• search
  • Live TV
ಪುಣೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರತದ ಮೊದಲ ಹೈಡ್ರೋಜನ್ ಇಂಧನ ಚಾಲಿತ ಬಸ್ ಅನಾವರಣ

|
Google Oneindia Kannada News

ಪುಣೆ, ಆಗಸ್ಟ್ 22: ಕೇಂದ್ರ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಪುಣೆಯಲ್ಲಿ ಸ್ಥಳೀಯವಾಗಿ ಕೆಪಿಐಟಿ- ಸಿಎಸ್‌ಐಆರ್ ಅಭಿವೃದ್ಧಿಪಡಿಸಿದ ಭಾರತದ ಮೊದಲ ಹೈಡ್ರೋಜನ್ ಇಂಧನ ಚಾಲಿತ ಬಸ್‌ಗೆ ಚಾಲನೆ ನೀಡಿದ್ದಾರೆ.

ಈ ಬಗ್ಗೆ ಕೇಂದ್ರ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಮಾತನಾಡಿ, ಇದು ಸಂಪೂರ್ಣ ಆತ್ಮ ನಿರ್ಭರ್ ಉಪಕ್ರಮವಾಗಿದೆ. ಶುದ್ಧ ಇಂಧನ, ಹವಾಮಾನ ಬದಲಾವಣೆಯ ಗುರಿಗಳ ಪೂರೈಕೆ, ಹೊಸ ಉದ್ಯಮಿಗಳು, ಉದ್ಯೋಗಗಳನ್ನು ಸೃಷ್ಟಿಸಲು ಪ್ರಧಾನಿ ನರೇಂದ್ರ ಮೋದಿ ಅವರ 'ಹೈಡ್ರೋಜನ್ ವಿಷನ್' ಭಾರತಕ್ಕೆ ಮುಖ್ಯವಾಗಿದೆ. ಗ್ರೀನ್ ಹೈಡ್ರೋಜನ್ ಅತ್ಯುತ್ತಮವಾದ ಶುದ್ಧ ಶಕ್ತಿ ಇಂಧನವಾಗಿದ್ದು, ಸಂಸ್ಕರಣಾ ಉದ್ಯಮ, ರಸಗೊಬ್ಬರ ಉದ್ಯಮ, ಉಕ್ಕಿನ ಉದ್ಯಮ, ಸಿಮೆಂಟ್ ಉದ್ಯಮ ಮತ್ತು ಭಾರೀ ವಾಣಿಜ್ಯ ಸಾರಿಗೆ ವಲಯದಿಂದ ಡಿಕಾರ್ಬೊನೈಸೇಶನ್ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಇದು ಸಹಾಯಕವಾಗಿದೆ ಎಂದು ಅವರು ಹೇಳಿದರು.

Just in : ಪುಣೆಯಲ್ಲಿ ಚಾರ್ಜಿಂಗ್ ವೇಳೆ ಎಲೆಕ್ಟ್ರಿಕ್ ಬೈಕ್‌ಗಳಿಗೆ ಬೆಂಕಿJust in : ಪುಣೆಯಲ್ಲಿ ಚಾರ್ಜಿಂಗ್ ವೇಳೆ ಎಲೆಕ್ಟ್ರಿಕ್ ಬೈಕ್‌ಗಳಿಗೆ ಬೆಂಕಿ

ಬಸ್‌ನ ಇಂಧನ ಕೋಶವು ಹೈಡ್ರೋಜನ್ ಮತ್ತು ಗಾಳಿಯನ್ನು ಬಸ್‌ಗೆ ಶಕ್ತಿ ನೀಡಲು ವಿದ್ಯುತ್ ಉತ್ಪಾದಿಸಲು ಬಳಸುತ್ತದೆ. ಬಸ್‌ನಿಂದ ಹೊರಬರುವ ಏಕೈಕ ತ್ಯಾಜ್ಯ ನೀರಾಗಿರುತ್ತದೆ. ಆದ್ದರಿಂದ ಇದು ಬಹುಶಃ ಅತ್ಯಂತ ಪರಿಸರ ಸ್ನೇಹಿ ಸಾರಿಗೆ ವಿಧಾನವಾಗಿದೆ. ದೂರದ ಮಾರ್ಗ(ಲಾಂಗ್‌ರೈಡ್‌)ಗಳಲ್ಲಿ ಚಲಿಸುವ ಒಂದು ಡೀಸೆಲ್ ಬಸ್ ಸಾಮಾನ್ಯವಾಗಿ ವಾರ್ಷಿಕವಾಗಿ 100 ಟನ್ ಕಾರ್ಬನ್‌ ಅನ್ನು ಹೊರಸೂಸುತ್ತದೆ. ಭಾರತದಲ್ಲಿ ಅಂತಹ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಬಸ್‌ಗಳಿವೆ ಎಂದು ಸಚಿವಾಲಯ ಹೇಳಿದೆ.

