ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಗಾಂಧಿಗೆ ಫಿದಾ ಆಗಿ ಬಿಜೆಪಿಗೆ ಗುಡ್ ಬೈ ಹೇಳಿದ ಮುಖಂಡ

|
Google Oneindia Kannada News

ಪಾಟ್ನಾ, ಜನವರಿ 19: ರಾಹುಲ್ ಗಾಂಧಿ ಅವರ ನಾಯಕತ್ವಕ್ಕೆ ಫಿದಾ ಆಗಿ ಬಿಜೆಪಿ ಮುಖಂಡ, ಮಾಜಿ ಸಂಸದರೊಬ್ಬರು ಬಿಜೆಪಿ ತೊರೆದಿದ್ದಾರೆ! ಬಿಹಾರದ ಉದಯ್ ಸಿಂಗ್ ಎಂಬುವವರು, ಪಕ್ಷದ ಮೇಲೆ ಮುನಿಸಿಕೊಂಡು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಂದ ಇಂಪ್ರೆಸ್ ಆಗಿ ತಾವು ಪಕ್ಷ ತೊರೆಯುತ್ತಿರುವುದಾಗಿ ತಿಳಿಸಿದ್ದಾರೆ.

ತೆಲಂಗಾಣದಲ್ಲಿ ಕಾಂಗ್ರೆಸ್ ಗೆ ಭಾರೀ ಆಘಾತ,TRS ತೆಕ್ಕೆಗೆ ಕಾಂಗ್ರೆಸ್ ನಾಯಕತೆಲಂಗಾಣದಲ್ಲಿ ಕಾಂಗ್ರೆಸ್ ಗೆ ಭಾರೀ ಆಘಾತ,TRS ತೆಕ್ಕೆಗೆ ಕಾಂಗ್ರೆಸ್ ನಾಯಕ

ಬಿಹಾರದಲ್ಲಿ ಜೆಡಿಯು ಜೊತೆ ಬಿಜೆಪಿ ಮೈತ್ರಿ ಮಾಡಿಕೊಳ್ಳುವುದು ನನಗೆ ಇಷ್ಟವಿರಲಿಲ್ಲ. ಬಿಜೆಪಿಗೆ ಸ್ವಂತ ಬಲದಲ್ಲಿ ಗೆಲ್ಲುವವ ವಿಶ್ವಾಸವಿದ್ದಿದ್ದರೆ ಬಿಹಾರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಜೆಡಿಯುಗೆ ಅಷ್ಟೊಂದು ಸೀಟು ಬಿಟ್ಟುಕೊಡುತ್ತಿರಲಿಲ್ಲ ಎಂದು ಉದಯ್ ಸಿಂಗ್ ಹೇಳಿದ್ದಾರೆ.

ಎನ್ ಡಿಎ ಯಿಂದ ಹೊರಬನ್ನಿ: ನಿತೀಶ್ ಗೆ ಕಾಂಗ್ರೆಸ್ ಸಲಹೆಎನ್ ಡಿಎ ಯಿಂದ ಹೊರಬನ್ನಿ: ನಿತೀಶ್ ಗೆ ಕಾಂಗ್ರೆಸ್ ಸಲಹೆ

"ನಿತೀಶ್ ಕುಮಾರ್ ಸರ್ಕಾರ ಜನರ ವಿಶ್ವಾಸವನ್ನು ಕಳೆದುಕೊಳ್ಳುತ್ತಿದೆ. ಜನರ ಕೆಂಗಣ್ಣಿಗೆ ಜೆಡಿಎಸ್ ಜೊತೆ ಕೈಜೋಡಿಸುವ ಮೂಲಕ ಬಿಜೆಪಿಯೂ ಗುರಿಯಾಗಿದೆ. ಅತ್ತ ರಾಹುಲ್ ಗಾಂಧಿ ಅವರು ಉತ್ತಮ ನಾಯಕತ್ವದಿಂದಾಗಿ ಪ್ರಸಿದ್ಧಿ ಪಡೆಯುತ್ತಿದ್ದಾರೆ" ಎಂದು ರಾಹುಲ್ ಗಾಂಧಿ ಅವರನ್ನು ಕೊಂಡಾಡಿದ್ದಾರೆ.

BJP leader impressed by Rahul Gandhi quits the party

'ಕಾಂಗ್ರೆಸ್ ಮುಕ್ತ ಭಾರತ ಎಂಬ ಘೋಷಣೆಯನ್ನು ನಾನು ಎಂದಿಗೂ ಒಪ್ಪುವುದಿಲ್ಲ. ವಿರೋಶ ಪಕ್ಷವಿಲ್ಲದಿದ್ದರೆ ಪ್ರಜಾಪ್ರಭುತ್ವಕ್ಕೆ ಬೆಲೆ ಎಲ್ಲಿಂದ?' ಎಂದು ಅವರು ಪ್ರಶ್ನಿಸಿದ್ದಾರೆ.

English summary
A former BJP parliamentarian on Friday announced his resignation from the party. Uday Singh, an ex-BJP lawmaker who has represented Bihar's Purnea Lok Sabha constituency twice, alleged the party has surrendered before the discredited Janata Dal (United) headed by Chief Minister Nitish Kumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X