ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆದುಳು ನಿಷ್ಕ್ರಿಯ: ಇಬ್ಬರು ಯೋಧರು ಸೇರಿ ಐವರ ಜೀವ ಉಳಿಸಿದ ಮಹಿಳೆ

|
Google Oneindia Kannada News

ಪುಣೆ, ಜಲೈ,16: ವ್ಯಕ್ತಿಯ ಜೀವ ಉಳಿಸುವ ಪುಣ್ಯ ಎಲ್ಲರಿಗೂ ಸಿಗುವುದಿಲ್ಲ. ಎಲ್ಲರೂ ಎಲ್ಲರ ಜೀವ ಉಳಿಸಲು ಹೋಗುವುದಿಲ್ಲ. ಅಂತಹ ಅವಕಾಶವೇ ಎಲ್ಲರಿಗೂ ಸಿಗುವುದಿಲ್ಲ. ತನ್ನ ಹೋಗುತ್ತಿರುವ ಜೀವವನ್ನು ಕೊನೆ ಕ್ಷಣದಲ್ಲಿ ಬದುಕುಳಿಸಿದ ವ್ಯಕ್ತಿ ಅವರ ಪಾಲಿನ ನಿಜ ದೇವರೇ ಆಗಿರುತ್ತಾರೆ. ಇನ್ನೂ ತನ್ನ ಅಂಗಗಳ ಕೊಟ್ಟು ಮತ್ತೊಬ್ಬರ ಜೀವ ಉಳಿಸಿದ ವ್ಯಕ್ತಿ ನಿಜಕ್ಕೂ ಆತ ತ್ಯಾಗಮಯಿಯೇ ಸರಿ ಅಂತಹದೊದ್ದು ಘಟನೆ ಇಲ್ಲಿ ಸಂಭವಿಸಿದೆ.

ಪುಣೆಯ ಕಮಾಂಡ್ ಹಾಸ್ಪಿಟಲ್ ಸದರ್ನ್ ಕಮಾಂಡ್‌ನಲ್ಲಿ (ಸಿಎಚ್‌ಎಸ್‌ಸಿ) ಇಬ್ಬರು ಸೇವೆ ಸಲ್ಲಿಸುತ್ತಿರುವ ಯೋಧರು ಸೇರಿದಂತೆ ಐವರಿಗೆ ಅಂಗಾಂಗ ದಾನದಿಂದ ಉಪಯೋಗವಾಗಿದೆ.

ಎರಡನೇ ಮದುವೆಯಾಗಲು ಸರ್ಕಾರಿ ನೌಕರರಿಗೆ ಅನುಮತಿ ಕಡ್ಡಾಯ!ಎರಡನೇ ಮದುವೆಯಾಗಲು ಸರ್ಕಾರಿ ನೌಕರರಿಗೆ ಅನುಮತಿ ಕಡ್ಡಾಯ!

ತನ್ನ ಜೀವನದ ಕೊನೆ ಕ್ಷಣ ಎಣಿಸುತ್ತಿದ್ದ ಮಹಿಳೆಯೊಬ್ಬರನ್ನು ಉಳಿಸಲೇಂದು ಕೊನೆಯ ಪ್ರಯತ್ನವೆಂದು ಕಮಾಂಡ್ ಹಾಸ್ಪಿಟಲ್ (ದಕ್ಷಿಣ ಕಮಾಂಡ್), ಗೆ ಕರೆತರಲಾಯಿತು. ಆದರೆ ತನ್ನ ದೇಹದಲ್ಲಿ ಮೆದುಳು ಕೆಲಸ ಮಾಡದೇ ನಿಷ್ಕ್ರಿಯಗೊಂಡು ಅವಳಲ್ಲಿ ಚಲನೆ ಕಂಡು ಬರಲಿಲ್ಲ. ನಂತರ ಆಸ್ಪತ್ರೆಯ ಸಿಬ್ಬಂದಿ ಮಹಿಳೆಯ ಪ್ರಾಣ ಉಳಿಸುವಲ್ಲಿ ಕೈ ಚೆಲ್ಲಿತು. ಬಳಿಕ ಮಹಿಳೆಯ ಕುಟುಂಬವು ಆಸ್ಪತ್ರೆಯ ಕಸಿ ಸಂಯೋಜಕ ವೈದ್ಯರೊಂದಿಗೆ ಚರ್ಚೆ ನಡೆಸಿ ಆ ಮಹಿಳೆಯ ಅಂಗಾಂಗಗಳನ್ನು ಅಗತ್ಯವಿರುವ ಬೇರೆ ರೋಗಿಗಳಿಗೆ ದಾನ ಮಾಡಬೇಕು ಎಂದು ನಿರ್ಧರಿಸಿದರು.

