ಮೃತ ತಾಯಿಯ ಎಬ್ಬಿಸಲು ಕಂದನ ವಿಫಲ ಪ್ರಯತ್ನ: ರೈಲ್ವೆ ನಿಲ್ದಾಣದಲ್ಲಿ ಹೃದಯ ವಿದ್ರಾವಕ ಘಟನೆ

ಮುಜಫರ್‌ಪುರ, ಮೇ 28: ಎರಡು ವರ್ಷದ ಕಂದಮ್ಮನಿಗೆ ತಾಯಿ ಸತ್ತಿದ್ದಾಳೆ ಎಂಬ ಪರಿವೇ ಇಲ್ಲದೆ ತಾಯಿಯನ್ನು ಎಬ್ಬಿಸುವ ವಿಫಲ ಪ್ರಯತ್ನ ನಡೆಸುತ್ತಿದ್ದ ಮನಕಲಕುವ ಘಟನೆ ಬಿಹಾರ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

Recommended Video

      ಸತ್ತ ತಾಯಿಯನ್ನು ಎಬ್ಬಿಸಲು ಪ್ರಯತ್ನಿಸಿದ ಮಗು ವಿಡಿಯೋ ವೈರಲ್ | Oneindia Kannada

      ಮಹಿಳೆಯೊಬ್ಬಳು ತನ್ನ ಕುಟುಂಬದವರ ಜೊತೆಗೆ ರೈಲಿನಲ್ಲಿ ಬರುವಾಗ ತಾಯಿ ಮೃತಪಟ್ಟಿದ್ದಾಳೆ. ಆಕೆಯ ಮೃತದೇಹವನ್ನು ರೈಲ್ವೆ ನಿಲ್ದಾಣದ ನೆಲದ ಮೇಲೆ ಮಲಗಿಸಲಾಗಿತ್ತು.ಆದರೆ ಮಗು ತಾಯಿ ತನ್ನ ಜೊತೆ ಆಟವಾಡುತ್ತಿದ್ದಾಳೆ ಎಂದು ತಿಳಿದು ಆಕೆಯ ಚಾದರ ಎಳೆಯುವುದು, ಆಕೆಯ ಮೈಮೇಲೆ ಹೊರಳಾಡಿ ಎಬ್ಬಿಸಲು ಪ್ರಯತ್ನ ನಡೆಸುತ್ತಿತ್ತು.

      ಲಾಕ್‌ಡೌನ್‌ನಿಂದಾಗಿ ಲಕ್ಷಾಂತರ ವಲಸೆ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಯನ್ನು ಕಣ್ಣಿಗೆ ಕಟ್ಟುವಂತೆ ಬಿಂಬಿಸುವ ಈ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ರೈಲ್ವೆ ಪ್ಲಾಟ್‌ಫಾರಂನಲ್ಲಿ ಮಗುವೊಂದು ನೆಲದ ಹಾಸಿನ ಮೇಲೆ ಹಾಕಲಾದ ಮಹಿಳೆಯ ಮೇಲೆ ಹೊದಿಸಿರುವ ಚಾದರ ತೆಗೆದು ಎಬ್ಬಿಸಲು ಯತ್ನಿಸುತ್ತಿದೆ.

      ಅದೇ ಚಾದರವನ್ನು ತನ್ನ ಮುಖಕ್ಕೆ ಹೊಚ್ಚಿಕೊಂಡು ಆಟವಾಡುತ್ತಿದೆ. ಈ ದೃಶ್ಯವನ್ನು ನೋಡಿ ಪ್ರಯಾಣಿಕರು, ಟ್ವಿಟ್ಟಿಗರು ಮರುಕ ವ್ಯಕ್ತಪಡಿಸಿದ್ದಾರೆ.

       ತೇಜಸ್ವಿ ಯಾದವ್ ಆಪ್ತ ಸಂಜಯ್ ಯಾದವ್ ಹೇಳಿದ್ದೇನು?

      ತೇಜಸ್ವಿ ಯಾದವ್ ಆಪ್ತ ಸಂಜಯ್ ಯಾದವ್ ಹೇಳಿದ್ದೇನು?

      ಶ್ರಮಿಕ್ ರೈಲಿನಲ್ಲಿ ತಮ್ಮ ತವರು ರಾಜ್ಯಗಳಿಗೆ ಮರಳುತ್ತಿರುವ ವಲಸೆ ಕಾರ್ಮಿಕರ ಪೈಕಿ ಕಳೆದ ನಾಲ್ಕು ದಿನಗಳಿಂದ ಅನ್ನ-ನೀರು ಇಲ್ಲದೆ ತಾಯಿ ಮೃತಪಟ್ಟಿದ್ದಾಳೆ. ಆದರೆ, ಈ ಬಗ್ಗೆ ಏನೂ ಅರಿಯದ ಪುಟ್ಟ ಕಂದಮ್ಮ ತಾಯಿ ಮಲಗಿದ್ದಾಳೆ ಎಂದುಕೊಂಡು ತಾಯಿಯನ್ನು ಎಬ್ಬಿಸುವ ಪ್ರಯತ್ನ ಮಾಡುತ್ತಿದೆ. ಇದಕ್ಕೆ ಯಾರು ಹೊಣೆ? ಪ್ರತಿಪಕ್ಷಗಳು ಈ ಕಹಿ ಘಟನೆ ಕುರಿತಾಗಿ ಸರ್ಕಾರವನ್ನು ಪ್ರಶ್ನಿಸಬಾರದೇ? ಎಂದು ಕಿಡಿಕಾರಿದ್ದಾರೆ.

