ಸಂಕಲ್ಪ ಯಾತ್ರೆ ನೆಪದಲ್ಲಿ 9 ವರ್ಷ ಬಳಿಕ ಮೋದಿ- ನಿತೀಶ್ ಮೋಡಿ

ಪಾಟ್ನಾ, ಮಾರ್ಚ್ 03: ಲೋಕಸಭೆ ಚುನಾವಣೆ 2019 ಹಿನ್ನಲೆಯಲ್ಲಿ ಐತಿಹಾಸಿಕ ಗಾಂಧಿ ಮೈದಾನದಲ್ಲಿ ಮೋದಿ ನೇತೃತ್ವದಲ್ಲಿ ವಿಜಯ ಸಂಕಲ್ಪ ಯಾತ್ರೆ ಆಯೋಜನೆ ಮಾಡಲಾಗಿದೆ. ಸುಮಾರು 9 ವರ್ಷಗಳ ಬಳಿಕ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಕಳೆದ ತಿಂಗಳು ಇಲ್ಲಿ ಕಾಂಗ್ರೆಸ್ ನಡೆಸಿದ 'ಜನ್ ಅಕಾಂಕ್ಷಾ' ಸಮಾವೇಶಕ್ಕೆ ಉತ್ತರ ನೀಡಲು ವಿಜಯ ಸಂಕಲ್ಪ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಮಾರ್ಚ್ 03ರ ಸಮಾವೇಶದಲ್ಲಿ ಎಲ್ ಜೆಪಿ ನಾಯಕ ರಾಮ್ ವಿಲಾಸ್ ಪಾಸ್ವಾನ್ ಅವರು ಉಪಸ್ಥಿತರಿದ್ದಾರೆ.

Sankalp Rally : PM Modi, Nitish Kumar come together after 9 years

ಮೋದಿ ನೇತೃತ್ವದ ಎನ್ಡಿಎ ಈ ಬಾರಿ 40 ಸ್ಥಾನಗಳನ್ನು ಗೆದ್ದು ದಾಖಲೆ ಬರೆಯಲಿದೆ ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಹೇಳಿದರು. ನಂತರ ಮಾತನಾಡಿದ ಮೋದಿ, ಜೈ ಜವಾನ್ ಹಾಗೂ ಜೈ ಕಿಸಾನ್ ಮಂತ್ರವನ್ನು ಪಠಿಸಿದರು.

ನಿತೀಶ್ ಕುಮಾರ್ ಅವರ ನೇತೃತ್ವದ ಸರ್ಕಾರವು ಬಿಹಾರವನ್ನು ಅಭಿವೃದ್ಧಿಪಥದಂಥ ಕೊಂಡೊಯ್ಯುತ್ತಿದೆ. ಗ್ರಾಮಗಳ ವಿದ್ಯುತೀಕರಣವೇ ಇದಕ್ಕೆ ಸಾಕ್ಷಿ. ಬಿಹಾರದ ಎಲ್ಲಾ ಮನೆಗಳಿಗೂ ವಿದ್ಯುತ್ ಒದಗಿಸಿದ್ದಾರೆ.

ಬಿಹಾರ ಹಾಗೂ ರಾಷ್ಟ್ರ ರಾಜಕೀಯದಲ್ಲಿನ ಭ್ರಷ್ಟಾಚಾರ ವ್ಯವಸ್ಥೆಯನ್ನು ಅಂತ್ಯಗೊಳಿಸಿದ್ದೇವೆ. ಕೇಂದ್ರ ಸರ್ಕಾರದಿಂದ ರೈತರಿಗೆ ಸಾಲ ಯೋಜನೆ, 12 ಕೋಟಿ ರೈತರಿಗೆ ವಾರ್ಷಿಕ 6 ಸಾವಿರ ರು, ಮನೆ ಮನೆಗೂ ಎಲ್ ಪಿಜಿ, ಹೀಗೆ ಅನೇಕ ಯೋಜನೆಗಳು ನಿಮಗೆ ನೀಡಿದ್ದು ಇದೆ ಚೌಕಿದಾರ ಎಂದು ಮೋದಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+