ನಟ ಸಂಜಯ್ ದತ್ ಜೈಲಿನಿಂದ ರಿಲೀಸ್ ಆಗೋ ಡೇಟ್ ಫಿಕ್ಸ್

Posted By:
Subscribe to Oneindia Kannada

ಪುಣೆ, ಫೆ, 23: 1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಅರೋಪಿಯಾಗಿ ಜೈಲುವಾಸದಲ್ಲಿರುವ ನಟ ಸಂಜಯ್ ದತ್ ಅವರು ರಿಲೀಸ್ ಆಗುವ ದಿನಾಂಕ ನಿಗದಿಯಾಗಿದೆ. ಐದು ವರ್ಷಗಳ ಕಾಲ ಜೈಲು ಶಿಕ್ಷೆಯಲ್ಲಿ 42 ತಿಂಗಳು ಸೆರೆಮನೆಯಲ್ಲಿದ್ದ ಮುನ್ನಾಭಾಯಿ ಎಂಬಿಬಿಎಸ್ ಸ್ಟಾರ್ ಅವರು ಫೆಬ್ರವರಿ 25ರಂದು ರಿಲೀಸ್ ಆಗುತ್ತಿದ್ದಾರೆ.

1993ರ ಮಾರ್ಚ್ 12ರಂದು ಮುಂಬೈನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಆರೋಪಿಯಾಗಿರುವ 56 ವರ್ಷ ವಯಸ್ಸಿನ ಸಂಜಯ್ ದತ್ ಅವರು ಪುಣೆಯ ಯೆರವಾಡ ಜೈಲಿನಿಂದ ಗುರುವಾರ ಬೆಳಗ್ಗೆ ಹೊರ ಬರಲಿದ್ದಾರೆ. ಬೆಳಗ್ಗೆ 9 ಗಂಟೆ ಸುಮಾರಿಗೆ ಸಂಜಯ್ ದತ್ ಅವರನ್ನು ಪತ್ನಿ ಮಾನ್ಯತಾ, ಮಕ್ಕಳು ಹಾಗೂ ಆಪ್ತರು, ಅಭಿಮಾನಿಗಳು ಬರಮಾಡಿಕೊಳ್ಳಲಿದ್ದಾರೆ.[ಮುಂಬೈ ಸರಣಿ ಸ್ಫೋಟದ ಹಿನ್ನೋಟ]

Munnabhai MBBS star to walk free on feb 25

ಆದರೆ, ಜೈಲಿನ ಆವರಣದಲ್ಲಿ ಸ್ವಾಗತ ಕೂಟ ಏರ್ಪಡಿಸಲು ಮುಂದಾಗಿದ್ದ ಸಂಜಯ್ ದತ್ ಅವರ ಅಭಿಮಾನಿಗಳಿಗೆ ನಿರಾಶೆಯಾಗಿದೆ. ಇಂಥ ಆಚರಣೆಗೆ ಅವಕಾಶ ನೀಡುವುದಿಲ್ಲ ಎಂದು ಜೈಲಿನ ಅಧಿಕಾರಿಗಳು ಹೇಳಿದ್ದಾರೆ. ಹೆಚ್ಚು ಬಾರಿ ಪೆರೋಲ್ ಮೇಲೆ ಜೈಲಿನಿಂದ ಹೊರಕ್ಕೆ ಬಂದ ವಿವಾದದ ನಡುವೆಯೂ ಸನ್ನಡತೆಯ ಆಧಾರದ ಮೇಲೆ ಸಂಜಯ್ ಅವರು ಅವಧಿಗೆ ಮುನ್ನ ರಿಲೀಸ್ ಆಗುತ್ತಿದ್ದಾರೆ. ಎರಡು ಕಂತಿನಲ್ಲಿ 50 ತಿಂಗಳಿಗೂ ಅಧಿಕ ಜೈಲುವಾದ ಅನುಭವಿಸಿದ್ದಾರೆ ಇದರಲ್ಲಿ ಪೆರೋಲ್ ಅವಧಿ ಸೇರಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.[ಭಾರತದಲ್ಲಿ ಸಂಭವಿಸಿದ ಪ್ರಮುಖ ಬಾಂಬ್ ಸ್ಫೋಟಗಳು]

ವಿಚಾರಣಾಧೀನ ಕೈದಿಯಾಗಿ ಸಂಜಯ್ ಅವರು 18 ತಿಂಗಳು ಕಾಲ ಜೈಲುವಾಸದಲ್ಲಿದ್ದರು. ನಂತರ 2013ರಲ್ಲಿ ಸುಪ್ರೀಂಕೋಟ್ ಆದೇಶದಂತೆ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ನಂತರ ಪುಣೆಯ ಯೆರವಾಡ ಜೈಲಿನಲ್ಲಿ 42 ತಿಂಗಳುಗಳ ಕಾಲ ಸೆರೆಮನೆ ವಾಸ ಅನುಭವಿಸಿದ್ದಾರೆ. (ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
There is good news for all the fans of Bollywood superstar Sanjay Dutt. Reportedly, Munnabhai MBBS star will be released on Thursday(Feb 25) after serving remaining 42 months of his five-year sentence. Actor is accused of possessing illegal arms in the March 12, 1993 Mumbai serial bomb blasts case.
Please Wait while comments are loading...