ಡೀಸೆಲ್ ಚಾಲಿತ ವಾಹನಗಳಿಗಿಂತ ಕಡಿಮೆ ವೆಚ್ಚ

ಡೀಸೆಲ್ ಚಾಲಿತ ವಾಹನಗಳಿಗಿಂತ ಕಡಿಮೆ ವೆಚ್ಚ

ಹೈಡ್ರೋಜನ್‌ ಇಂಧನ ಕೋಶ ವಾಹನಗಳು ಹೆಚ್ಚಿನ ದಕ್ಷತೆ ಮತ್ತು ಹೆಚ್ಚಿನ ಶಕ್ತಿಯ ಸಾಂದ್ರತೆಯನ್ನು ಹೊಂದಿದ್ದು, ಪ್ರತಿ ಕಿಲೋಮೀಟರ್‌ಗೆ ಇಂಧನ ಸೆಲ್ ಟ್ರಕ್‌ಗಳು ಮತ್ತು ಬಸ್‌ಗಳ ಕಾರ್ಯಾಚರಣೆಯ ವೆಚ್ಚವು ಡೀಸೆಲ್ ಚಾಲಿತ ವಾಹನಗಳಿಗಿಂತ ಕಡಿಮೆಯಿರುತ್ತದೆ. ಇದರಿಂದ ಭಾರತಕ್ಕೆ ಸರಕು ಕ್ರಾಂತಿಯನ್ನು ತರಬಹುದು. ಇದಲ್ಲದೆ, ಇಂಧನ ಕೋಶದ ವಾಹನಗಳು ಶೂನ್ಯ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ನೀಡುತ್ತವೆ ಎಂದು ಸಚಿವ ಸಿಂಗ್ ಹೇಳಿದರು.

ಪುಣೆಯಲ್ಲಿ 2 ವಾರಗಳಲ್ಲಿ 50 ಡೆಂಗ್ಯೂ ಪ್ರಕರಣಗಳು ದಾಖಲುಪುಣೆಯಲ್ಲಿ 2 ವಾರಗಳಲ್ಲಿ 50 ಡೆಂಗ್ಯೂ ಪ್ರಕರಣಗಳು ದಾಖಲು

ಇಂಜಿನಿಯರ್‌ಗಳ ತಂತ್ರಜ್ಞಾನ ಅತ್ಯುತ್ತಮ

ಇಂಜಿನಿಯರ್‌ಗಳ ತಂತ್ರಜ್ಞಾನ ಅತ್ಯುತ್ತಮ

ಈ ಹಿನ್ನೆಲೆಯಲ್ಲಿ ಸಚಿವರು ಕೆಪಿಐಟಿ ಮತ್ತು ಸಿಎಸ್‌ಐಆರ್ ನ ಜಂಟಿ ಅಭಿವೃದ್ಧಿ ಪ್ರಯತ್ನಗಳನ್ನು ಶ್ಲಾಘಿಸಿದರು. ಭಾರತೀಯ ವಿಜ್ಞಾನಿಗಳು ಮತ್ತು ಇಂಜಿನಿಯರ್‌ಗಳ ತಂತ್ರಜ್ಞಾನವು ವಿಶ್ವದ ಅತ್ಯುತ್ತಮವಾದುದಾಗಿದೆ. ಏಕೆಂದರೆ ಕಡಿಮೆ ವೆಚ್ಚದಲ್ಲಿಯೂ ಇದೆ. ಡೀಸೆಲ್-ಚಾಲಿತ ಭಾರೀ ವಾಣಿಜ್ಯ ವಾಹನಗಳಿಂದ ಶೇ. 12ರಿಂದ 14 ರಷ್ಟು ಕಾರ್ಬನ್‌ ಡೈ ಆಕ್ಸೆಡ್‌ ಹೊರಸೂಸುವಿಕೆಗಳು ಮತ್ತು ಕಣಗಳ ಹೊರಸೂಸುವಿಕೆಗಳು ಬರುತ್ತವೆ ಮತ್ತು ಇವುಗಳು ವಿಕೇಂದ್ರೀಕೃತ ಹೊರಸೂಸುವಿಕೆಗಳಾಗಿವೆ ಮತ್ತು ಆದ್ದರಿಂದ ಹಿಡಿಯಲು ಕಷ್ಟ ಎಂದು ಸಿಂಗ್ ಸೂಚಿಸಿದರು.

