ಮಾಜಿ ಕ್ರಿಕೆಟ್ಟಿಗ ಸಲೀಲ್ ಅಂಕೋಲಾ ಪತ್ನಿ ಆತ್ಮಹತ್ಯೆ

ಪುಣೆ, ಡಿ.23- ಭಾರತದ ಮಾಜಿ ಕ್ರಿಕೆಟ್ಟಿಗ ಸಲೀಲ್ ಅಂಕೋಲಾ ಅವರ ಮಾಜಿ ಪತ್ನಿ ಪರಿಣತಿ ಅವರು ತಮ್ಮ ತವರು ಮನೆಯಲ್ಲಿ ಸಾವನ್ನಪ್ಪಿದ್ದಾರೆ.

ಪರಿಣತಿರನ್ನು ಬಿಟ್ಟ ನಂತರ ಸಲೀಲ್ ಅಂಕೋಲಾ ಇನ್ನೊಂದು ಮದುವೆ ಮಾಡಿಕೊಂದಿದ್ದರು. ಮದ್ಯದ ದಾಸರಾಗಿದ್ದ ಅಂಕೋಲಾ 2 ಬಾರಿ ಮದ್ಯವ್ಯಸನದಿಂದ ಮುಕ್ತಿ ಕಾಣಲು ಚಿಕಿತ್ಸೆ ಪಡೆದಿದ್ದರು.

ಪುಣೆಯಲ್ಲಿರುವ ತಮ್ಮ ಮಾತಾಪಿತೃಗಳ ಮನೆಯಲ್ಲಿ ಸಲೀಲ್ ಅಂಕೋಲಾರ ಪತ್ನಿ ಪರಿಣತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪುಣೆಯ Salisbury Parkನಲ್ಲಿರುವ ಅಪಾರ್ಟ್ ಮೆಂಟಿನಲ್ಲಿ ಭಾನುವಾರ ಮಧ್ಯಾಹ್ನ ಸೀಲಿಂಗ್ ಫ್ಯಾನಿಗೆ ನೇಣು ಹಾಕಿಕೊಂಡು ಪರಿಣತಿ ಸಾವಿಗೀಡಾಗಿದ್ದಾರೆ. ಪರಿಣತಿ ತನ್ನ ಅಪ್ಪ-ಅಮ್ಮ ಮದುವೆಗೆಂದು ಅಹಮದ್ ನಗರಕ್ಕೆ ಹೊರಹೋಗಿದ್ದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

46 ವರ್ಷದ ಪರಿಣತಿ ಅವರು ತವರು ಮನೆಯಲ್ಲಿ ವಾಸವಾಗಿದ್ದರು. ನನ್ನ ಸಾವಿಗೆ ಯಾರೂ ಕಾರಣರಲ್ಲ. ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಪರಿಣತಿ ಮರಣಪತ್ರ ಬರೆದಿಟ್ಟು ಸತ್ತಿದ್ದಾರೆ. ಅಂಕೋಲಾ ಮತ್ತು ಪರಿಣತಿ ದಂಪತಿಗೆ ಇಬ್ಬರು ಪುತ್ರರು ಇದ್ದಾರೆ.

Former Indian cricketer Salil Ankola's ex-wife Pariniti found dead in Pune
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+