• search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಟ ಸುಶಾಂತ್ ಸಾವಿನ ಬೆನ್ನಲ್ಲೇ ಕುಟುಂಬಕ್ಕೆ ಮತ್ತೊಂದು ಆಘಾತ

|

ಪಾಟ್ನಾ, ಜೂನ್ 16: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಧನರಾದ ಬೆನ್ನಲ್ಲೇ ಅವರ ಕುಟುಂಬಕ್ಕೆ ಮತ್ತೊಂದು ಆಘಾತ ಎದುರಾಗಿದೆ.

ಸುಶಾಂತ್ ಸಿಂಗ್ ಅವರ ಸಹೋದರನ ಪತ್ನಿ ಸುಧಾದೇವಿ ಎಂಬುವವರ ಸೋಮವಾರ ಮಧ್ಯಹ್ನದ ವೇಳೆಗೆ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಸುಶಾಂತ್ ಆತ್ಮಹತ್ಯೆ ಸುದ್ದಿ ತಿಳಿದ ಬಳಿಕ ಆಕೆ ಆಹಾರ ಸೇವಿಸಿರಲಿಲ್ಲ, ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದ ಸುಧಾದೇವಿ ಸೋಮವಾರ ಮಧ್ಯಾಹ್ನ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

ಧೋನಿ ಪಾತ್ರದಲ್ಲಿ ಮಿಂಚಿದ್ದ ಸುಶಾಂತ್ ಸಿಂಗ್ ಆತ್ಮಹತ್ಯೆ

ಇತ್ತ ಮುಂಬೈನಲ್ಲಿ ಸುಶಾಂತ್ ಸಿಂಗ್ ಅಂತ್ಯಕ್ರಿಯೆ ನಡೆಯುತ್ತಿದ್ದರೆ ಅತ್ತ ಬಿಹಾರದ ಪೂರ್ಣಿಯಾದಲ್ಲಿ ಅವರ ಅತ್ತಿಗೆ ಕೊನೆಯುಸಿರೆಳೆದಿದ್ದಾರೆ.ಸುಶಾಂತ್ ಆತ್ಮಹತ್ಯೆ ಸುದ್ದಿ ಬಳಿಕ ತಂದೆ ಕೂಡ ತೀವ್ರ ಅನಾರೋಗ್ಯಕ್ಕೆ ಒಳಗಾಗಿರುವ ಸುದ್ದಿ ಈಗಾಗಲೇ ಬಿತ್ತರವಾಗಿದೆ. ಒಟ್ಟಿನಲ್ಲಿ ಸುಶಾಂತ್ ಕುಟುಂಬ ಹಾಗೂ ಆಪ್ತ ವರ್ಗಕ್ಕೆ ಒಂದಾದ ಮೇಲೊಂದು ಆಘಾತ ಆಗುತ್ತಲೇ ಇದೆ.

ಪ್ರತಿಭಾವಂತ ಸ್ಟಾರ್ ನಟನ ದುರಂತ ಅಂತ್ಯವು ಯಾರಿಗೂ ಅರಗಿಸಿಕೊಳ್ಳಲಾಗುತ್ತಿಲ್ಲ. ಎಂಎಸ್ ಧೋನಿ ಅನ್‌ಟೋಲ್ಡ್ ಸೇರಿ ಅದ್ಭುತ ಚಿತ್ರಗಳಲ್ಲಿ ನಟಿಸಿದ್ದ ಸುಶಾಂತ್ ಸಿಂಗ್ ಭಾನುವಾರ ಮಧ್ಯಾಹ್ನ ಅವರ ಫ್ಲಾಟ್‌ನಲ್ಲಿ ನೇಣುಬಿಗಿಸುಕೊಂಡು ಮೃತಪಟ್ಟಿರುವುದು ತಿಳಿದುಬಂದಿತ್ತು.

ನಟ ಸುಶಾಂತ್ ಸಿಂಗ್ ಸಾವಿಗೆ 'Asphyxia' ಕಾರಣ ಎಂದ ಮರಣೋತ್ತರ ಪರೀಕ್ಷೆ ವರದಿ

ಚಿತ್ರರಂಗದಲ್ಲಿನ ಅಸಮಾನತೆಯಿಂದಲೇ ಸುಶಾಂತ್ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಈಗ ಹೊರಬರುತ್ತಿದೆ. ಸುಶಾಂತ್ ನಿಧನಕ್ಕೂ ಕೆಲದಿನಗಳ ಹಿಂದೆ ಆತನ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು.

ಬಾಲಿವುಡ್ ಒತ್ತಡದಿಂದಾಗಿ ಸುಶಾಂತ್ ಆತ್ಮಹತ್ಯೆ?

ಬಾಲಿವುಡ್ ಒತ್ತಡದಿಂದಾಗಿ ಸುಶಾಂತ್ ಆತ್ಮಹತ್ಯೆ?

ನೇಣು ಬಿಗಿದ ಸ್ಥಿತಿಯಲ್ಲಿ ಭಾನುವಾರ ಪತ್ತೆಯಾಗಿದ್ದ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಅಂತ್ಯಕ್ರಿಯೆ ಮುಂಬೈನಲ್ಲಿ ಸೋಮವಾರ ನಡೆದಿದೆ. ಹಲವು ನಟರು ಹಾಗೂ ಚಿತ್ರೋದ್ಯಮದ ಹಲವರು ಅಗಲಿದ ನಟನಿಗೆ ವಿದಾಯ ಹೇಳಿದರು. ಈ ನಡುವೆ , ನಟನ ಸಾವಿನ ಕುರಿತು ಸಾಕಷ್ಟು ಚರ್ಚೆಯಾಗುತ್ತಿದ್ದು, ಹಲವು ಮಂದಿ ಬಾಲಿವುಡ್ ಬಗ್ಗೆಯೇ ಬೊಟ್ಟು ಮಾಡಿದ್ದಾರೆ.

