• search
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅನುಪಮ್ ಖೇರ್ ಸೇರಿ 13 ಮಂದಿ ವಿರುದ್ಧ ಎಫ್ಐಆರ್ ಗೆ ಕೋರ್ಟ್ ಸೂಚನೆ

|

ಪಾಟ್ನಾ, ಜನವರಿ 09: ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಚಿತ್ರದ ವಿವಾದ ದಿನೇ ದಿನೇ ಹೆಚ್ಚಾಗುತ್ತಿದೆ. ಚಿತ್ರದ ಪ್ರಮುಖ ಪಾತ್ರಧಾರಿ ಅನುಪಮ್ ಖೇರ್ ಸೇರಿದಂತೆ 13 ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಎಫ್ಐಆರ್ ಹಾಕುವಂತೆ ಬಿಹಾರದ ನ್ಯಾಯಾಲಯವು ಪೊಲೀಸರಿಗೆ ಆದೇಶಿಸಿದೆ.

ಸಿನಿಮಾದ ಟ್ರೈಲರ್ ನಲ್ಲಿರುವ ಕೆಲವು ದೃಶ್ಯಗಳು ರಾಷ್ಟ್ರೀಯ ನಾಯಕರಿಗೆ ನೋವುಂಟು ಮಾಡುತ್ತಿದೆ ಎಂದು ಸುಧೀರ್ ಓಜಾ ಎಂಬ ವಕೀಲರು ಮೊಕದ್ದಮೆ ಹೂಡಿದ್ದರು.

ಕಾಂಗ್ರೆಸ್​ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿರುವ ಈ ಸಿನಿಮಾ ರಿಲೀಸ್​ಮಾಡುವುದಕ್ಕೂ ಮುನ್ನ ಕಾಂಗ್ರೆಸ್ ಯೂಥ್ ವಿಂಗ್ ಕಚೇರಿಯಲ್ಲಿ ಪ್ರದರ್ಶನವಾಗಬೇಕು ಎಂದು ಆಗ್ರಹಿಸಲಾಗಿತ್ತು. ಇದೀಗ ಸಿನಿಮಾ ತಂಡದವರ ಮೇಲೆ ಕೇಸ್ ಹಾಕಲಾಗಿದೆ‌.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಹಲವಾರು ನಾಯಕರ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವಂತೆ ಚಿತ್ರಿಸಲಾಗಿದೆ.

ಎಂಎಂ ಸಿಂಗ್ ಪಾತ್ರದಲ್ಲಿ ಅನುಪಮ್ ಖೇರ್

ಇನ್ನೊಂದು ಪ್ರಕರಣದಲ್ಲಿ ಚಿತ್ರದ ಟ್ರೈಲರ್ ತೆಗೆದು ಹಾಕುವಂತೆ ಕೋರಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ಸೋಮವಾರದಂದು ತಿರಸ್ಕರಿಸಿತ್ತು.

ಈ ಚಿತ್ರ ಜನವರಿ 11ರಂದು ಬಿಡುಗಡೆಗೆ ಸಿದ್ಧವಾಗಿದ್ದು, ಅನುಪಮ್​ ಖೇರ್​ ಸೇರಿದಂತೆ ಚಿತ್ರ ತಂಡದವರು ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ.

ಬಿಹಾರದ ಮುಜಾಫರ್ ಪುರ್ ಕೋರ್ಟಿನಿಂದ ಆದೇಶ

ಬಿಹಾರದ ಮುಜಾಫರ್ ಪುರ್ ಕೋರ್ಟಿನಿಂದ ಆದೇಶ

ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಹಲವಾರು ನಾಯಕರ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುವಂತೆ ಚಿತ್ರಿಸಲಾಗಿದೆ. ದೇಶ ಹಾಗೂ ರಾಜಕೀಯ ನಾಯಕರನ್ನು ಅತ್ಯಂತ ದುರ್ಬಲರು ಎಂಬಂತೆ ಬಿಂಬಿಸಲಾಗಿದೆ ಎಂದು ವಕೀಲ ಓಜಾ ವಾದಿಸಿದ್ದಾರೆ. ಐಪಿಸಿ ಸೆಕ್ಷನ್ 295, 153, 153ಎ, 293, 504 ಹಾಗೂ 120ಬಿ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಆಕಸ್ಮಿಕವಾಗಿ ಸಿಎಂ ಆದ ಮನಮೋಹನ್ ಸಿಂಗ್

