ಬಿಹಾರ ಚುನಾವಣೆ; ಪ್ರಚಾರಕ್ಕೆ ಈ ನಿಯಮಗಳು ಕಡ್ಡಾಯ!

ಪಾಟ್ನಾ, ಅಕ್ಟೋಬರ್ 04: ಕೋವಿಡ್ ಭೀತಿಯ ನಡುವೆಯೇ ಬಿಹಾರ ವಿಧಾನಸಭೆ ಚುನಾವಣೆ ಘೋಷಣೆಯಾಗಿದೆ. 243 ಕ್ಷೇತ್ರಗಳಿಗೆ ಒಟ್ಟು ಮೂರು ಹಂತದಲ್ಲಿ ಚುನಾವಣೆ ನಡೆಯಲಿದೆ.

ಬಿಹಾರ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಪಾಟ್ನಾ ಜಿಲ್ಲಾಡಳಿತ 47 ಮೈದಾನ, 19 ಹಾಲ್‌ಗಳನ್ನು ಗುರುತಿಸಿದೆ. ರಾಜಕೀಯ ಪಕ್ಷಗಳು ಈ ಸ್ಥಳಗಳಲ್ಲಿ ಮಾತ್ರ ಪ್ರಚಾರಗಳನ್ನು ನಡೆಸಬೇಕಿದೆ.

ಎಲ್ಲಾ ರಾಜಕೀಯ ಪಕ್ಷಗಳು ಬಹಿರಂಗ ಪ್ರಚಾರಗಳನ್ನು ಈ ನಿಗದಿತ ಸ್ಥಳಗಳಲ್ಲಿ ಮಾತ್ರ ಮಾಡಬೇಕು. ಈ ಪ್ರಚಾರ ಸಭೆಯಲ್ಲಿ 100 ಜನಕ್ಕಿಂತ ಹೆಚ್ಚಿನವರು ಪಾಲ್ಗೊಳ್ಳುವಂತಿಲ್ಲ ಎಂದು ಪಾಟ್ನಾ ಜಿಲ್ಲಾಡಳಿತ ಹೇಳಿದೆ.

Bihar Polls 47 Grounds And 19 Halls Identified For Public Rally

"ನಿಗದಿ ಪಡಿಸಿದ ಜಾಗದಲ್ಲಿ ಮಾತ್ರ ಪ್ರಚಾರ ಸಭೆಗಳನ್ನು ಮಾಡಬೇಕು. ರಾಜಕೀಯ ಪಕ್ಷಗಳು ಬಯಸಿದರೆ ಇನ್ನೂ ಸ್ಥಳಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ" ಎಂದು ಪಾಟ್ನಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಕುಮಾರ್ ರವಿ ಹೇಳಿದ್ದಾರೆ.

ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಅಕ್ಟೋಬರ್ 15ರ ಬಳಿಕ ಸಭೆಗಳಿಗೆ 200 ಜನರು ಸೇರಲು ಅವಕಾಶ ನೀಡಲಾಗುತ್ತದೆ. ಮೈದಾನದಲ್ಲಿ ಸಮಾವೇಶ ನಡೆಸುವಾಗ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚನೆ ನೀಡಲಾಗಿದೆ.

243 ಸದಸ್ಯ ಬಲದ ಬಿಹಾರ ವಿಧಾನಸಭೆ ಚುನಾವಣೆಗೆ ಅಕ್ಟೋಬರ್ 28 (71 ಸೀಟು), ನವೆಂಬರ್ 3 (94 ಸೀಟು), ನವೆಂಬರ್ 7 (78) ಸೀಟುಗಳಿಗೆ ಚುನಾವಣೆ ನಡೆಯಲಿದೆ. ನವೆಂಬರ್ 10ರಂದು ಫಲಿತಾಂಶ ಪ್ರಕಟವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+