ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

1.75 ಕೋಟಿ ಮೌಲ್ಯದ ಚಿನ್ನಾಭರಣ ಧರಿಸಿದ ಬಿಹಾರದ ಗೋಲ್ಡ್‌ಮ್ಯಾನ್

|
Google Oneindia Kannada News

ಮೇ 30: ಆಭರಣ ಪ್ರಿಯರು ಯಾರು ಎಂಬ ಪ್ರಶ್ನೆಗೆ ಪುರಷರ ಮೊದಲ ಉತ್ತರ ಮಹಿಳೆಯರು. ಆದರೆ ಇದಕ್ಕೆ ವಿರುದ್ಧವಾಗಿ ಬಿಹಾರದ ವ್ಯಕ್ತಿಯೊಬ್ಬರು ಕಾಣಿಸಿಕೊಂಡಿದ್ದಾರೆ. ಬಿಹಾರದ ಪ್ರೇಮ್ ಸಿಂಗ್ ಎಂಬ ವ್ಯಕ್ತಿ ಅಧಿಕ ಚಿನ್ನಾಭರಣವನ್ನು ಧರಿಸಿ ಭಾರೀ ಸುದ್ದಿಯಲ್ಲಿದ್ದಾರೆ. ಇವರ ಮೈ ಮೇಲಿನ ಚಿನ್ನಾಭರಣ ಕಂಡ ಜನ ಅಕ್ಷರಶ: ಶಾಕ್ ಆಗಿದ್ದಾರೆ. ಯಾಕೆಂದರೆ ಈತನ ಮೈಮೇಲೆ ಇರೋದು ಗ್ರಾಮ್ ಲೆಕ್ಕದ ಚಿನ್ನವಲ್ಲ ಬದಲಿಗೆ ಕೆಜಿ ಲೆಕ್ಕದ ಚಿನ್ನ.

ಹೌದು... ಪ್ರೇಮ್ ಸಿಂಗ್ ಬರೋಬ್ಬರು ಎರಡು ಕೆಜಿ ಚಿನ್ನವನ್ನು ನಿತ್ಯ ಧರಿಸುತ್ತಾರೆ. ಇದರ ಮೌಲ್ಯ 75 ಕೋಟಿ ರೂಪಾಯಿ. ಹೀಗಾಗಿ ಪಾಟ್ನಾದಲ್ಲಿ ವಾಸಿಸುವ ಜನರು ಈ ವ್ಯಕ್ತಿಯನ್ನು ಬಿಹಾರದ ಗೋಲ್ಡ್ ಮ್ಯಾನ್ ಎಂದು ಕರೆಯುತ್ತಾರೆ. ಪ್ರೇಮ್ ಸಿಂಗ್ ವೃತ್ತಿಯಲ್ಲಿ ಗುತ್ತಿಗೆದಾರರಾಗಿದ್ದರೂ, ತಮ್ಮ ಗುತ್ತಿಗೆ ಆದಾಯದ ಹೆಚ್ಚಿನ ಭಾಗವನ್ನು ಆಭರಣಗಳನ್ನು ಖರೀದಿಸಲು ಖರ್ಚು ಮಾಡುತ್ತಾರಂತೆ. ಹೀಗಾಗಿ ಯಾರಾದರೂ "ಬಿಹಾರ್ ಮೇ ಕ್ಯಾ ಹೇ ಬಾ! (ಬಿಹಾರದಲ್ಲಿ ಏನಿದೆ)"? ಈ ಪ್ರಶ್ನೆಗೆ ಒಂದು ಉತ್ತರ "ಸೋನಾ ಹೈ (ಬಹಳಷ್ಟು ಚಿನ್ನವಿದೆ)" ಆಗಿರಬಹುದು ಎನ್ನುತ್ತಾರೆ ಪ್ರೇಮ್ ಸಿಂಗ್.

