• search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸುಶೀಲ್ ಮೋದಿಗೆ ದಕ್ಕದ ಡಿಸಿಎಂ ಸ್ಥಾನ, ಕೇಂದ್ರಕ್ಕೆ ಬುಲಾವ್?

|

ಪಾಟ್ನಾ, ನ. 16: ಚುನಾವಣೆಗೂ ಮುನ್ನ ಭರವಸೆ ನೀಡಿದಂತೆ ನಿತೀಶ್ ಕುಮಾರ್ ಅವರಿಗೆ ಮತ್ತೆ ಸಿಎಂ ಸ್ಥಾನ ನೀಡಲಾಗಿದೆ. ಸುಶೀಲ್ ಮೋದಿ ಅವರಿಗೆ ಈ ಬಾರಿಗೆ ಉಪ ಮುಖ್ಯಮಂತ್ರಿ ಸ್ಥಾನ ಕೈ ತಪ್ಪಿದೆ. ಈ ನಡುವೆ ಸುಶೀಲ್ ಅವರನ್ನು ಕೇಂದ್ರಕ್ಕೆ ಮತ್ತೆ ಕರೆಸಿಕೊಳ್ಳಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿರುವ ಸುದ್ದಿ ಬಂದಿದೆ.

ನಿತೀಶ್ ಅವರಿಗೆ ಸಿಎಂ ಸ್ಥಾನ ನೀಡಿದಂತೆ ಡಿಸಿಎಂ ಆಗಿ ಈ ಬಾರಿಯೂ ಬಿಜೆಪಿಯಿಂದ ಸುಶೀಲ್ ಮೋದಿ ಅವರಿಗೆ ಅವಕಾಶ ಸಿಗಲಿದೆ ಎಂದು ಸುದ್ದಿಯಿತ್ತು. 2005ರಿಂದ ಡಿಸಿಎಂ ಆಗಿ ನಿತೀಶ್ ಜೊತೆ ಒಳ್ಳೆ ಬಾಂಧವ್ಯ ಹೊಂದಿರುವ ಸುಶೀಲ್ ಹೆಸರು ಮುಂಚೂಣಿಯಲ್ಲಿದ್ದರು. ಆದರೆ, ಈ ಬಾರಿ ಹೊಸಬರನ್ನು ಡಿಸಿಎಂ ಸ್ಥಾನಕ್ಕೆ ಗಯಾ ಕ್ಷೇತ್ರದ ಎಂಟು ಬಾರಿ ಶಾಸಕ ಪ್ರೇಮ್ ಕುಮಾರ್, ದಲಿತ ಎಂಎಲ್ಸಿ ಕಾಮೇಶ್ವರ್ ಚೌಪಾಲ್ ಅವರ ಹೆಸರು ಡಿಸಿಎಂ ಸ್ಥಾನಕ್ಕಾಗಿ ಕೇಳಿ ಬಂದಿತ್ತು, ಆದರೆ, ಅಂತಿಮವಾಗಿ ತರ್ಕಿಶೋರ್ ಪ್ರಸಾದ್, ರೇಣು ದೇವಿ ಸದ್ಯಕ್ಕೆ ಪ್ರಮಾಣ ವಚನ ಸ್ವೀಕರಿಸಲು ಸಿದ್ಧರಾಗುತ್ತಿದ್ದಾರೆ.

Live: ನಿತೀಶ್ ಕುಮಾರ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ

ಎನ್ಡಿಎ ಮೈತ್ರಿಕೂಟದಲ್ಲಿರುವ ಬಿಜೆಪಿ, ಜೆಡಿಯು, ಹಿಂದೂಸ್ತಾನ್ ಅವಾಮ್ ಮೋರ್ಚಾ, ವಿಕಾಶ್ ಶೀಲ್ ಇನ್ಸಾನ್ ಪಾರ್ಟಿಯಿಂದ ಯಾರು ಯಾರು ಕ್ಯಾಬಿನೆಟ್ ಸೇರಲಿದ್ದಾರೆ ಎಂಬುದು ಇನ್ನೂ ನಿರ್ಧಾರವಾಗಬೇಕಿದೆ. 2005ರಿಂದ ನಿತೀಶ್ ಪರ ನಿಂತು ಡಿಸಿಎಂ ಹುದ್ದೆ ನಿಭಾಯಿಸಿದ್ದ ಸುಶೀಲ್ ಅವರಿಗೆ ಯಾವ ಜವಾಬ್ದಾರಿ ಸಿಗುವುದೋ ಕಾದು ನೋಡಬೇಕಿದೆ.

ಸುಶೀಲ್ ಮೋದಿ ಪ್ರತಿಕ್ರಿಯೆ

ಸುಶೀಲ್ ಮೋದಿ ಪ್ರತಿಕ್ರಿಯೆ

1990ರಿಂದ ಬಿಹಾರದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ಸುಶೀಲ್ ಮೋದಿ ಅವರನ್ನು ದೆಹಲಿಗೆ ಕರೆಸಿಕೊಂಡು ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ನೀಡಲು ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ ಎಂಬ ಸುದ್ದಿಯಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸುಶೀಲ್, ''ನನ್ನ 40 ವರ್ಷಗಳ ರಾಜಕೀಯ ಜೀವನಕ್ಕೆ ಬಿಜೆಪಿ ಹಾಗೂ ಸಂಘ ಪರಿವಾರದಿಂದ ಸಾಕಷ್ಟು ಸಿಕ್ಕಿದೆ. ಪಕ್ಷ ಬಯಸಿದಂತೆ ನಡೆದುಕೊಳ್ಳುತ್ತೇನೆ, ಕಾರ್ಯಕರ್ತನಾಗಿ ನನ್ನ ಕರ್ತವ್ಯವನ್ನು ನಿಭಾಯಿಸುತ್ತೇನೆ. ಅದನ್ನು ನನ್ನಿಂದ ಯಾರು ಕಸಿಯಲು ಸಾಧ್ಯವಿಲ್ಲ'' ಎಂದಿದ್ದಾರೆ.

