ಕೊರೊನಾ ಸೋಂಕಿತರಿಗೆ Antidote, ಸುಳಿವು ಕೊಟ್ಟ ಪುಣೆ ವೈದ್ಯ
ಪುಣೆ, ಮಾರ್ಚ್ 13: ಚೀನಾದಿಂದ ವಿಶ್ವದೆಲ್ಲೆಡೆ ಹರಡಿ, ಆತಂಕ ಸೃಷ್ಟಿಸಿರುವ ಮಾರಣಾಂತಿಕ ಕೊರೊನಾವೈರಸ್ ತಡೆಗಟ್ಟಲು ವೈದ್ಯಕೀಯ ಲೋಕ ಶ್ರಮಪಡುತ್ತಿದೆ. ಸಂಶೋಧಕರು antidote ತಯಾರಿಯಲ್ಲಿ ತೊಡಗಿದ್ದಾರೆ. ಆದರೆ, ಕೊವಿಡ್ 19 ಚಿಕಿತ್ಸೆಗೆ ಸರಿಯಾದ ಚುಚ್ಚುಮದ್ದು ಅಭಿವೃದ್ಧಿಪಡಿಸಲು ತಕ್ಷಣಕ್ಕೆ ಸಾಧ್ಯವಿಲ್ಲ, ಕನಿಷ್ಠ ಒಂದೂವರೆ ವರ್ಷ ಬೇಕಾಗಬಹುದು ಎಂದು ಹಿರಿಯ ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.
ನೊವೆಲ್ ಕೊರೊನಾವೈರಸ್ ಚುದ್ದುಮದ್ದು ತಯಾರಿಸಿದರೂ ಅದು ಕ್ಲಿನಿಕಲ್ ಪರೀಕ್ಷೆಗೆ ಒಳಪಟ್ಟು, ಸರ್ಕಾರದ ಅನುಮತಿ ಪಡೆದು ಮಾರುಕಟ್ಟೆಯಲ್ಲಿ ಲಭ್ಯವಾಗಬೇಕಾದರೆ 15 ತಿಂಗಳಾದರೂ ಬೇಕಾಗುತ್ತದೆ ಎಂದು ಪುಣೆಯ ಐಸಿಎಂಆರ್ ವಿಭಾಗದ ಮುಖ್ಯಸ್ಥ ರಮಣ್ ಆರ್ ಗಂಗಖೇಡ್ಕರ್ ಅಭಿಪ್ರಾಯಪಟ್ಟಿದ್ದಾರೆ.

ದೇಶದ ಹಲವೆಡೆಗಳಿಂದ ಬರುವ ಥ್ರೋಟ್ ಸ್ಕ್ರ್ಯಾಬ್ ಸ್ಯಾಂಪಲ್ ಗಳನ್ನು ವಿಂಗಡಿಸಿ, ಕೊರೊನಾವೈರಸ್ ಸೋಂಕಿತರಿಗೆ ಪಾಸಿಟಿವ್, ನೆಗಟಿವ್ ಎಂದು ನಿರ್ಧರಿಸುವ ವೈದ್ಯರ ತಂಡದ ಮುಖ್ಯಸ್ಥರಾಗಿರುವ ಡಾ. ರಮಣ್ ಅವರು ವ್ಯಾಕ್ಸಿನ್ ತಯಾರಿ ಬಗ್ಗೆ ವಿವರಿಸಿದ್ದಾರೆ.











Click it and Unblock the Notifications