• search
 • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ತೇಜಸ್ವಿ ಯಾದವ್ ಒಡೆತನದ ಮಾಲ್ ಮೇಲೆ ಸಿಬಿಐ ದಾಳಿ

|
Google Oneindia Kannada News

ಪಾಟ್ನಾ, ಆಗಸ್ಟ್ 24: ಆರ್‌ಜೆಡಿ ನಾಯಕ ಮತ್ತು ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಒಡೆತನದ ಹರಿಯಾಣದ ಗುರುಗ್ರಾಮ್‌ನ ಸೆಕ್ಟರ್‌ 71ರಲ್ಲಿ ನಿರ್ಮಾಣ ಹಂತದಲ್ಲಿರುವ ಅರ್ಬನ್ ಕ್ಯೂಬ್ಸ್ ಮಾಲ್‌ನಲ್ಲಿ ಸಿಬಿಐ ದಾಳಿ ನಡೆಸುತ್ತಿದೆ.

ರೈಲ್ವೆ ಉದ್ಯೋಗಕ್ಕಾಗಿ ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ.

ಬಿಹಾರದಲ್ಲಿ ವಿಶ್ವಾಸಮತ: ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ಕೊಡಲ್ಲ ಎಂದ ಬಿಜೆಪಿ ನಾಯಕಬಿಹಾರದಲ್ಲಿ ವಿಶ್ವಾಸಮತ: ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ಕೊಡಲ್ಲ ಎಂದ ಬಿಜೆಪಿ ನಾಯಕ

ಸಿಬಿಐ ಅಧಿಕಾರಿಗಳು ದೆಹಲಿ, ಹರಿಯಾಣದ ಗುರುಗ್ರಾಮ್ ಮತ್ತು ಬಿಹಾರದ ಪಾಟ್ನಾ, ಕತಿಹಾರ್ ಮತ್ತು ಮಧುಬನಿಯಲ್ಲಿ ವಿವಿಧ ಸ್ಥಳಗಳಲ್ಲಿ ರೈಲ್ವೆ ಉದ್ಯೋಗಕ್ಕಾಗಿ ಭೂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ 25 ಸ್ಥಳಗಳಲ್ಲಿ ಸಿಬಿಐ ಅಧಿಕಾರಿಗಳು ದಾಳಿ ನಡೆಸುತ್ತಿದ್ದಾರೆ.

ಲಾಲು ಪ್ರಸಾದ್ ರೈಲ್ವೇ ಸಚಿವರಾಗಿದ್ದಾಗ ನಡೆದ ಹಗರಣಕ್ಕೆ ಸಂಬಂಧಿಸಿದಂತೆ ಮೇ 18, 2022 ರಂದು ಸಿಬಿಐ ಲಾಲು ಪ್ರಸಾದ್, ಅವರ ಪತ್ನಿ ರಾಬ್ರಿ ದೇವಿ, ಪುತ್ರಿಯರಾದ ಮಿಸಾ ಭಾರತಿ ಮತ್ತು ಹೇಮಾ ಯಾದವ್ ವಿರುದ್ಧ ಪ್ರಕರಣವನ್ನು ದಾಖಲಿಸಿತ್ತು.

