• search
  • Live TV
ಪುಣೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

1993ರ ಸರಣಿ ಸ್ಫೋಟ ಅಪರಾಧಿ ಯೂಸುಫ್ ಮೆಮೊನ್ ಸಾವು

|
Google Oneindia Kannada News

ನಾಸಿಕ್, ಜೂನ್ 26: 1993ರ ಸರಣಿ ಸ್ಫೋಟದ ಪ್ರಮುಖ ಅಪರಾಧಿ ಟೈಗರ್ ಮೆಮೊನ್ ಸೋದರ ಯೂಸುಫ್ ಮೆಮೊನ್ ಮೃತನಾಗಿದ್ದಾನೆ ಎಂದು ನಾಸಿಕ್ ಜೈಲು ಅಧಿಕಾರಿಗಳು ದೃಢಪಡಿಸಿದ್ದಾರೆ. ಸಾವಿನ ಕಾರಣ ಇನ್ನೂ ತಿಳಿದು ಬಂದಿಲ್ಲ, ಶವದ ಅಟ್ಸಾಪಿ ನಡೆಸಲು ಧುಲೆಗೆ ಕಳಿಸಲಾಗಿದೆ ಎಂದು ನಾಸಿಕ್ ಜೈಲು ಅಧಿಕಾರಿ ಹೇಳಿದರು.

1993ರ ಸರಣಿ ಸ್ಫೋಟದ ಇತರೆ ಅಪರಾಧಿಗಳಂತೆ ಯೂಸುಫ್ ಮೆಮೊನ್ ವಿರುದ್ಧಐಪಿಸಿ ಸೆಕ್ಷನ್ 302, 307, 326, 324, 435, 436 ಅನ್ವಯ ಪ್ರಕರಣಗಳು ದಾಖಲಾಗಿ, ಸಾಬೀತಾಗಿತ್ತು. ಇದಲ್ಲದೆ, ಸ್ಫೋಟಕ ವಸ್ತು ನಿಯಂತ್ರಣ ಕಾಯ್ದೆ ಸೆಕ್ಷನ್ 9 ಬಿ (1), ಸೆಕ್ಷನ್ 3, 4(ಎ), (ಬಿ) ಹಾಗೂ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ನಿಯಂತ್ರಣ ಕಾಯ್ದೆ ಸೆಕ್ಷನ್ 4ರ ಅಡಿಯಲ್ಲೂ ಆರೋಪ ಸಾಬೀತಾಗಿತ್ತು. ವಿಶೇಷ ಟಾಡಾ ಕೋರ್ಟಿನಲ್ಲಿ ಯೂಸುಫ್ ಗೆ ಜೀವಾವಧಿ ಶಿಕ್ಷೆ ಪ್ರಕಟಿಸಲಾಗಿತ್ತು.

1993ರ ಮುಂಬೈ ಸ್ಫೋಟ 2 ದಶಕದ ನಂತರ ತೀರ್ಪು-timeline1993ರ ಮುಂಬೈ ಸ್ಫೋಟ 2 ದಶಕದ ನಂತರ ತೀರ್ಪು-timeline

1993ರ ಮಾರ್ಚ್ 12ರಂದು ಮಧ್ಯಾಹ್ನ 1.30ರಿಂದ 3.40ರ ಮಧ್ಯೆ ಮುಂಬೈನ 12ಕ್ಕೂ ಅಧಿಕ ಕಡೆಗಳಲ್ಲಿ ಸಂಭವಿಸಿದ ಸ್ಫೋಟದಲ್ಲಿ 257ಕ್ಕೂ ಅಧಿಕ ಮಂದಿ ಮೃತಪಟ್ಟು 1400 ಮಂದಿ ಗಾಯಗೊಂಡಿದ್ದರು. 27 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಪಾಸ್ತಿಯೂ ಈ ಸ್ಫೋಟಕ್ಕೆ ನಾಶವಾಗಿತ್ತು.

ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ಕಟ್ಟಡ, ನಾರಿಮನ್ ಪಾಯಿಂಟ್ ನ ಏರ್ ಇಂಡಿಯಾ ಕಟ್ಟಡ, ವೊರ್ಲಿಯ ಸೆಂಚುತಿ ಬಜಾರ್, ಹೋಟೆಲ್ ಸೀ ರಾಕ್ ಹಾಗೂ ಜುಹೂನ ಸೆಂಟ್ಯೂರ್ ಸ್ಫೋಟ ಸಂಭವಿಸಿದ ಪ್ರಮುಖ ಸ್ಥಳಗಳಾಗಿತ್ತು.

