ಮಗಳಿಗೆ ಜನ್ಮವನ್ನಷ್ಟೇ ಅಲ್ಲ, ತನ್ನ ಗರ್ಭವನ್ನೂ ನೀಡಿದ ಪುಣೆಯ ತಾಯಿ!

Posted By:
Subscribe to Oneindia Kannada

ಪುಣೆ (ಮಹಾರಾಷ್ಟ್ರ), ಮೇ 19: ಪುಣೆಯ ಈ ತಾಯಿ ತನ್ನ ಮಗಳಿಗೆ ಜನ್ಮ ನೀಡಿದ್ದಷ್ಟೇ ಅಲ್ಲ, ತನ್ನ ಮಗಳು ಮತ್ತೊಂದು ಮಗುವಿಗೆ ಜನ್ಮ ನೀಡುವುದಕ್ಕೆಂದು ಗರ್ಭವನ್ನೂ ದಾನ ಮಾಡಿದ್ದಾರೆ! ಅಚ್ಚರಿ ಎನ್ನಿಸಿದರೂ ಇದು ಸತ್ಯ.

ಹೌದು, ಪುಣೆಯ ಗ್ಯಾಲಾಕ್ಸಿ ಕೇರ್ ಲ್ಯಾಪರೋಸ್ಕೋಪಿ ಇನ್ ಸ್ಟಿಟ್ಯೂಟ್ ನಲ್ಲಿ ಭಾರತದ ಮೊಟ್ಟಮೊದಲ ಗರ್ಭಾಶಯ ಕಸಿ ಚಿಕಿತ್ಸೆ ನಿನ್ನೆ (ಮೇ 18) ಯಶಸ್ವಿಯಾಗಿ ನಡೆದಿದೆ. ಇನ್ನೂ ಅಚ್ಚರಿ ಎಂದರೆ ಈ ಅಪರೂಪದ ಚಿಕಿತ್ಸೆಯಲ್ಲಿ, ತಾಯಿಯ ಗರ್ಭಾಶಯವನ್ನೇ ಮಗಳಿಗೆ ಕಸಿ ಮಾಡಲಾಗಿದೆ![ತಾನು ಸತ್ತು ಐವರ ಜೀವ ಉಳಿಸಿದ ಪುಣ್ಯಾತ್ಮ]

India's first Uterus transplant perform in Pune

ಹುಟ್ಟುತ್ತಲೇ ಗರ್ಭಾಶಯವಿಲ್ಲದೆ ಜನಿಸಿದ ಹೆಣ್ಣು ಮಗುವಿಗೆ ಈಗ 21 ವರ್ಷ. ಮದುವೆಯಾಗಿರುವ ಆಕೆಗೆ ತನ್ನದೇ ಸ್ವಂತ ಮಗು ಬೇಕು ಎಂಬ ಹಂಬಲ. ಆದರೆ ಗರ್ಭಾಶಯವಿಲ್ಲದ ಕಾರಣ ಆಕೆ ಗರ್ಭ ಧರಿಸುವುದು ಸಾಧ್ಯವಿಲ್ಲ.

ಬಾಡಿಗೆ ತಾಯ್ತನ, ಮಗುವನ್ನು ದತ್ತು ತೆಗೆದುಕೊಳ್ಳುವುದು ಯಾವುದನ್ನೂ ಇಷ್ಟಪಡದ ಆಕೆ ನಿಯತಕಾಲಿಕವೊಂದರಲ್ಲಿ ಗರ್ಭಾಶಯ ಕಸಿಯ ಕುರಿತು ಓದಿದಳು. ಗರ್ಭಾಶಯ ಚಿಕಿತ್ಸೆ ನೀಡುವ ಪುಣೆಯ ಗ್ಯಾಲಾಕ್ಸಿ ಕೇರ್ ಲ್ಯಾಪರೋಸ್ಕೋಪಿ ಇನ್ ಸ್ಟಿಟ್ಯೂಟ್ ಆಸ್ಪತ್ರೆಯಲ್ಲಿ ಈ ಬಗ್ಗೆ ಏನಾದರೂ ಮಾಹಿತಿ ಸಿಕ್ಕೀತು ಎಂಬ ನಿರೀಕ್ಷೆಯಿಂದ ತಡಮಾಡದೆ ಆಸ್ಪತ್ರೆಗೆ ಆಗಮಿಸಿದಳು. ಆಕೆಯ ನಿರೀಕ್ಷೆ ಸುಳ್ಳಾಗಲಿಲ್ಲ. ತಜ್ಞ ವೈದ್ಯ ಡಾ.ಶೈಲೇಶ್ ಪುಟಂಬೆಕರ್, 'ಗರ್ಭಾಶಯ ದಾನಿಗಳು ಸಿಕ್ಕರೆ ನಿಮಗೆ ಗರ್ಭಾಶಯ ಕಸಿ ಮಾಡಬಹುದು' ಎಂದು ಹೊಸ ಭರವಸೆ ನೀಡಿದರು.

