Get Updates
Get notified of breaking news, exclusive insights, and must-see stories!

8 ಸೀಟಲ್ಲಿ ಸ್ಪರ್ಧಿಸುವವರೂ ಪಿಎಂ ಆಗಲು ಕಾಯ್ತಿದ್ದಾರೆ: ಎಚ್‌ಡಿಡಿಗೆ ಮೋದಿ ಟಾಂಗ್

Recommended Video

      ಎಚ್ ಡಿ ದೇವೇಗೌಡಗೆ ಟಾಂಗ್ ಕೊಟ್ಟ ನರೇಂದ್ರ ಮೋದಿ | Lok Sabha Elections 2019

      ಪಟ್ನಾ, ಏಪ್ರಿಲ್ 25: ಬಿಹಾರದ ದುರ್ಭಾಂಗಾದಲ್ಲಿ ಗುರುವಾರ ಚುನಾವಣಾ ಪ್ರಚಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷಗಳ ಮಹಾಮೈತ್ರಿಕೂಟದ ವಿರುದ್ಧ ವಾಗ್ದಾಳಿ ನಡೆಸಿದರು.

      ಆರಂಭದಲ್ಲಿ ಅವರು ಭಯೋತ್ಪಾದನೆಯನ್ನು ಮುಂದಿಟ್ಟುಕೊಂಡು ವಿರೋಧಪಕ್ಷಗಳ ವಿರುದ್ಧ ಹರಿಹಾಯ್ದರು. ನೆರೆಯ ಶ್ರೀಲಂಕಾದಲ್ಲಿ 350ಕ್ಕೂ ಅಧಿಕ ಮಂದಿ ಜೀವಕಳೆದುಕೊಂಡಿರುವುದನ್ನು ಉಲ್ಲೇಖಿಸಿದ ಅವರು, ನಮ್ಮ ನೆರೆಹೊರೆಯ ದೇಶಗಳಲ್ಲಿ ಭಯೋತ್ಪಾದನೆಯ ಕಾರ್ಖಾನೆಗಳು ಕೆಲಸ ಮಾಡುತ್ತಿದ್ದರೆ, 'ಮಹಾಮಿಲಾವತ್' ಅದೊಂದು ಸಮಸ್ಯೆಯೆಂದೇ ಪರಿಗಣಿಸಿಲ್ಲ ಎಂದು ಆರೋಪಿಸಿದರು.

      ಭಯೋತ್ಪಾದನೆ ಮತ್ತು ರಾಷ್ಟ್ರೀಯ ಭದ್ರತೆ ಒಂದು ಮಹತ್ವದ ಸಮಸ್ಯೆ ಎಂದು ಮಹಾಮಿಲಾವತ್‌ಗೆ ಅನಿಸಿಲ್ಲ. ಭಯೋತ್ಪಾದನೆಯ ವಿರುದ್ಧ ಮೋದಿ ಏಕಾಂಗಿಯಾಗಿ ಹೋರಾಡಲು ಸಾಧ್ಯವಿಲ್ಲ. ಚೌಕಿದಾರನಿಗೆ ಈ ಹೋರಾಟದಲ್ಲಿ ಗೆಲುವು ಸಾಧಿಸಲು ನಿಮ್ಮ ಮತಗಳು ಬೇಕು ಎಂದರು.

      Lok Sabha elections 2019 Prime Minister Narendra Modi jibe at grand alliance in Bihar darbhanga campaign

      ಕೆಲವು ವ್ಯಕ್ತಿಗಳು 'ಭಾರತ್ ಮಾತಾ ಕಿ ಜೈ' ಮತ್ತು 'ವಂದೇ ಮಾತರಂ' ಘೋಷಣೆಗಳ ವಿಚಾರದಲ್ಲಿ ಸಮಸ್ಯೆ ಹೊಂದಿದ್ದಾರೆ. ಅಂತಹವರು ಚುನಾವಣೆಯಲ್ಲಿ ತಮ್ಮ ಠೇವಣಿಗಳನ್ನು ಕಳೆದುಕೊಳ್ಳಬಾರದೇ? ಎಂದು ಪ್ರಶ್ನಿಸಿದರು.

      ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಸೇರಿದಂತೆ ವಿರೋಧಪಕ್ಷಗಳ ಮಹಾ ಮೈತ್ರಿಕೂಟದಲ್ಲಿರುವ ಪ್ರಧಾನಿ ಆಕಾಂಕ್ಷಿಗಳನ್ನು ಲೇವಡಿ ಮಾಡಿದ ಅವರು, 40, 20 ಕೊನೆಗೆ ಕೇವಲ 8 ಸೀಟುಗಳಲ್ಲಿ ಸ್ಪರ್ಧಿಸಿರುವವರು ಕೂಡ ಪ್ರಧಾನಿಯಾಗುವ ತಮ್ಮ ಸರದಿಗಾಗಿ ಸಾಲಿನಲ್ಲಿ ಕಾಯುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+