ಆಕಸ್ಮಿಕವಾಗಿ ಸಿಎಂ ಆದ ಮನಮೋಹನ್ ಸಿಂಗ್

ಭಾರತದ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರಿಗೆ ಪ್ರಧಾನಿ ಪಟ್ಟ ಬಯಸದೇ ಬಂದ ಭಾಗ್ಯ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವನ್ನು ಮುನ್ನಡೆಸುವ ಅವಕಾಶ ಸಿಗುತ್ತದೆ ಎಂಬುದು ಅವರಿಗೆ ಹಿಂದಿನ ದಿನದವರೆಗೂ ತಿಳಿದಿರಲಿಲ್ಲ' ಸಂಜಯ್ ಬರು ಬರೆದಿರುವ ಪುಸ್ತಕದ ಸಾಲುಗಳು ಈಗ ಸಿನಿಮಾವೊಂದರ ಡೈಲಾಗ್ ಆಗಲಿದೆ. 'ಆಕಸ್ಮಿಕವಾಗಿ ಪಿಎಂ' ಆದ ಎಂಎಂ ಸಿಂಗ್ ಕಥೆ ಬೆಳ್ಳಿತೆರೆಯ ಮೇಲೆ ಬರಲಿದೆ.

ಭಾರಿ ಚರ್ಚೆಗೆ ಕಾರಣವಾಗಿರುವ ಪುಸ್ತಕ

ಭಾರಿ ಚರ್ಚೆಗೆ ಕಾರಣವಾಗಿರುವ ಪುಸ್ತಕ

ಮನಮೋಹನ್ ಸಿಂಗ್ ಆಡಳಿತಾವಧಿ 2004 ರಿಂದ 2008 ರವರೆಗೆ ಅವರ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ್ ಬರು ಅವರ 'ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ : ಮೇಕಿಂಗ್ ಆಂಡ್ ಅನ್​ವೆುೕಕಿಂಗ್ ಆಫ್ ಮನಮೋಹನ್ ಸಿಂಗ್' ಎಂಬ ಕಾದಂಬರಿ ಕಮ್ ಜೀವನಚರಿತ್ರೆ ಈಗಾಗಲೇ ಸಾಕಷ್ಟು ಸದ್ದು ಮಾಡಿದೆ. ಈಗ ಇದೇ ಪುಸ್ತಕ ಆಧಾರಿತ ಚಿತ್ರವನ್ನು ವಿಜಯ್ ರತ್ನಾಕರ್ ಅವರು ನಿರ್ದೇಶನ ಮಾಡಿದ್ದು, ರಾಷ್ಟ್ರಪ್ರಶಸ್ತಿ ವಿಜೇತ ಹನ್ಸಲ್ ಮೆಹ್ತಾ ಅವರು ಚಿತ್ರಕಥೆ ಬರೆದಿದ್ದಾರೆ.

ಅನೇಕ ಕುತೂಹಲಕಾರಿ ಅಂಶಗಳಿವೆ

ಅನೇಕ ಕುತೂಹಲಕಾರಿ ಅಂಶಗಳಿವೆ

ಮನಮೋಹನ್​ಸಿಂಗ್ ಹೇಗೆ ಕಾಂಗ್ರೆಸ್ ಯುಪಿಎ ಸರ್ಕಾರದ ಕೈಗೊಂಬೆಯಾಗಿದ್ದರು, ಮಾಜಿ ಪ್ರಧಾನಿ ಪಿವಿ ನರಸಿಂಹ ರಾವ್ ಅವರಿಗೆ ಸರ್ಕಾರಿ ಗೌರವದಿಂದ ಅಂತ್ಯಸಂಸ್ಕಾರ ನಡೆಸಲಿಲ್ಲ ಏಕೆ? ಸೇರಿದಂತೆ ಅನೇಕ ಅಂಶಗಳು ಚಿತ್ರಿತವಾಗಲಿವೆ. ಈ ಚಿತ್ರವು 12 ಕ್ಕೂ ಹೆಚ್ಚು ಭಾಷೆಯಲ್ಲಿ ಬಿಡುಗಡೆಗೊಳಿಸಲು ಚಿತ್ರ ನಿರ್ಮಾಣ ಮಾಡುತ್ತಿರುವ ಸುನಿಲ್ ಬೊಹ್ರಾ ಮತ್ತು ತಂಡದವರು ಸಜ್ಜಾಗಿದ್ದಾರೆ.

ಮಚಲಿ ಪಟ್ಟಣಂ ರಣಕಣ
ಡೆಮೊಗ್ರಫಿಕ್ಸ್
ಜನಸಂಖ್ಯೆ
18,25,184
ಜನಸಂಖ್ಯೆ
 • ಗ್ರಾಮೀಣ
  68.99%
  ಗ್ರಾಮೀಣ
 • ನಗರ
  31.01%
  ನಗರ
 • ಎಸ್ ಸಿ
  19.76%
  ಎಸ್ ಸಿ
 • ಎಸ್ ಟಿ
  2.16%
  ಎಸ್ ಟಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
On Tuesday, a local court in Bihar ordered to register an FIR against Kher & 13 others in connection with the petition filed by Advocate Sudhir Ojha against the film, reports ANI.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more