ಇಬ್ಬರು ಯೋಧರು ಸೇರಿ ಐದು ಜನರ ಜೀವ ಉಳಿಸಿದ ಮಹಿಳೆ!

ಅಗತ್ಯ ಅನುಮತಿ ಪ್ರಕ್ರಿಯೆಗಳ ನಂತರ ಪುಣೆಯ ಕಮಾಂಡ್ ಆಸ್ಪತ್ರೆಯಲ್ಲಿ ಕಸಿ ತಂಡವನ್ನು ತಕ್ಷಣವೇ ಸಕ್ರಿಯಗೊಳಿಸಲಾಯಿತು ಮತ್ತು ಎಚ್ಚರಿಕೆಗಳನ್ನು ವಲಯ ಕಸಿ ಸಮನ್ವಯ ಕೇಂದ್ರ ಮತ್ತು ಆರ್ಮಿ ಆರ್ಗನ್ ರಿಟ್ರೀವಲ್ ಮತ್ತು ಟ್ರಾನ್ಸ್‌ಪ್ಲಾಂಟ್ ಅಥಾರಿಟಿಗೆ ಸೂಚನೆ ಕಳುಹಿಸಿ ಅನುಮತಿ ಪಡೆದು ತಕ್ಷಣೆವೇ ಕ್ರಮಕ್ಕೆ ಮುಂದಾಗಲಾಯಿತು.

ಜುಲೈ, 14 ರ ರಾತ್ರಿ ಮತ್ತು ಜುಲೈ 15ರ ಮುಂಜಾನೆ ಮೂತ್ರಪಿಂಡಗಳಂತಹ ಕಾರ್ಯಸಾಧ್ಯವಾದ ಅಂಗಗಳನ್ನು ಭಾರತೀಯ ಸೇನೆಯ ಇಬ್ಬರು ಸೈನಿಕರಿಗೆ ಕಸಿ ಮಾಡಲಾಯಿತು. ಕಣ್ಣುಗಳನ್ನು ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜು ಸಂಕೀರ್ಣದ ಕಣ್ಣಿನ ಬ್ಯಾಂಕ್‌ನಲ್ಲಿ ಸಂರಕ್ಷಿಸಲಾಯಿತು. ಬಳಿಕ ಪುಣೆಯ ರೂಬಿ ಹಾಲ್ ಕ್ಲಿನಿಕ್‌ನಲ್ಲಿ ರೋಗಿಯೊಬ್ಬರಿಗೆ ಕಿಡ್ನಿಯನ್ನು ಅಳವಡಿಸಲಾಯಿತು.

ಇಬ್ಬರು ಯೋಧರು ಸೇರಿ ಐದು ಜನರ ಜೀವ ಉಳಿಸಿದ ಮಹಿಳೆ!

ಮಹಿಳೆಯ ಮರಣಾನಂತರ ಇಬ್ಬರಿಗೆ ಕಣ್ಣುಗಳ ದೃಷ್ಟಿಯನ್ನು ನೀಡಿತು. ಇದು ಜೀವನವನ್ನೇ ಕಳೆದುಕೊಳ್ಳಲಿದ್ದ ಇಬ್ಬರು ಯೋಧರು ಸೇರಿದಂತೆ ಐವರು ಮಂದಿಯ ಜೀವವನ್ನು ಉಳಿಸಿತು. ತಮ್ಮ ಜೀವದೊಂದಿಗೆ ಸ್ವರ್ಗ ಕಾಣುವ ಬದಲು ಇಲ್ಲಿಯೇ ಅಗತ್ಯವಿರುವವರಿಗೆ ತಮ್ಮ ಅಂಗಾಂಗ ನೀಡಿ ಅಮರರಾಗಿರಿ ಎಂದು ವಾಕ್ಯದಂತೆ ಉತ್ತಮ ಸಂದೇಶ ಸಾರಿತು ಎಂದು ರಕ್ಷಣಾ ಪಡೆಯ ಅಧಿಕಾರಿಗಳು ಶ್ಲಾಘಿಸಿದರು.

English summary
Brain-dead woman saved the life of 5 people including 2 serving Army soldiers in Command Hospital Southern Command (CHSC) in Pune.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X