ಜೊತೆಗೆ ಮುಂಬೈ, ಜಬಲ್‌ಪುರ್, ಕೋಲ್ಕತ್ತಾ, ಜೈಪುರ ಮತ್ತು ಹಾಜಿಪುರದ ರೈಲ್ವೆ ವಲಯಗಳಲ್ಲಿ 12 ಜನರಿಗೆ ಉದ್ಯೋಗ ನೀಡಲಾಯಿತು. ತನಿಖಾ ಸಂಸ್ಥೆಯ ಪ್ರಕಾರ, ಪಾಟ್ನಾದಲ್ಲಿ ನೆಲೆಗೊಂಡಿರುವ 1,05,292 ಚದರ ಅಡಿ ಭೂಮಿಯನ್ನು ಲಾಲು ಪ್ರಸಾದ್ ಅವರ ಕುಟುಂಬವು ಮಾರಾಟಗಾರರಿಗೆ ನಗದು ಪಾವತಿ ಮಾಡಿ ಸ್ವಾಧೀನಪಡಿಸಿಕೊಂಡಿದೆ. ಈ ಜಮೀನುಗಳು ಉದ್ಯೋಗಾಕಾಂಕ್ಷಿಗಳ ಕುಟುಂಬಗಳಿಗೆ ಸೇರಿವೆ. ರೈಲ್ವೆಯಲ್ಲಿ ಗ್ರೂಪ್-ಡಿ ಉದ್ಯೋಗಗಳಿಗೆ ಬದಲಾಗಿ ಅವುಗಳನ್ನು ವರ್ಗಾಯಿಸಲಾಗಿದೆ ಅಥವಾ ಖರೀದಿಸಲಾಗಿದೆ ಎಂದು ಆರೋಪಿಸಿದೆ.

ಯಾವುದೇ ಜಾಹೀರಾತು ಅಥವಾ ಸಾರ್ವಜನಿಕ ಸೂಚನೆ ಇಲ್ಲದೆ ನಕಲಿ ದಾಖಲೆಗಳ ಆಧಾರದ ಮೇಲೆ ಜನರನ್ನು ಕೆಲಸಕ್ಕೆ ನೇಮಿಸಲಾಗಿದೆ ಎಂದು ಎಫ್‌ಐಆರ್ ಹೇಳಿದೆ.

CBI Raids Bihar Deputy CM Tejashwi Yadav Mall In Gurugram

ಹಗರಣಕ್ಕೆ ಸಂಬಂಧಿಸಿದಂತೆ ಬುಧವರಾ ಬಿಹಾರದ ಹಲವು ಆರ್‌ಜೆಡಿ ನಾಯಕರ ಆವರಣದಲ್ಲಿ ಬುಧವಾರ ಬೆಳಗ್ಗೆ ಸಿಬಿಐ ಶೋಧ ಕಾರ್ಯಾಚರಣೆ ಆರಂಭಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಜೊತೆ ಮೈತ್ರಿ ಮಾಡಿಕೊಳ್ಳಲು ಬಿಜೆಪಿಯಿಂದ ಬೇರ್ಪಟ್ಟ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯ ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆ ದಿನವೇ ಶೋಧ ಕಾರ್ಯಾಚರಣೆ ನಡೆದಿದೆ.

ಆರ್‌ಜೆಡಿ ಸಂಸದ ಅಶ್ಫಾಕ್ ಕರೀಂ, ರಾಜ್ಯಸಭಾ ಸಂಸದ ಫೈಯಾಜ್ ಅಹ್ಮದ್ ಮತ್ತು ಆರ್‌ಜೆಡಿ ಎಂಎಲ್‌ಸಿ ಸುನೀಲ್ ಸಿಂಗ್, ಮಾಜಿ ಎಂಎಲ್‌ಸಿ ಸುಬೋಧ್ ರೈ ಮತ್ತು ಮಾಜಿ ಶಾಸಕ ಆರ್‌ಜೆಡಿ ಅಬು ದೋಜಾನಾ ಅವರ ನಿವಾಸಗಳ ಮೇಲೆ ದಾಳಿ ನಡೆಯುತ್ತಿದೆ.

