ಪುಣೆ-ಸೋಲ್ಲಾಪುರ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ, 11 ಸಾವು

Posted By:
Subscribe to Oneindia Kannada

ಪುಣೆ, ಮಾರ್ಚ್. 11 : ಪುಣೆ-ಸೋಲ್ಲಾಪುರ ಹೆದ್ದಾರಿಯಲ್ಲಿ ಶನಿವಾರ ಖಾಸಗಿ ಬಸ್ ಮತ್ತು ಟ್ರಕ್ ನಡುವೆ ಭೀಕರ ರಸ್ತೆ ಅಪಘಾತದಲ್ಲಿ 11 ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ.

ಪುಣೆಜಿಲ್ಲೆಯ ಕಾಂಚನ್ ಪಟ್ಟಣದ ಉರಳಿ ಬಳಿ ಈ ಅಪಘಾತ ಸಂಭವಿಸಿದ್ದು 5 ಜನ ಮಹಿಳೆಯರು ಸೇರಿದಂತೆ ಒಟ್ಟು 11 ಜನರು ಸಾವನ್ನಪ್ಪಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರು ಮುಂಬೈನ ಮುಳುಂದ್ ನಿವಾಸಿಗಳಾಗಿದ್ದಾರೆ ಎಂದು ತಿಳಿದು ಬಂದಿದೆ.

ವಿಜಯ್ ಕಾಳೆ, ಜ್ಯೋತಿ ಕಾಳೆ, ಯೋಗೇಶ್ ಲೋಖಾಂಡೆ, ಜಯವಂತ್ ಚವಾಣ್, ಯೋಗಿತಾ ಚವಾಣ್, ರೇವತಿ ಚವಾಣ್, ಜಗದೀಶ್ ಪಂಡಿತ್ ಹಾಗೂ ಶೈಲಜಾ ಪಂಡಿತ್ ಮೃತ ದುರ್ದೈವಿಗಳು.

11 killed in bus-truck collision on the Pune-Solapur highway

ಮೃತ ಯಾತ್ರಾರ್ಥಿಗಳು ಬಸ್ ನಲ್ಲಿ ಸೋಲ್ಲಾಪುರ ಜಿಲ್ಲೆಯ ಅಕ್ಕಲಕೋಟದ ದೇವಸ್ಥಾನವೊಂದಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಬಸ್ ವೇಗವಾಗಿ ಹೋಗುವ ವೇಳೆ ಹಂದಿವೊಂದು ಅಡ್ಡ ಬಂದಿದೆ.

ಅದನ್ನು ಉಳಿಸಲು ಹೋಗಿ ಎದುರಿನಿಂದ ವೇಗವಾಗಿ ಬರುತ್ತಿದ್ದ ಟ್ರಕ್ ಗೆ ಬಸ್ ಡಿಕ್ಕಿ ಹೊಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
At least 11 people were killed and many others were seriously injured when a private bus collided head-on with a truck early on Saturday near Uruli-Kanchan town in Maharashtra’s Pune district.
Please Wait while comments are loading...