂದು ಸಂತ್ರಸ್ತೆ ವಿಚಾರಣೆ ವೇಳೆ ಹೇಳಿಕೊಂಡಿದ್ದಾಳೆ ಎಂದು ಸಮಿತಿ ಹೇಳಿದೆ. ಕೊನೆಗೆ ಆಕೆಯ ಪೊಲೀಸ್ ದೂರು ದಾಖಲಿಸಿಕೊಳ್ಳಲಾಗಿದೆ. ಇದುವರೆಗೆ ಮೂವರನ್ನು ಬಂಧಿಸಲಾಗಿದೆ.

Minor married girl raped by 400 people in Maharashtra, 3 arrested

ಇದೇ ಸೆಪ್ಟಂಬರ್ ತಿಂಗಳ ಕೊನೆಯಲ್ಲಿ ಮಹಾರಾಷ್ಟ್ರದಲ್ಲಿ ಇಂಥದ್ದೇ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿತ್ತು. ಇಬ್ಬರು ಅಪ್ರಾಪ್ತರು ಸೇರಿದಂತೆ ಸುಮಾರು 29 ಮಂದಿ 15 ವರ್ಷದ ಬಾಲಕಿ ಮೇಲೆ ಮುಂಬೈನಲ್ಲಿ ಸುಮಾರು ಒಂಬತ್ತು ತಿಂಗಳುಗಳ ಕಾಲ ಅತ್ಯಾಚಾರ ನಡೆಸಿರುವ ಭಾರೀ ಆಘಾತಕಾರಿ ನಡೆದಿತ್ತು. ಇಬ್ಬರು ಅಪ್ರಾಪ್ತರು ಸೇರಿದಂತೆ ಸುಮಾರು 29 ಮಂದಿ 15 ವರ್ಷದ ಬಾಲಕಿ ಮೇಲೆ ಮುಂಬೈನಲ್ಲಿ ಸುಮಾರು ಒಂಬತ್ತು ತಿಂಗಳುಗಳ ಕಾಲ ಅತ್ಯಾಚಾರ ನಡೆಸಿರುವ ಭಾರೀ ಆಘಾತಕಾರಿ ಘಟನೆ ನಡೆದಿದೆ," ಎಂದು ಮುಂಬೈ ಪೊಲೀಸರು ತಿಳಿಸಿದ್ದರು.

"ಜನವರಿಯಲ್ಲಿ ಈ ಬಾಲಕಿಯ ಪ್ರೇಮಿಯು ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಅದನ್ನು ವಿಡಿಯೋ ಕೂಡಾ ಮಾಡಿಕೊಂಡಿದ್ದಾನೆ. ಈ ವಿಡಿಯೋವನ್ನು ತೋರಿಸಿ ಆಕೆಗೆ ಬ್ಲ್ಯಾಕ್‌ಮೇಲ್‌ ಮಾಡಲು ಆರಂಭ ಮಾಡಿದ್ದಾನೆ. ಬಳಿಕ ಆತನ ಸ್ನೇಹಿತರು ಹಾಗೂ ಪರಿಚಯಸ್ಥರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ," ಎಂದು ತಿಳಿದು ಬಂದಿತ್ತು.

ಇನ್ನು "ಈ ಆರೋಪಿಗಳು ಆಕೆಯ ಮೇಲೆ ಕನಿಷ್ಠ ನಾಲ್ಕೈದು ಬಾರಿಯಾದರೂ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಬೇರೆ ಬೇರೆ ಸ್ಥಳಗಳಲ್ಲಿ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಡೊಂಬಿವಿಲಿ, ಬದ್ಲಾಪುರ, ಮುರ್ಬಾದ್ ಮತ್ತು ರಬಾಲೆ ಮೊದಲಾದ ಜಿಲ್ಲೆಗಳಲ್ಲಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ," ಎಂದು ಹೆಚ್ಚುವರಿ ಪೊಲೀಸ್ ಆಯುಕ್ತರು ದತ್ತಾತ್ರೇಯ ಕರಾಳೆ ಹೇಳಿದರು. ಈ ಪ್ರಕರಣಕ್ಕೆ ಸಂಬಂಧಿಸಿ 24 ಮಂದಿಯನ್ನು ಬಂಧನ ಮಾಡಲಾಗಿದೆ. "ಈ ಬಂಧಿತ ಆರೋಪಿಗಳಲ್ಲಿ ಕೆಲವರು ರಾಜಕೀಯ ಪಕ್ಷಗಳೊಂದಿಗೆ ನಂಟನ್ನು ಕೂಡಾ ಹೊಂದಿದ್ದಾರೆ," ಎಂದು ಕೂಡಾ ಹೆಚ್ಚುವರಿ ಪೊಲೀಸ್ ಆಯುಕ್ತರು ದತ್ತಾತ್ರೇಯ ಕರಾಳೆ ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+