• search
  • Live TV
ಪುಣೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲತಾ ದೀದಿಗೂ ನರೇಂದ್ರ ಮೋದಿಯೇ ಪ್ರಧಾನಿ ಆಗ್ಬೇಕಂತೆ

By Srinath
|

ಪುಣೆ, ನ.2: ಅತ್ತ ಸಿಬ್ಬಲ್ ವಗೈರೆಗಳು ಮೋದಿ ದುರಂಹಕಾರಿ ಎಂದೆಲ್ಲಾ ಜರಿಯುತ್ತಿದ್ದರೆ ಇತ್ತ ಗಾನಕೋಗಿಲೆ ಲತಾ ಮಂಗೇಷ್ಕರ್‌ ಅವರು ಮೋದಿ ಅಭಿಮಾನಿಗಳಿಗಾಗಿ ಸುಶ್ರಾವ್ಯ ಮಾತುಗಳನ್ನು ಹೇಳಿದ್ದಾರೆ.

ತಮ್ಮ ಅಮರ ಕಂಠದಿಂದ ಮೋದಿಯನ್ನು ಹಾಡಿಪೊಗಳಿರುವ ಲತಾ ದೀದಿ ನರೇಂದ್ರ ಮೋದಿ ಪ್ರಧಾನಿಯಾಗಲಿ. ಏಕೆಂದರೆ ನನಗೂ ಮೋದಿಯೇ ಪ್ರಧಾನಿ ಆಗ್ಬೇಕಂತ ಮನದಾಳದಲ್ಲಿ ಆಸೆಯಿದೆ ಎಂದಿದ್ದಾರೆ. ಮೋದಿ ಪ್ರಧಾನಿಯಾಗಲಿ ಎಂದು ಹೇಳುತ್ತಿದ್ದಂತೆ ಸಭಿಕರು ಭಾರಿ ಕರತಾಡನ ಮಾಡಿದ್ದನ್ನು ಆಲಿಸಿದ ದೀದಿ, ನೋಡಿ ನನ್ನ ಮಾತಿಗೆ ನೀವೂ ದನಿಗೂಡಿಸಿದ್ದೀರಿ ಎಂಬುದು ನಿಮ್ಮ ಕರತಾಡನದಿಂದ ಕೇಳಿಬರುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಸಚಿನ್ ತೆಂಡೂಲ್ಕರ್ ಅಂದ್ರೆ ಚಿಕ್ಕ ಮಗುವಿನಂತೆ ಕುಣಿದು ಕುಪ್ಪಳಿಸುವ, ಮುಂಬೈನಲ್ಲಿ ತೆಂಡೂಲ್ಕರ್ ಆಡುವಾಗ ಇಡೀ ದಿನ ಉಪವಾಸವಿದ್ದು, ಆತ ಸೆಂಚುರಿ ಬಾರಿಸಲಿ ಎಂದು ದೇವರ ಮುಂದೆ ತಾವೇ ಹಾಡಿರುವ ಅದ್ಭುತ ಭಜನೆಗಳನ್ನು ಮತ್ತೆ ಮತ್ತೆ ಹಾಡುವ ಲತಾ ದೀದಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿಷಯದಲ್ಲೂ ಅದನ್ನೇ ಬಯಸಿದ್ದಾರೆ. ಇದರೊಂದಿಗೆ ನರೇಂದ್ರ ಮೋದಿ ಪ್ರಧಾನಿಯಾಗಲಿ ಎಂದು ಬೆಂಬಲಿಸುವವರ ಪಟ್ಟಿಗೆ ಇದೀಗ ಖ್ಯಾತ ಗಾಯಕಿ ಲತಾ ಮಂಗೇಷ್ಕರ್‌ ಕೂಡಾ ಸೇರ್ಪಡೆಯಾಗಿದ್ದಾರೆ.

ಸಂದರ್ಭ ಏನು?:

ಸಂದರ್ಭ ಏನು?:

ಲತಾ ಮಂಗೇಷ್ಕರ್‌ ಅವರ ತಂದೆ ದೀನಾನಾಥ್‌ ಮಂಗೇಷ್ಕರ್‌ ನೆನಪಿನಲ್ಲಿ ಪುಣೆಯಲ್ಲಿ ಅತ್ಯಾಧುನಿಕ ಆಸ್ಪತ್ರೆ ನಿರ್ಮಿಸಲಾಗಿದೆ. ಈ ಆಸ್ಪತ್ರೆಗೆ ನರೇಂದ್ರ ಮೋದಿ ಅವರು ಶುಕ್ರವಾರ ಚಾಲನೆ ನೀಡಿದರು. ಆ ಸಂದರ್ಭದಲ್ಲಿ ಮಾತನಾಡಿದ ಲತಾ, ಮೋದಿ ನನ್ನ ಸೋದರರಿದ್ದಂತೆ. ಅವರು ಪ್ರಧಾನಿ ಹುದ್ದೆ ಏರುವುದನ್ನು ನಾವೆಲ್ಲಾ ಬಯಸುತ್ತಿದ್ದೇವೆ. ದೀಪಾವಳಿಯ ಈ ಶುಭ ಸಂದರ್ಭದಲ್ಲಿ ಅವರು ಪ್ರಧಾನಿಯಾಗಲಿ ಎಂದು ನಾನು ಹಾರೈಸುತ್ತೇನೆ ಎಂದಿದ್ದಾರೆ.

