ಎನ್ ಡಿಎ ಯಿಂದ ಹೊರಬನ್ನಿ: ನಿತೀಶ್ ಗೆ ಕಾಂಗ್ರೆಸ್ ಸಲಹೆ
ಪಾಟ್ನಾ, ಜನವರಿ 05: "ನಿಮ್ಮ ಪಕ್ಷದ ಒಳಿತಿಗಾಗಿ ನೀವು ಎನ್ ಡಿಎಯಿಂದ ಮೊದಲು ಹೊರಬನ್ನಿ" ಎಂದು ಬಿಹಾರ ಕಾಂಗ್ರೆಸ್ ಮುಖಂಡ ಸದಾನಂದ್ ಸಿಂಗ್ ಅವರು ಜೆಡಿಯು ಮುಖಂಡ ನಿತೀಶ್ ಕುಮಾರ್ ಅವರಿಗೆ ಸಲಹೆ ನೀಡಿದ್ದಾರೆ.
ರಾಜ್ಯಸಭೆಯಲ್ಲಿ ರಾಮಮಂದಿರ ಮತ್ತು ತ್ರಿವಳಿ ತಲಾಖ್ ಮಂಡನೆ ಸಂದರ್ಭದಲ್ಲಿ ಬಿಜೆಪಿಯ ನಿಲುವನ್ನು ಜೆಡಿಯು ವಿರೋಧಿಸಿತ್ತು, ಮತ್ತು ಈ ವಿಷಯದಲ್ಲಿ ಎನ್ ಡಿಎ ಗೆ ಬೆಂಬಲ ನೀಡಲು ನಿರಾಕರಿಸಿತ್ತು.
ಈ ಬೆಳವಣಿಗೆಯ ನಂತರ ಕಾಂಗ್ರೆಸ್, ಎನ್ ಡಿಎ ಯಿಂದ ಹೊರಬರುವಂತೆ ಜೆಡಿಯುಗೆ ಸಲಹೆ ನೀಡಿದೆ. ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟವನ್ನೇ ಬೆಂಬಲಿಸುವುದಾಗಿ ಈಗಾಗಲೇ ಜೆಡಿಯು ಸ್ಪಷ್ಟಪಡಿಸಿದೆ. ಬಿಹಾರದಲ್ಲಿ ಸೀಟು ಹಂಚಿಕೆಯ ಮಾತುಕತೆಯೂ ಮುಕ್ತಾಯವಾಗಿದೆ.

ರಾಮಮಂದಿರ ಮತ್ತು ತ್ರಿವಳಿ ತಲಾಖ್ ವಿಷಯದಲ್ಲಿ ಜೆಡಿಯು ಅಭಿಪ್ರಾಯ ಬೇರೆ ಇದ್ದಿರಬಹುದು. ಆದರೆ ಇದರಿಂದಾಗಿ ನಮ್ಮ ಸಂಬಂಧದಲ್ಲಿ ಯಾವುದೇ ಬಿರುಕು ಮೂಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ.











Click it and Unblock the Notifications