ಬಿಹಾರದಿಂದ ಸಿಂಗಾಪುರದವರೆಗೆ ಚಿಕನ್ ಬೆಲೆ ಏರಿಕೆ: ರಷ್ಯಾ-ಉಕ್ರೇನ್ ಯುದ್ಧವೇ ಕಾರಣಬಿಹಾರದಿಂದ ಸಿಂಗಾಪುರದವರೆಗೆ ಚಿಕನ್ ಬೆಲೆ ಏರಿಕೆ: ರಷ್ಯಾ-ಉಕ್ರೇನ್ ಯುದ್ಧವೇ ಕಾರಣ

'ಬಿಹಾರದಲ್ಲಿ ಏನಿದೆ? ಬಹಳಷ್ಟು ಚಿನ್ನವಿದೆ'

'ಬಿಹಾರದಲ್ಲಿ ಏನಿದೆ? ಬಹಳಷ್ಟು ಚಿನ್ನವಿದೆ'

ವಾಸ್ತವವಾಗಿ ಪ್ರೇಮ್ ಸಿಂಗ್ ಅವರ ಆಭರಣಗಳನ್ನು ಧರಿಸುವ ಹವ್ಯಾಸ ತುಂಬಾ ಹಳೆಯದು. ಪ್ರೇಮ್ ಸಿಂಗ್ ತಮ್ಮ ಯೌವನದಿಂದಲೂ ಆಭರಣಗಳನ್ನು ಧರಿಸುತ್ತಾರೆ. ತಾನು ಯಾವುದೇ ಆಭರಣ ಖರೀದಿಸಿದರೂ ಅದು ತನ್ನ ದುಡಿಮೆಯ ಹಣದಿಂದ ಎಂದು ಹೇಳಿಕೊಳ್ಳುತ್ತಾರೆ. ಆರಂಭದಲ್ಲಿ ಪ್ರೇಮ್ ಸಿಂಗ್ ತನ್ನ ದೇಹದ ಮೇಲೆ ಒಂದೂವರೆ ಕೆಜಿ ಚಿನ್ನಾಭರಣವನ್ನು ಧರಿಸಲು ಪ್ರಾರಂಭಿಸಿದ್ದರು. ನಂತರ ಪ್ರೇಮ್ ಸಿಂಗ್ ಸದ್ಯ ಬರೋಬ್ಬರೊ ಎರಡು ಕೆಜಿ ಚಿನ್ನವನ್ನು ಧರಿಸುತ್ತಾರೆ. ಈ ಆಭರಣವು ಚಿನ್ನದ ಸರದಿಂದ ಹಿಡಿದು ಬಳೆಯವರೆಗೆ ಎಲ್ಲವನ್ನೂ ಒಳಗೊಂಡಿದೆ.

ಫೋಟೋವುಳ್ಳ ಆಧಾರ್ ಕಾರ್ಡ್ ಹಂಚಿಕೊಳ್ಳದಿರಲು ಕೇಂದ್ರ ಸರ್ಕಾರದ ಸಲಹೆಫೋಟೋವುಳ್ಳ ಆಧಾರ್ ಕಾರ್ಡ್ ಹಂಚಿಕೊಳ್ಳದಿರಲು ಕೇಂದ್ರ ಸರ್ಕಾರದ ಸಲಹೆ

ಆಭರಣ ಹಾಕಿಕೊಳ್ಳಲು ಕಾರಣ ಏನು?

ಆಭರಣ ಹಾಕಿಕೊಳ್ಳಲು ಕಾರಣ ಏನು?

ಬೇರೆ ರಾಜ್ಯಗಳಲ್ಲಿ ಅದರಲ್ಲೂ ದಕ್ಷಿಣ ಭಾರತದ ಜನರನ್ನು ಗೋಲ್ಡ್ ಮ್ಯಾನ್ ಎಂದು ಕರೆಯುತ್ತಾರೆ ಎಂದು ಪ್ರೇಮ್ ಸಿಂಗ್ ಅವರು ತಿಳಿದಾಗ, ತಾವು ಬಿಹಾರದ ಗೋಲ್ಡ್ ಮ್ಯಾನ್ ಎಂದು ಏಕೆ ಕರೆಯಬಾರದು ಎಂಬುದೂ ಅವರ ಮನಸ್ಸಿಗೆ ಬಂದಿತು. ಆಮೇಲೆ ಆಭರಣ ತೊಡುವ ಪ್ರಕ್ರಿಯೆ ಶುರುವಾಗಿದೆ.