       ವಲಸೆ ಕಾರ್ಮಿಕರಿಗೆ ಆಹಾರ ಸರಬರಾಜು

      ವಲಸೆ ಕಾರ್ಮಿಕರಿಗೆ ಆಹಾರ ಸರಬರಾಜು

      ವಲಸೆ ಕಾರ್ಮಿಕರಿಗೆ ರೈಲು ಪ್ರಯಾಣದ ವೇಳೆ ಆಹಾರ, ನೀರು ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಆದರೆ ತನ್ನ ಸಂಬಂಧಿಕನ ಜೊತೆಗೆ ಅಹಮದಾಬಾದಿನಿಂದ ಮುಜಫರ್‌ಪುರಕ್ಕೆ ಬರುತ್ತಿದ್ದ ಸಂತ್ರಸ್ತ ಮಹಿಳೆ ರೈಲಿನಲ್ಲೇ ಸಾವನ್ನಪ್ಪಿದ್ದಾಳೆ. ಆಕೆಯ ಮರಣೋತ್ತರ ಪರೀಕ್ಷೆಗಾಗಿ ಆಕೆಯನ್ನು ಪ್ಲಾಟ್‌ಫಾರಂನಲ್ಲಿ ಮಲಗಿಸಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

       ಗುಜರಾತ್‌ನಿಂದ ರೈಲು ಹತ್ತಿದ್ದರು

      ಗುಜರಾತ್‌ನಿಂದ ರೈಲು ಹತ್ತಿದ್ದರು

      ಗುಜರಾತ್ ನಿಂದ ರೈಲು ಹತ್ತಿದ್ದ ಈ ಮಹಿಳೆಯ ಜೊತೆಯಲ್ಲಿ ಆಕೆಯ ಸಹೋದರಿ ಮತ್ತು ಸಹೋದರಿಯ ಪತಿ ಇಬ್ಬರೂ ಇದ್ದರು. ಆಹಾರ ಹಾಗೂ ನೀರು ಸಿಗದ ಪರಿಣಾಮ ಆಕೆ ಬಿಹಾರದ ಮುಜಪ್ಫರ್ ಪುರ ತಲುಪಿದ ಕೆಲವೇ ಕ್ಷಣಗಳಲ್ಲಿ ಮೃತಪಟ್ಟಿದ್ದು, ಮೃತ ದೇಹವನ್ನು ಪ್ಲಾಟ್ ಫಾರ್ಮ್ ನಲ್ಲೇ ಇರಿಸಲಾಗಿತ್ತು.

       ಆಹಾರ, ನೀರಿನ ಸಮಸ್ಯೆಯಾಗಿರಲಿಲ್ಲ

      ಆಹಾರ, ನೀರಿನ ಸಮಸ್ಯೆಯಾಗಿರಲಿಲ್ಲ

      ಆದರೆ ಈ ಘಟನೆಯ ಬಗ್ಗೆ ಪೊಲೀಸರು ಬೇರೆಯದ್ದೇ ಮಾಹಿತಿ ನೀಡಿದ್ದಾರೆ. ಮುಜಾಫ್ಫರ್ ಪುರದ ಸರ್ಕಾರಿ ರೈಲ್ವೆ ಪೊಲೀಸ್ ವಿಭಾಗದ ರಮಾಕಾಂತ್ ಉಪಾಧ್ಯಾಯ ಈ ಬಗ್ಗೆ ಮಾಹಿತಿ ನೀಡಿದ್ದು, ಈ ಘಟನೆ ಮೇ.25 ರಂದು ಅಹ್ಮದಾಬಾದ್ ನಿಂದ ಮುಜಾಫ್ಫರ್ ಪುರಕ್ಕೆ ವಿಶೇಷ ಶ್ರಮಿಕ್ ರೈಲಿನಲ್ಲಿ ಬಂದಾಗ ನಡೆದಿದೆ. "ನಮ್ಮ ಸಂಬಂಧಿ ಮಹಿಳೆ ರೈಲಿನಲ್ಲಿ ಏಕಾ ಏಕಿ ಮೃತಪಟ್ಟಿದ್ದಾರೆ. ರೈಲಿನಲ್ಲಿ ನಮಗೆ ಆಹಾರ, ನೀರಿಗೆ ಯಾವುದೇ ಸಮಸ್ಯೆಯಾಗಲಿಲ್ಲ" ಎಂದು ಮೃತ ಮಹಿಳೆಯ ಸಂಬಂಧಿಕರು ಹೇಳಿರುವುದನ್ನು ಪೊಲೀಸ್ ಅಧಿಕಾರಿ ಉಲ್ಲೇಖಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+