ಆರ್‌ಜೆಡಿ ನಾಯಕರ ನಿವಾಸಗಳ ಮೇಲೆ ಸಿಬಿಐ ದಾಳಿಗೆ ಸಂಬಂಧಿಸಿದಂತೆ ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ರಾಷ್ಟ್ರೀಯ ಜನತಾ ದಳದ ನಾಯಕಿ ರಾಬ್ರಿ ದೇವಿ ಬುಧವಾರ ಭಾರತೀಯ ಜನತಾ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

"ನಿತೀಶ್ ಕುಮಾರ್ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಯಾಗಿರುವುದರಿಂದ ಅವರು (ಬಿಜೆಪಿ) ಭಯಗೊಂಡಿದ್ದಾರೆ, ಬಿಜೆಪಿ ಹೊರತುಪಡಿಸಿ ಎಲ್ಲಾ ಪಕ್ಷಗಳು ನಮ್ಮೊಂದಿಗಿವೆ, ರಾಜ್ಯದಲ್ಲಿ ನಮಗೆ ಬಹುಮತವಿದೆ. ನಾವು ಈ ದಾಳಿಗೆಲ್ಲ ಹೆದರುವುದಿಲ್ಲ, ಏಕೆಂದರೆ ಇದು ಮೊದಲಲ್ಲ ನಡೆಯುತ್ತಲೆ ಇರುತ್ತದೆ" ಎಂದಿದ್ದಾರೆ.

"ಈ ದಾಳಿಯನ್ನು ಉದ್ದೇಶಪೂರ್ವಕವಾಗಿ ಮಾಡಲಾಗುತ್ತಿದೆ. ಅದರಲ್ಲಿ ಯಾವುದೇ ಅರ್ಥವಿಲ್ಲ. ಭಯದಿಂದ ಶಾಸಕರು ತಮ್ಮ ಪರವಾಗಿ ಬರುತ್ತಾರೆ ಎಂದು ಭಾವಿಸಿ ಅವರು ಇದನ್ನು ಮಾಡುತ್ತಿದ್ದಾರೆ" ಎಂದು ಆರ್‌ಜೆಡಿ ಎಂಎಲ್‌ಸಿ ಮತ್ತು ಬಿಹಾರ ರಾಜ್ಯ ಸಹಕಾರ ಮಾರುಕಟ್ಟೆ ಒಕ್ಕೂಟದ (ಬಿಸ್ಕೋಮಾನ್) ಅಧ್ಯಕ್ಷ ಸುನೀಲ್ ಸಿಂಗ್ ತಮ್ಮ ಮನೆ ಮೇಲೆ ದಾಳಿ ನಡೆದ ನಂತರ ಹೇಳಿದ್ದಾರೆ.

ಆರ್‌ಜೆಡಿ ರಾಜ್ಯಸಭಾ ಸಂಸದ ಮನೋಜ್ ಝಾ ಮಾತನಾಡಿ, "ಇದು ಇಡಿ ಅಥವಾ ಐಟಿ ಅಥವಾ ಸಿಬಿಐ ದಾಳಿ ಎಂದು ಹೇಳಲು ಅವು ನಿಷ್ಪ್ರಯೋಜಕವಾಗಿದೆ, ಇದು ಭಾರತೀಯ ಜನತಾ ಪಕ್ಷದ ದಾಳಿಯಾಗಿದೆ. ಈ ಸಂಸ್ಥೆಗಳು ಈಗ ಬಿಜೆಪಿ ಅಡಿಯಲ್ಲಿ ಕೆಲಸ ಮಾಡುತ್ತವೆ. ತನಿಖಾ ಸಂಸ್ಥೆಯ ಕಚೇರಿಗಳು ಬಿಜೆಪಿ ಹೇಳಿದಂತೆ ನಡೆಯುತ್ತಿವೆ" ಎಂದು ಆರೋಪಿಸಿದ್ದಾರೆ.

Recommended Video

   ರಾಹುಲ್ ಪ್ರಿಯಾಂಕಾ ಜೊತೆ ಸೋನಿಯಾ ಇಟಲಿಗೆ..? | Oneindia Kannada
   ತೇಜಸ್ವಿ ಪ್ರಸಾದ ಯಾದವ
   Know all about
   ತೇಜಸ್ವಿ ಪ್ರಸಾದ ಯಾದವ
   English summary
   CBI Raids Bihar Deputy CM Tejashwi Yadav Mall In Gurugram connection with land for job scam cases. know more.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X