ಪೊಲೀಸ್ ಕಾರ್ಯಚರಣೆಯಿಂದ ಚಿನ್ನ ಪತ್ತೆ

ಪೊಲೀಸ್ ಕಾರ್ಯಚರಣೆಯಿಂದ ಚಿನ್ನ ಪತ್ತೆ

ಇಷ್ಟೆಲ್ಲಾ ಆಭರಣಗಳನ್ನು ಧರಿಸಿ ರಸ್ತೆಯಲ್ಲಿ ನಡೆಯಲು ಹೆದರುವುದಿಲ್ಲವೇ ಎಂಬ ಪ್ರಶ್ನೆಗೆ, ಪ್ರೇಮ್ ಸಿಂಗ್, ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಉತ್ತಮ ಆಡಳಿತದ ಸರಕಾರ ಇದೆ. ಹೀಗಾಗಿ ನಮಗೆ ಯಾವುದೇ ಭಯವಿಲ್ಲ ಎಂದು ಹೇಳುತ್ತಾರೆ. ಆದಾಗ್ಯೂ 2021 ರಲ್ಲಿ ಪ್ರೇಮ್ ಸಿಂಗ್ ರಾತ್ರಿ ಮನೆಗೆ ಹಿಂದಿರುಗುವಾಗ ಅಪರಾಧಿಗಳು ಪಿಸ್ತೂಲು ತೋರಿಸಿ ಚಿನ್ನಾಭರಣಗಳನ್ನು ದರೋಡೆ ಮಾಡಿದ್ದರು. ಆದರೆ ಪಾಟ್ನಾ ಪೊಲೀಸರು ಶೀಘ್ರವಾಗಿ ದರೋಡೆಕೋರರನ್ನು ಬಂಧಿಸಿ ಅವರ ಎಲ್ಲಾ ಆಭರಣಗಳನ್ನು ವಶಪಡಿಸಿಕೊಂಡರು ಮತ್ತು ಅಪರಾಧಿಗಳನ್ನು ಬಂಧಿಸಿದರು.

ದೊಡ್ಡ ದಾಖಲೆ ನಿರ್ಮಿಸುವ ಕನಸು

ದೊಡ್ಡ ದಾಖಲೆ ನಿರ್ಮಿಸುವ ಕನಸು

ಪ್ರೇಮ್ ಸಿಂಗ್ ಕೂಡ ಬಿಹಾರಿ ಗೋಲ್ಡ್ ಮ್ಯಾನ್ ಎಂದು ಕರೆಸಿಕೊಳ್ಳಲು ಹೆಮ್ಮೆ ಪಡುತ್ತಾರೆ. ಮೂಲತಃ ಭೋಜ್‌ಪುರ ಜಿಲ್ಲೆಯ ಕಲ್ಯಾಣಪುರ ಪಂಚಾಯತ್‌ನ ವಾಸುದೇವಪುರ ಗ್ರಾಮದ ನಿವಾಸಿಯಾಗಿರುವ ಪ್ರೇಮ್ ಸಿಂಗ್ ಹಲವು ವರ್ಷಗಳಿಂದ ಪಾಟ್ನಾದಲ್ಲಿ ನೆಲೆಸಿದ್ದಾರೆ. ತಾನು ದುಡಿದ ಹಣದಿಂದ ಪ್ರತಿ ವರ್ಷ ತನ್ನ ಮೈಮೇಲೆ ಆಭರಣದ ಪ್ರಮಾಣವನ್ನು ಹೆಚ್ಚಿಸಿ ದೊಡ್ಡ ದಾಖಲೆ ನಿರ್ಮಿಸಬೇಕೆಂಬುದು ಅವರ ಮನದಾಳದ ಆಶಯವಾಗಿದೆ.

(ಒನ್ಇಂಡಿಯಾ ಸುದ್ದಿ)

Recommended Video

IPL ಫೈನಲ್ ಮ್ಯಾಚ್ ಗೂ ಮುನ್ನ ಸ್ಟೇಡಿಯಂನಲ್ಲಿ ಮಾರ್ದನಿಸಿತು KGF ನ ವಯಲೆನ್ಸ್ ಡೈಲಾಗ್ | OneIndia Kannada

English summary
Prem Singh of Vasudevapuram village of Kalyanpur Panchayat in Bhojpur district of Bihar is a Goldman wearing two kg of gold worth Rs 1.75 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X