ಒಳನಾಡಿನ ಜಲಮಾರ್ಗಗಳನ್ನು ಹೆಚ್ಚಿಸುವ ಗುರಿ

ಒಳನಾಡಿನ ಜಲಮಾರ್ಗಗಳನ್ನು ಹೆಚ್ಚಿಸುವ ಗುರಿ

ಕಾರ್ಬನ್‌ ಡೈ ಆಕ್ಸೆಡ್‌ ಹೊರಸೂಸುವಿಕೆಯನ್ನು ತೊಡೆದುಹಾಕಲು ಹೈಡ್ರೋಜನ್ ಇಂಧನ ಚಾಲಿತ ವಾಹನಗಳು ಅತ್ಯುತ್ತಮ ಸೇವೆಯನ್ನು ಒದಗಿಸುತ್ತವೆ. ಸರಕು ಸಾಗಣೆ ಮತ್ತು ಪ್ರಯಾಣಿಕರ ಸಾಗಣೆಗಾಗಿ ಒಳನಾಡಿನ ಜಲಮಾರ್ಗಗಳನ್ನು ಹೆಚ್ಚಿಸುವ ಗುರಿಯನ್ನು ಭಾರತ ಹೊಂದಿದೆ. ಈ ಗುರಿಗಳನ್ನು ಸಾಧಿಸುವ ಮೂಲಕ ಭಾರತವು ಪಳೆಯುಳಿಕೆ ಶಕ್ತಿಯ ನಿವ್ವಳ ಆಮದುದಾರನಾಗುತ್ತದೆ. ಹೀಗಾಗಿ ದೊಡ್ಡ ಹಸಿರು ಹೈಡ್ರೋಜನ್ ಉತ್ಪಾದಕ ಮತ್ತು ಹಸಿರು ಹೈಡ್ರೋಜನ್ ಉಪಕರಣಗಳ ಪೂರೈಕೆದಾರನಾಗುವ ಮೂಲಕ ಹೈಡ್ರೋಜನ್ ವಲಯದಲ್ಲಿ ಭಾರತಕ್ಕೆ ಜಾಗತಿಕ ನಾಯಕತ್ವವನ್ನು ನೀಡುತ್ತದೆ ಎಂದು ಸಿಂಗ್ ಅಭಿಪ್ರಾಯಪಟ್ಟರು.

ಬಲ್ಕ್ ಕೆಮಿಕಲ್ಸ್ ಮಿಷನ್ ಕಾರ್ಯಕ್ರಮ

ಬಲ್ಕ್ ಕೆಮಿಕಲ್ಸ್ ಮಿಷನ್ ಕಾರ್ಯಕ್ರಮ

ಬಳಿಕ ಅವರು ಸಿಎಸ್ಐಆರ್‌ -ಎನ್‌ಸಿಎನ್‌ನಲ್ಲಿ Bisphenol-A ಪೈಲಟ್ ಪ್ಲಾಂಟ್ ಅನ್ನು ಉದ್ಘಾಟಿಸಿದರು. ಸಿಎಸ್ಐಆರ್‌ನ ಕೋವಿಡ್ -19 ಮಿಷನ್ ಪ್ರೋಗ್ರಾಂ ಮತ್ತು ಬಲ್ಕ್ ಕೆಮಿಕಲ್ಸ್ ಮಿಷನ್ ಕಾರ್ಯಕ್ರಮದ ಅಡಿಯಲ್ಲಿ ಎನ್‌ಸಿಎನ್‌ ಅಭಿವೃದ್ಧಿಪಡಿಸಿದ ನವೀನ ಪ್ರಕ್ರಿಯೆ ತಂತ್ರಜ್ಞಾನಗಳನ್ನು ಈ ಪ್ರಾಯೋಗಿಕ ಸ್ಥಾವರಗಳು ಯಶಸ್ವಿಯಾಗಿ ಪ್ರದರ್ಶಿಸಿವೆ ಎಂದು ಹೇಳಿದರು.

English summary
Union Minister of State Dr. Jitendra Singh drives India's first hydrogen powered bus locally developed by KPIT- CSIR in Pune.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X