ಜುಲೈ 30: ಯಾಕೂಬ್ ಮೆಮನ್ ಗೆ ಶಾಪವಾದ '2' ಸಂಖ್ಯೆಜುಲೈ 30: ಯಾಕೂಬ್ ಮೆಮನ್ ಗೆ ಶಾಪವಾದ '2' ಸಂಖ್ಯೆ

ಯೂಸುಫ್ ಸೋದರ ಟೈಗರ್ ಮೆಮೊನ್ ಈ ಸ್ಫೋಟದ ರುವಾರಿಯಾಗಿದ್ದ. ದಾವೂದ್ ಇಬ್ರಾಹಿಂ ಅಣತಿಯಂತೆ ಟೈಗರ್ ಸ್ಫೋಟದ ಸಂಚು ರೂಪಿಸಿದ್ದ. ಪಾತಕಿಗಳು ಉಳಿದುಕೊಳ್ಳಲು ಯೂಸುಫ್ ತನ್ನ ಅಲ್ ಹುಸೇನಿ ಕಟ್ಟಡದಲ್ಲಿದ್ದ ಫ್ಲಾಟ್, ಗ್ಯಾರೇಜ್ ಬಿಟ್ಟುಕೊಟ್ಟಿದ್ದ.

1993ರ ಮುಂಬೈ ಸ್ಫೋಟ ಪ್ರಕರಣದ ರೂವಾರಿ ಮತ್ತೊಬ್ಬ ಮೆಮೊನ್, ಯಾಕೂಬ್ ಮೆಮೊನ್ ಗೆ 2015ರಲ್ಲಿ ಗಲ್ಲುಶಿಕ್ಷೆಯಾಗಿದೆ. ಅಬು ಸಲೇಂಗೆ ವಿಶೇಷ ಟಾಡಾ (Terrorist and Disruptive Activity) ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ. ದಾವೂದ್ ಇಬ್ರಾಹಿಂ ಬಲಗೈ ಬಂಟ ಅಬು ಸಲೇಂ ಮತ್ತು ಕರೀಮುಲ್ಲಾ ಖಾನ್ ಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ್ದರೆ, ತಾಹಿರ್ ಮರ್ಚೆಂಟ್ ಮತ್ತು ಫಿರೋಜ್ ಖಾನ್ ಗೆ ಗಲ್ಲು ಶಿಕ್ಷೆ ವಿಧಿಸಿದೆ. ಇನ್ನೊಬ್ಬ ಅಪರಾಧಿ ರಿಯಾಜ್ ಸಿದ್ದಿಖಿಗೆ 10 ವರ್ಷಗಳ ಸೆರೆವಾಸದ ಶಿಕ್ಷೆ ವಿಧಿಸಲಾಗಿದೆ.

ಸ್ಫೋಟದ ರೂವಾರಿ ಮುಸ್ತಫಾ ದೊಸಾ ಮತ್ತು ಅಬು ಸಲೇಂ ಸೇರಿದಂತೆ 6 ಜನರನ್ನು ಅಪರಾಧಿಗಳು ಎಂದು ಟಾಡಾ ನ್ಯಾಯಾಲಯ ತೀರ್ಪು ನೀಡಿತ್ತು. ಆದರೆ ಕೋರ್ಟು ತೀರ್ಪು ನೀಡಿದ ಎರಡು ವಾರದಲ್ಲಿ ಮುಸ್ತಫಾ ದೊಸ್ಸಾ ಹೃದಯಾಘಾತದಿಂದ ಸಾವನ್ನಪ್ಪಿದ್ದ.ಮರಣದಂಡನೆ ಶಿಕ್ಷೆ ಪಡೆದಿದ್ದ ಮಹಮ್ಮದ್ ಇಕ್ಬಾಲ್ ಹಾಗೂ ಜೀವಾವಧಿ ಶಿಕ್ಷೆಗೊಳಗಾಗಿದ್ದ ಕಸ್ಟಮ್ ಅಧಿಕಾರಿಯಾಗಿದ್ದ ಎಸ್ ಎನ್ ಥಾಪಾ ಅವರು ಶಿಕ್ಷೆ ಅವಧಿ ಮುಗಿಯುವ ಮುನ್ನವೇ ಮೃತಪಟ್ಟಿದ್ದಾರೆ. ಒಟ್ಟಾರೆ 100 ಜನರನ್ನು ಅಪರಾಧಿಗಳು ಎಂದು ಘೋಷಿಸಲಾಯಿತು. 12 ಜನರಿಗೆ ಮರಣದಂಡನೆ ಹಾಗೂ 20 ಜನರಿಗೆ ಜೀವಾವಧಿ ಶಿಕ್ಷೆಯನ್ನು ಟಾಡಾ ಕೋರ್ಟ್ ಪ್ರಕಟಿಸಿತ್ತು.

English summary
Yusuf Memon, a 1993 Mumbai serial blasts case convict and a brother of absconding accused Tiger Memon, died on Friday at Nashik Road Prison in Maharashtra's Nashik district, a prison official said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X