24 ಸದಸ್ಯರ ಪೈಕಿ 10 ಮಂದಿಗೆ ಸೋಲು

24 ಸದಸ್ಯರ ಪೈಕಿ 10 ಮಂದಿಗೆ ಸೋಲು

ಹಾಲಿ ಸಚಿವ ಸಂಪುಟದ 24 ಸದಸ್ಯರ ಪೈಕಿ ಜೆಡಿಯು ಹಾಗೂ ಬಿಜೆಪಿ ಸೇರಿದಂತೆ 10 ಮಂದಿ ಸೋಲು ಕಂಡಿದ್ದಾರೆ. ಸುಶೀಲ್ ಮೋದಿ ಸೇರಿದಂತೆ 6 ಮಂದಿ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಹಾಲಿ ಬಿಹಾರ ಸಚಿವ ಸಂಪುಟದಲ್ಲಿ ಸಿಎಂ ನಿತೀಶ್, ಡಿಸಿಎಂ ಸುಶೀಲ್ ಮೋದಿ ಸೇರಿದಂತೆ 30 ಸಚಿವರಿದ್ದಾರೆ. ಈ ಪೈಕಿ 18 ಜೆಡಿಯು ಹಾಗೂ 12 ಬಿಜೆಪಿ ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿದೆ. ಈ ಬಾರಿಗೆ ಬಿಜೆಪಿಗೆ ಹೆಚ್ಚಿನ ಸಚಿವ ಸ್ಥಾನ ಸಿಗಲಿದೆ.

ಜಿತಿನ್ ರಾಂ ಮಾಂಝಿ ಸಚಿವ ಸಂಪುಟ ಸೇರುವುದಿಲ್ಲ

ಜಿತಿನ್ ರಾಂ ಮಾಂಝಿ ಸಚಿವ ಸಂಪುಟ ಸೇರುವುದಿಲ್ಲ

ಜೆಡಿಯುನ ಶೈಲೇಶ್ ಕುಮಾರ್, ಸಂತೋಶ್ ಕುಮಾರ್ ನಿರಾಳ, ಜಯ್ ಕುಮರ್ ಸಿಂಗ್, ಕೃಷ್ಣಾನಂದನ್ ವರ್ಮ, ರಾಮ್ ಸೇವಕ್ ಸಿಂಗ್, ರಾಮೇಶ್ವ ರಿಶಿದೇವ್, ಖುರ್ಷಿದ್ ಅಲಿಯಾಸ್ ಫಿರೋಜ್ ಅಹ್ಮದ್, ಲಕ್ಷ್ಮೇಶ್ವರ್ ರಾಯ್ ಸೋಲು ಕಂಡಿದ್ದಾರೆ. ಬಿಜೆಪಿಯ ಸುರೇಶ್ ಕುಮಾರ್ ಶರ್ಮ, ಬ್ರಿಜ್ ಕುಮಾರ್ ಬಿಂಡ್ ಸೋತಿದ್ದಾರೆ. ಎಚ್ಎಎಂ ಮುಖ್ಯಸ್ಥ, ಮಾಜಿ ಸಿಎಂ ಜಿತಿನ್ ರಾಂ ಮಾಂಝಿ ಅವರು ಸಚಿವ ಸಂಪುಟ ಸೇರುವುದಿಲ್ಲ ಎಂದು ಈಗಾಗಲೇ ಘೋಷಿಸಿದ್ದಾರೆ.

ಬಿಹಾರದ 243 ವಿಧಾನಸಭಾ ಸದಸ್ಯ ಬಲ

ಬಿಹಾರದ 243 ವಿಧಾನಸಭಾ ಸದಸ್ಯ ಬಲ

ಬಿಹಾರದ 243 ವಿಧಾನಸಭಾ ಸದಸ್ಯ ಬಲವಿದ್ದು, ಯಾವದೇ ಪಕ್ಷಕ್ಕೆ ಸರ್ಕಾರ ರಚಿಸಲು ಸ್ಪಷ್ಟ ಬಹುಮತಕ್ಕೆ 122 ಸ್ಥಾನಗಳು ಬೇಕು. ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ ಡಿಎ) 125 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ. ಬಿಜೆಪಿ 74, ಜೆಡಿಯು 43, ವಿಐಪಿ 4 ಹಾಗೂ ಹಿಂದೂಸ್ಥಾನ್ ಅವಂ ಮೋರ್ಚಾ ಪಕ್ಷವು 4 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ಈ ಮೂಲಕ ಎನ್ ಡಿಎ ಮೈತ್ರಿಕೂಟಕ್ಕೆ ಸಿಎಂ ಕುರ್ಚಿ ಖಾತ್ರಿಯಾಗಿದ್ದು, ಒಪ್ಪಂದದಂತೆ ನಿತೀಶ್ ಅವರಿಗೆ ಸಿಎಂ ಸ್ಥಾನವನ್ನು ಬಿಜೆಪಿ ಬಿಟ್ಟುಕೊಟ್ಟಿದೆ.

English summary
Janata Dal United president Nitish Kumar is all set to be sworn in as the Chief Minister of Bihar for the fourth straight term.Sushil Modi Likely to Get a Post in Union Cabinet
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X