• search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತೈಲ ಬೆಲೆ ಏರಿಕೆ; ಸೈಕಲ್‌ನಲ್ಲಿ ಅಧಿವೇಶನಕ್ಕೆ ಬಂದ ತೇಜಸ್ವಿ ಯಾದವ್

|

ಪಾಟ್ನಾ, ಫೆಬ್ರವರಿ 26: ಕೇಂದ್ರ ಸರ್ಕಾರ ತೈಲ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಬಿಹಾರ ವಿಧಾನಸಭೆ ಬಜೆಟ್ ಅಧಿವೇಶನಕ್ಕೆ ಸೈಕಲ್ ಮೂಲಕ ಬಂದರು.

ಸೈಕಲ್‌ನಲ್ಲಿ ಬಂದ ಅವರು, ಅಧಿವೇಶನದಲ್ಲಿ ಪಾಲ್ಗೊಂಡು, ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲದ ಬೆಲೆಯನ್ನು ನಿರಂತರವಾಗಿ ಏರಿಕೆ ಮಾಡಲಾಗುತ್ತಿದೆ. ಇದು ಸಾಮಾನ್ಯ ಜನರಿಗೆ ನುಂಗಲಾರದ ತುತ್ತಾಗಿದೆ. ಬಡ ಹಾಗೂ ಮಧ್ಯಮ ವರ್ಗದವರು ಭಾರೀ ತೊಂದರೆ ಅನುಭವಿಸುವಂತಾಗಿದೆ. ಆದರೆ ಎನ್‌ಡಿಎ ನಿತೀಶ್ ಕುಮಾರ್ ಸರ್ಕಾರ ಮಾತ್ರ ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೇ ಮೌನವಾಗಿ ಕುಳಿತಿದೆ ಎಂದು ಟೀಕಿಸಿದರು.

 ನನ್ನ ಮಡಿಲಲ್ಲಿ ಆಡಿಲ್ಲವೇ?; ತೇಜಸ್ವಿ ಯಾದವ್ ಅಣಕಿಸಿದ ನಿತೀಶ್ ಕುಮಾರ್ ನನ್ನ ಮಡಿಲಲ್ಲಿ ಆಡಿಲ್ಲವೇ?; ತೇಜಸ್ವಿ ಯಾದವ್ ಅಣಕಿಸಿದ ನಿತೀಶ್ ಕುಮಾರ್

"ತೈಲ ಬೆಲೆ ಏರಿಕೆ ವಿರುದ್ಧ ನಾನು ಸೈಕಲ್‌ನಲ್ಲಿ ಅಧಿವೇಶನಕ್ಕೆ ಬಂದು ಪ್ರತಿಭಟನೆ ಮಾಡಿದ್ದೇನೆ. ಈ ಶ್ರೀಮಂತ ಸರ್ಕಾರ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆಯನ್ನು ಏರಿಸಿ ಸಾಮಾನ್ಯ ಮನುಷ್ಯನನ್ನು ಸಾಯುವಂತೆ ಮಾಡುತ್ತಿದೆ. ನಮ್ಮ ಡಬಲ್ ಎಂಜಿನ್ ರಾಜ್ಯ ಸರ್ಕಾರ ಮಾತ್ರ ಏನನ್ನೂ ಹೇಳುತ್ತಿಲ್ಲ. ಬಡ ಜನರಿಂದ ಲೂಟಿ ಮಾಡುವುದು ಹೇಗೆ ಎಂದು ಯೋಚಿಸುತ್ತಿದೆ ಎಂದು ದೂರಿದರು.

ಇದೇ ಫೆ.22ರಂದು ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿ ಟ್ರ್ಯಾಕ್ಟರ್‌ ನಲ್ಲಿ ಅಧಿವೇಶನಕ್ಕೆ ಬಂದಿದ್ದರು.

English summary
Leader of Opposition Tejashwi Yadav reached the Assembly riding a bicycle to highlight the rising prices of petrol and diesel in the state,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X