ತೇಜಸ್ವಿ ಒರಟಾಟಕ್ಕೆ ಬೇಸತ್ತು ಪಕ್ಷ ತೊರೆದ ಹಿರಿಯ ಮುಖಂಡ

ಪಾಟ್ನಾ, ಏಪ್ರಿಲ್ 18: ರಾಷ್ಟ್ರೀಯ ಜನತಾ ದಳ (ಆರ್ ಜೆಡಿ) ನಾಯಕ ತೇಜಸ್ವಿ ಯಾದವ್ ಅವರ ಒರಟಾಟಕ್ಕೆ ಬೇಸತ್ತು ಆರ್ ಜೆಡಿ ಮುಖಂಡ ಮೊಹಮ್ಮದ್ ಅಲಿ ಅಶ್ರಫ್ ಫತ್ಮಿ ಅವರು ಬುಧವಾರದಂದು ಪಕ್ಷ ತೊರೆದಿದ್ದಾರೆ. ಮಧುಬನಿ ಲೋಕಸಭಾ ಕ್ಷೇತದಿಂದ ಸ್ಪರ್ಧಿಸಲು ಬಯಸಿದ್ದ ಅಶ್ರಫ್ ಅವರ ಕನಸು ಭಗ್ನಗೊಂಡಿತ್ತು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಆರ್ ಜೆಡಿ ಸಂಸದೀಯ ಮಂಡಳಿಯಂದ ಅಶ್ರಫ್ ರನ್ನು ಕಿತ್ತು ಹಾಕಿ, 6 ವರ್ಷಗಳ ಕಾಲಕ್ಕೆ ಅಮಾನತು ಮಾಡಲಾಗಿತ್ತು. ಆದರೆ, ಏಪ್ರಿಲ್ 18ರ ತನಕ ಕಾಯುತ್ತೇನೆ ಎಂದಿದ್ದ ಅಶ್ರಫ್ ಅವರು ಟಿಕೆಟ್ ಹಂಚಿಕೆ ವಿಷಯಕ್ಕೆ ಬೇಸರಗೊಂಡು ಪಕ್ಷ ತೊರೆದಿದ್ದಾರೆ. ಮಹಾಘಟಬಂದನ್ ನ ವಿಕಾಸ್ ಶೀಲ್ ಇನ್ಸಾನ್ ಪಾರ್ಟಿ ಅಭ್ಯರ್ಥಿಯನ್ನು ಮಧುಬನಿಯಿಂದ ಕಣಕ್ಕಿಳಿಸಲಾಗುತ್ತಿದೆ.

ದರ್ಭಾಂಗಾದಲ್ಲಿ ಅಬ್ದುಲ್ ಬಾರಿ ಸಿದ್ದಿಕಿಯನ್ನು ಕಣಕ್ಕಿಳಿಸಿರುವುದರ ಬಗ್ಗೆ ಅಶ್ರಫ್ ಅವರು ವಿರೋಧಿಸಿದ್ದರು. ಈಗ ಮಧುಬನಿಯಲ್ಲಿ ಸಂಸದ ಹುಕುಮ್ ದೇವ್ ನಾರಾಯಣ್ ಅವರ ಪುತ್ರ ಅಶೋಕ್ ಯಾದವ್ ಹಾಗೂ ವಿಐಪಿ ಪಕ್ಷದಿಂದ ಆರ್ ಜೆಡಿಯ ಮಾಜಿ ಮುಖಂಡ ಬದ್ರಿನಾಥ್ ಪುರ್ವೆ ಅವರು ಕಣದಲ್ಲಿದ್ದಾರೆ

Elections 2019: RJD Leader Alleges Tejashwi Yadav Was RoughTo Him, Quits Party

ಇನ್ನೊಂದೆಡೆ ಲಾಲೂ ಪ್ರಸಾದ್ ಯಾದವ್ ಅವರ ಪುತ್ರ ತೇಜ್ ಪ್ರತಾಪ್ ಯಾದವ್ ಅವರು ಪಕ್ಷದ ವಿರುದ್ಧ ಸಿಡಿದೆದ್ದು ಪ್ರತ್ಯೇಕ ರಾಜಕೀಯ ಸಂಘಟನೆಯನ್ನು ಸ್ಥಾಪಿಸಿ, ಲಾಲೂ ರಾಬ್ಡಿ ಮೋರ್ಚಾ ಎಂಬ ಹೆಸರಿಟ್ಟಿರುವುದನ್ನು ಇಲ್ಲಿ ಸ್ಮರಿಸಬಹುದು.

ಬಿಹಾರದಲ್ಲಿ ಏಪ್ರಿಲ್ 11ರಂದು ಔರಂಗಾಬಾದ್, ಗಯಾ, ನವಾಡಾ ಹಾಗೂ ಜಮುಯಿಯಲ್ಲಿ ಚುನಾವಣೆ ನಡೆಯಲಿದೆ. ದೇಶದೆಲ್ಲೆಡೆ ಏಪ್ರಿಲ್ 11 ರಿಂದ ಮೇ 19ರ ತನಕ ಏಳು ಹಂತಗಳಲ್ಲಿ ಚುನಾವಣೆ ನಿಗದಿಯಾಗಿದ್ದು, ಮೇ 23ರಂದು ಫಲಿತಾಂಶ ಹೊರ ಬರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+