ಆದರೆ ಗರ್ಭಾಶಯ ದಾನಿಗಳು ಸಿಗುವುದೆಂದರೆ ಸುಲಭವೇ? ಎಲ್ಲೆಲ್ಲ ಹುಡುಕಿದರೂ ದಾನಿಗಳು ಸಿಗದಿದ್ದಾಗ ನಿರಾಸೆಯಿಂದ ಕುಳಿತಿದ್ದ ಮಗಳಿಗೆ ಆಶಾಕಿರಣವಾಗಿ ಗೋಚರಿಸಿದ್ದು ತನ್ನನ್ನು ಹೆತ್ತ ತಾಯಿ! ಪರೀಕ್ಷಿಸಿದ ವೈದ್ಯರು, 'ನಿಮ್ಮ ತಾಯಿಯ ಗರ್ಭಾಶಯ ನಿಮಗೆ ಶೇ. 100 ಹೊಂದುತ್ತದೆ, ನಿಮ್ಮೆಲ್ಲರ ಒಪ್ಪಿಗೆ ಇದ್ದರೆ ಕಸಿ ಮಾಡಬಹುದು' ಎಂದರು.

ತಾಯಿ-ಮಗಳು, ಕುಟುಂಬದ ಸಮ್ಮತಿಯ ಮೇರೆಗೆ ದೇಶದ ಮೊದಲ ಗರ್ಭಾಶಯ ಕಸಿ ಯಶಸ್ವಿಯಾಗಿ ನಡೆಯಿತು. ಸದ್ಯಕ್ಕೆ ಚೇತರಿಸಿಕೊಳ್ಳುತ್ತಿರುವ ಮಹಿಳೆ. ಕೆಲ ವರ್ಷಗಳಲ್ಲಿ ತಮ್ಮದೇ ಸ್ವಂತ ಮಗುವನ್ನು ಪಡೆಯಬಹುದು!

ಕೇವಲ ಮಗಳನ್ನು ಹೆತ್ತಿದ್ದಷ್ಟೇ ಅಲ್ಲದೆ, ತಮ್ಮ ಮಗಳು ಸ್ವಂತ ಮಗುವನ್ನು ಹೆರುವುದಕ್ಕೆ ತನ್ನ ಗರ್ಭಾಶಯವನ್ನೇ ದಾನ ಮಾಡುವ ಮೂಲಕ ಆ ತಾಯಿ ತ್ಯಾಗಮಯಿಯಾದರು.

ಅತ್ಯಂತ ಅಪರೂಪದ ಗರ್ಭಾಶಯ ಕಸಿ, ಮೊದಲ ಬಾರಿಗೆ ಸ್ವಿಡನ್ ನಲ್ಲಿ ಅಂದರೆ 2013 ರಲ್ಲಿ ನಡೆಯಿತು. ಇದುವರೆಗೂ ವಿಶ್ವದಲ್ಲಿ ಕೇವಲ 25 ಗರ್ಭಾಶಯ ಕಸಿ ಚಿಕಿತ್ಸೆ ನಡೆದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A team of doctors in the Pune has successfully performed India's first uterus transplant on Thursday (May 18). A 21-year-old woman who was born without a uterus was fitted her mother's uterus now.
Please Wait while comments are loading...