• search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಫೋಟೋ ವಿಚಾರಕ್ಕೆ ಗಲಾಟೆ: ಜೆಡಿಯು ಯುವ ನಾಯಕ ಹತ್ಯೆ

|

ಪಾಟ್ನಾ, ಮಾರ್ಚ್ 11: ಜೆಡಿಯು ಯುವ ನಾಯಕ ಕನ್ನಯ್ಯ ಕೌಶಿಕ್ (27) ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಮಾರ್ಚ್ 10ರ ರಾತ್ರಿ ಪಾಟ್ನಾದ ಪಟೇಲ್ ನಗರ ವ್ಯಾಪ್ತಿಯಲ್ಲಿ ಈ ಕೊಲೆ ನಡೆದಿದ್ದು, ಆರೋಪಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

ವಿಷಯ ತಿಳಿದ ಶಾಸ್ತ್ರಿ ನಗರ ಪೊಲೀಸರು ಘಟನೆ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಡಿಎಸ್‌ಪಿ ರಾಜೇಶ್ ಸಿಂಗ್ ಪ್ರಭಾಕರ್ ಕೂಡ ಶೂಟೌಟ್ ಆದ ಸ್ಥಳಕ್ಕೆ ಬಂದು ಪ್ರಾಥಮಿಕ ತನಿಖೆ ಮಾಡಿದ್ದಾರೆ. ಬಳಿಕ ಮಾತನಾಡಿದ ಅವರು 'ಕೊಲೆಗೆ ನಿಖರವಾದ ಕಾರಣ ಸದ್ಯಕ್ಕೆ ಬಹಿರಂಗವಾಗಿಲ್ಲ. ತನಿಖೆ ಆರಂಭಿಸಿದ್ದೇವೆ, ಆರೋಪಿಗಳನ್ನು ಆದಷ್ಟೂ ಬೇಗ ಬಂಧಿಸುತ್ತೇವೆ' ಎಂದಿದ್ದಾರೆ.

ಅಪ್ಪ ಎನ್ನದಿದ್ದಕ್ಕೆ ಮಗಳನ್ನೇ ಕೊಂದ; 6 ತಿಂಗಳ ನಂತರ ಜಿಗಣಿಯಲ್ಲಿ ಸಿಕ್ಕಿಬಿದ್ದ

ಮೂಲಗಳ ಪ್ರಕಾರ, ಹೋಳಿ ಸಂಭ್ರಮ ಶುಭಾಶಯ ತಿಳಿಸಲು ಕಾಲೇಜಿನಲ್ಲಿ ಹಾಕಲಾಗಿದ್ದ ಪೋಸ್ಟರ್‌ನಲ್ಲಿ ತನ್ನ ಫೋಟೋ ಇರಲಿಲ್ಲ. ಹಾಗಾಗಿ, ತನ್ನ ಸ್ನೇಹಿತ ಕುಶ್ ಜೊತೆ ಈ ವಿಚಾರವಾಗಿ ಕನ್ನಯ್ಯ ಕೌಶಿಕ್ ಗಲಾಟೆ ಮಾಡಿದ್ದಾನೆ. ಗಲಾಟೆ ಜೋರಾಗುತ್ತಿದ್ದಂತೆ ಕುಶ್ ತನ್ನ ಬಳಿ ಇದ್ದ ಗನ್ ಹೊರತೆಗೆದು ಕೌಶಿಕ್ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಪ್ರೀತಿಗೆ ನಿರಾಕರಣೆ; ಹೆತ್ತ ತಾಯಿಯನ್ನೇ ಕೊಂದ ಮಗ!

ತೀವ್ರ ರಕ್ತಸ್ರಾವದಿಂದ ಬಿದ್ದಿದ್ದ ಕನ್ನಯ್ಯ ಕೌಶಿಕ್‌ನನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಬದುಕಿ ಉಳಿಯಲಿಲ್ಲ. ಜೆಡಿಯ ಯುವ ನಾಯಕನಾಗಿದ್ದ ಕನ್ನಯ್ಯ ಕೌಶಿಕ್, ಎ ಎನ್ ಕಾಲೇಜಿನ ವಿದ್ಯಾರ್ಥಿ ಸಂಘಟನೆಯಲ್ಲಿ ಉಪಾಧ್ಯಕ್ಷರಾಗಿದ್ದರು ಎಂದು ತಿಳಿದುಬಂದಿದೆ.

English summary
JDU leader Kanhaiya Kaushik was shot dead by unidentified miscreants in Patel Nagar in Patna last night. DSP Rajesh Singh Prabhakar says, "Postmortem report awaited. Investigation is underway.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X