ಬಾಲಿವುಡ್‌ನಿಂದ ನಿರ್ಲಕ್ಷ್ಯ

ಬಾಲಿವುಡ್‌ನಿಂದ ನಿರ್ಲಕ್ಷ್ಯ

ಗಾಡ್‌ಫಾದರ್ ಇಲ್ಲದೆ ಚಿತ್ರರಂಗ ಪ್ರವೇಶಿಸಿದ ಸುಶಾಂತ್ ಅವರನ್ನು ಬಾಲಿವುಡ್ ನಿರ್ಲಕ್ಷಿಸಿತ್ತು. ತಮ್ಮ ಸಿನಿಮಾದಲ್ಲಿ ನಟಿಸಲಿಲ್ಲ ಎಂಬ ಕಾರಣಕ್ಕೆ ಬಾಲಿವುಡ್ ಅನ್ನು ಆಳುತ್ತಿರುವ ಕೆಲವು ನಿರ್ದೇಶಕರು, ನಿರ್ಮಾಪಕರು ಸುಶಾಂತ್ ಅವರ ಸಿನಿಮಾಗಳಿಗೆ ಯಾವುದೇ ಮನ್ನಣೆ ಸಿಗದಂತೆ ನೋಡಿಕೊಂಡರು. ಅವರು ನಟಿಸಿದ್ದ ಸಿನಿಮಾಗಳ ಕೆಲಸಗಳಿಗೆ ಅಡ್ಡಿ ಪಡಿಸಿದ್ದರು. ಅತ್ಯುತ್ತಮವಾಗಿ ಅಭಿನಯಿಸಿದರೂ ಅವರ ಯಾವುದೇ ಸಿನಿಮಾಗಳಿಗೆ ಪ್ರಶಸ್ತಿ ಸಿಗದಂತೆ ಮಾಡಿದ್ದರು. ಇದರಿಂದ ಸುಶಾಂತ್ ತೀವ್ರವಾಗಿ ನೊಂದುಕೊಂಡಿದ್ದರು ಎಂಬುದು ತಿಳಿದುಬಂದಿದೆ.

ಸುಶಾಂತ್‌ಗೆ ಮನ್ನಣೆ ಸಿಗಲಿಲ್ಲ

ಸುಶಾಂತ್‌ಗೆ ಮನ್ನಣೆ ಸಿಗಲಿಲ್ಲ

ಸುಶಾಂತ್ ಒಬ್ಬ ರಾಂಕ್ ವಿಜೇತ , ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲ ವ್ಯಕ್ತಿ ಅವರಲ್ಲ, ನನ್ನ ಸಿನಿಮಾ ನೋಡಿ , ನನಗೆ ಗಾಡ್ ಫಾದರ್ ಇಲ್ಲ, ನನ್ನನ್ನು ಚಿತ್ರೋದ್ಯಮದಿಂದ ಹೊರಗಟ್ಟಿಬಿಡುತ್ತಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅವರು ಅಂಗಲಾಚಿಕೊಂಡಿದ್ದರು. ಅವರು ಅಭಿನಯಿಸಿದ ಸಿನಿಮಾಗಳಿಗೆ ಬಾಲಿವುಡ್ ಮನ್ನಣೆ ನೀಡಲಿಲ್ಲ. ಪ್ರಶಸ್ತಿ ನೀಡಿ ಪುರಸ್ಕರಿಸಲೂ ಇಲ್ಲ ಎಂದು ನಟಿ ಕಂಗನಾ ರಣಾವತ್ ತಿಳಿಸಿದ್ದಾರೆ.

ಆರ್ಥಿಕ ಸಂಕಷ್ಟ ಕೂಡ ಕಾಡಿತ್ತು

ಆರ್ಥಿಕ ಸಂಕಷ್ಟ ಕೂಡ ಕಾಡಿತ್ತು

ಬಾಲಿವುಡ್‌ನ ಕೆಲ ಮಂದಿಯ ಕುತಂತ್ರದಿಂದಾಗಿ ತಮ್ಮ ಸಿನಿಮಾಗಳು ಓಡದ ಕಾರಣ ಸುಶಾಂತ್ ಅವರಿಗೆ ಆರ್ಥಿಕ ಸಂಕಷ್ಟವೂ ಎದುರಾಗಿತ್ತು. ಈ ನಡುವೆ ಮದುವೆ ಪ್ರಸ್ತಾಪಕ್ಕೆ ಒಪ್ಪಿದ್ದ ಸುಶಾಂತ್ ನವೆಂಬರ್‌ನಲ್ಲಿ ಮದುವೆಯಾಗಲು ಒಪ್ಪಿಕೊಂಡಿದ್ದರು ಎಂದು ಆಪ್ತರು ಹೇಳಿಕೊಂಡಿದ್ದಾರೆ.

English summary
Bollywood actor Sushant Singh Rajput breathed his last on June 14. The actor was found dead at his Bandra home on Sunday morning. During his last rites, his sister-in-law also passed away after not bearing the loss of the actor's death.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X