ಅಂಗಡಿ ಮುಂದೆ ವ್ಯಕ್ತಿ ಸಾವು; 6 ಗಂಟೆ ರಸ್ತೆಯಲ್ಲೇ ಉಳಿದ ಶವ!
ಪಾಟ್ನಾ, ಜುಲೈ 16 : ಬಿಹಾರದ ಪಾಟ್ನಾದ ಮೆಡಿಕಲ್ ಸ್ಟೋರ್ ಬಳಿ ವ್ಯಕ್ತಿಯೊಬ್ಬ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಜನರು ಮಾನವೀಯತೆ ಮರೆತಿದ್ದು 6 ಗಂಟೆಗಳ ಕಾಲ ಶವ ಅಲ್ಲಿಯೇ ಇತ್ತು.
Recommended Video
ಪಾಟ್ನಾದ ಬಾಗಲ್ಪುರ್ ಎಂಬ ಜನ ನಿಬೀಡ ಮಾರುಕಟ್ಟೆ ಪ್ರದೇಶದಲ್ಲಿರುವ ಮೆಡಿಕಲ್ ಸ್ಟೋರ್‌ಗೆ ವ್ಯಕ್ತಿ ಬಂದಿದ್ದ. ಔಷಧ ಖರೀದಿ ಮಾಡಲು ಬಂದಿದ್ದ ಆತ ಉಸಿರಾಟದ ತೊಂದರೆಯಿಂದಾಗಿ ಅಲ್ಲಿಯೇ ಕುಸಿದು ಬಿದ್ದು ಮೃತಪಟ್ಟ.
ಬೆಳಗ್ಗೆ 10.30ಕ್ಕೆ ವ್ಯಕ್ತಿ ಸಾವನ್ನಪ್ಪಿದರೂ 4.30ಕ್ಕೆ ಶವವನ್ನು ಅಲ್ಲಿಂದ ಸಾಗಣೆ ಮಾಡಲಾಯಿತು. ವ್ಯಕ್ತಿ ಕೊರೊನಾ ವೈರಸ್ ಸೋಂಕಿನ ಕಾರಣದಿಂದಾಗಿ ಮೃತಪಟ್ಟಿರಬಹುದು ಎಂದು ಜನರು ಶಂಕಿಸಿದ್ದು, ಶವವನ್ನು ಮುಟ್ಟಲೂ ಹೋಗಲಿಲ್ಲ.

ಔಷಧಿ ಅಂಗಡಿಯ ಮಾಲೀಕ ಪೊಲೀಸರಿಗೆ ಕರೆ ಮಾಡಿ ಘಟನೆ ಬಗ್ಗೆ ಮಾಹಿತಿ ನೀಡಿದ್ದ. ಆದರೆ, ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಹ ಯಾವುದೇ ಸುರಕ್ಷತಾ ಕ್ರಮಗಳು ಇಲ್ಲದ ಕಾರಣ ಶವವನ್ನು ಮುಟ್ಟಲಿಲ್ಲ.
ಹಿರಿಯ ಅಧಿಕಾರಿಯೊಬ್ಬರು ಅಂಬ್ಯುಲೆನ್ಸ್‌ಗೆ ಕರೆ ಮಾಡಿದರು. ಸ್ಥಳಕ್ಕೆ ಬಂದ ಅಂಬ್ಯುಲೆನ್ಸ್ ಚಾಲಕ ಪಿಪಿಇ ಕಿಟ್ ಧರಿಸದ ಕಾರಣ ಶವನ್ನು ಮುಟ್ಟದೇ ಅಲ್ಲಿಂದ ವಾಪಸ್ ಆದ. 4.30ಕ್ಕೆ ಬಂದ ಅಂಬ್ಯುಲೆನ್ಸ್‌ನಲ್ಲಿ ಶವ ಸಾಗಣೆ ಮಾಡಲಾಯಿತು.
ಕೊರೊನಾ ವೈರಸ್ ಸೋಂಕಿತರಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗುತ್ತಿಲ್ಲ ಎಂಬ ಆರೋಪಗಳಿವೆ. ಈಗ ಸ್ಥಳದಲ್ಲಿ ಕುಸಿದು ಬಿದ್ದು ಮೃತಪಟ್ಟವರೂ ಸಹ ಯಾರೂ ಸಹ ಶವವನ್ನು ಮುಟ್ಟುವುದಿಲ್ಲ.












Click it and Unblock the Notifications