ಮೋದಿಗೂ ಸಿಗುತ್ತಾ ವಾಜಪೇಯಿ ಅದೃಷ್ಟ

ಮೋದಿಗೂ ಸಿಗುತ್ತಾ ವಾಜಪೇಯಿ ಅದೃಷ್ಟ

ಈ ಹಿಂದೆ ಪುಣೆಯಲ್ಲಿ ಜ್ಞಾನ ಪ್ರಭೋಧಿನಿ ಟ್ರಸ್ಟ್‌ ನಿರ್ಮಿಸಿದ್ದ ಸಂಜೀವನ್‌ ಆಸ್ಪತ್ರೆಯನ್ನು ಆಗಿನ ಬಿಜೆಪಿ ನಾಯಕ ಅಟಲ್‌ ಬಿಹಾರಿ ವಾಜಪೇಯಿ ಉದ್ಘಾಟಿಸಿದ್ದರು. ಈ ಆಸ್ಪತ್ರೆಯನ್ನು ಉದ್ಘಾಟಿಸಿದ ಬಳಿಕ ಅಟಲ್‌ ಪ್ರಧಾನಿಯಾಗಿದ್ದರು. ಇದೀಗ ಲತಾ ಮಂಗೇಷ್ಕರ್‌ ನಿರ್ಮಿಸಿರುವ ಆಸ್ಪತ್ರೆಯ ವೈದ್ಯಕೀಯ ಸೇವೆಯನ್ನು ಇದೇ ಜ್ಞಾನ ಪ್ರಭೋಧಿನಿ ಟ್ರಸ್ಟ್‌ ನಿರ್ವಹಿಸಲಿದೆ. ಹೀಗಾಗಿ ಈ ಆಸ್ಪತ್ರೆಯನ್ನು ಉದ್ಘಾಟಿಸಿದ ಮೋದಿಗೂ ಪ್ರಧಾನಿ ಹುದ್ದೆ ಒಲಿಯಲಿದೆಯೇ ಎಂಬ ಚರ್ಚೆ ಶುಕ್ರವಾರ ನಡೆದಿತ್ತು. (ಚಿತ್ರ-pib.nic.in)

ದೀದಿ ಪತ್ರವನ್ನೂ ಬರೆದಿದ್ದಾರೆ:

ದೀದಿ ಪತ್ರವನ್ನೂ ಬರೆದಿದ್ದಾರೆ:

ಮೋದಿ ಎದುರೊಇಗೆ ಸಿಕ್ಕಿದಾಗ, ಅದೂ ತಮ್ಮದೇ ಆಸ್ಪತ್ರೆಯನ್ನು ಉದ್ಘಾಟಿಸುತ್ತಿದ್ದಾರೆ ಎಂಬ ದಾಕ್ಷಿಣ್ಯಕ್ಕೆ ಕಟ್ಟುಬಿದ್ದು ಲತಾ ದೀದಿ ಮೋದಿ ಪ್ರಧಾನಿಯಾಗಲಿ ಎಂದು ಬಾಯ್ಮಾತಿಗೆ ಹಾರೈಸಿಲ್ಲ. ಈ ಕುರಿತು ಅವರು ಮೋದಿಗೆ ಆರು ತಿಂಗಳ ಹಿಂದೆ ಬರೆದಿರುವ ಪತ್ರದಲ್ಲೂ ಹೇಳಿದ್ದಾರಂತೆ. ಈ ವಿಚಾರವನ್ನು ಸ್ವತಃ ಮೋದಿ ಅವರೇ ಬಹಿರಂಗಪಡಿಸಿದ್ದಾರೆ. 'ದೀದಿಯ ಆ ಪತ್ರ, ಇಂದಿನ ಹಾರೈಕೆಗಳು ನನ್ನ ಪಾಲಿಗೆ ಬಹುದೊಡ್ಡ ಉಡುಗೊರೆ' ಎಂದು ಪುಣೆಯಲ್ಲಿ ಶುಕ್ರವಾರ ದೀನನಾಥ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಡಿಸಿದ ಬಳಿಕ ಮೋದಿ ಪ್ರತಿಕ್ರಿಯಸಿದ್ದಾರೆ.

ಸೋದರಿ ಆಶಾ ಭೋಂಸ್ಲೆ ಸಾಥ್

ಸೋದರಿ ಆಶಾ ಭೋಂಸ್ಲೆ ಸಾಥ್

ಲತಾ ಅವರ ಸೋದರಿ ಮತ್ತೊಬ್ಬ ಅಮರ ಗಾಯಕಿ ಆಶಾ ಭೋಂಸ್ಲೆ ಅವರೂ ಸಹ ಅಕ್ಕನ ಈ ಹಾರೈಕೆ ಮಾತುಗಳಿಗೆ ಸಾಕ್ಷಿಯಾದರು. ಆಶಾ ಭೋಂಸ್ಲೆ ಅವರು ಗುಜರಾತಿ ಭಾಷೆಯಲ್ಲಿ ಹಾಡು ಹಾಡುವ ಮೂಲಕ ಮೋದಿ ಪ್ರಾಧಾನಿ ಆಗ್ಬೇಕೆಂಬ ಅಕ್ಕನ ಮಾತುಗಳಿಗೆ ಸಾಥ್ ನೀಡಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Lata Mangeshkar sings Narendra Modi should become next prime minister. Gujarat Chief Minister and BJP's prime ministerial candidate Narendra Modi on Friday found an ardent supporter in melody queen Lata Mangeshkar, who said she would like to see him taking the top job. Mangeshkar said, 'I pray to god... that Narendrabhai becomes the Prime Minister of the country'. 'Your response suggests you want the same' she swiftly told the gathering after her statement was received by a huge round of applause. 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more