ಬಿಹಾರದ ಸಚಿವ ದಂಪತಿಗೆ ಕೊರೊನಾ ಸೋಂಕು ದೃಢ

ಪಾಟ್ನಾ, ಜೂನ್ 29: ಬಿಹಾರದ ಸಚಿವ ದಂಪತಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಬಿಹಾರದ ಹಿಂದುಳಿದ ವರ್ಗಗಳ ಸಚಿವ ವಿನೋದ್ ಕುಮಾರ್ ಸಿಂಗ್ ಹಾಗೂ ಪತ್ನಿಗೆ ಕೊರೊನಾ ಸೋಂಕು ತಗುಲಿದೆ. ಕಟಿಹಾರ್ ಜಿಲ್ಲೆಯ ಸಿಟಿ ಹೋಟೆಲ್‌ನಲ್ಲಿ ಅವರನ್ನು ಐಸೊಲೇಷನ್‌ನಲ್ಲಿರಿಸಲಾಗಿದೆ.

ಈ ಕುರಿತು ಜಿಲ್ಲಾ ಮ್ಯಾಜಿಸ್ಟ್ರೇಟ್ ಕನ್ವಾಲ್ ತನುಜ್ ಮಾಹಿತಿ ನೀಡಿದ್ದು, ಸಚಿವರು ಹಾಗೂ ಅವರ ದಂಪತಿಗೆ ಕೊರೊನಾ ಸೋಂಕು ಇರುವುದನ್ನು ದೃಢಪಡಿಸಿದ್ದಾರೆ. ವಿನೋದ್ ಕುಮಾರ್ ಸಿಂಗ್ ಬಿಜೆಪಿ ಪಕ್ಷಕ್ಕೆ ಸೇರಿದವರಾಗಿದ್ದಾರೆ. ಗಂಟಲು ದ್ರವದ ಮಾದರಿಯನ್ನು ಪಾಟ್ನಾದಲ್ಲಿ ಪರೀಕ್ಷೆಗೆಂದು ನೀಡಿದ್ದರು. ಬಳಿಕ ಕಟಿಹಾರಕ್ಕೆ ಆಗಮಿಸಿದ್ದರು.

ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟ ಬಳಿಕ ತಕ್ಷಣವೇ ಕಟಿಹಾರ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ತೆರಳಿ ಬಳಿಕ ನಗರದಲ್ಲಿರುವ ಹೋಟೆಲ್‌ ಒಂದರಲ್ಲಿ ಐಸೋಲೇಷನ್‌ಗೆ ತೆರಳಿದ್ದಾರೆ.

Bihar MinisterAand Wife Test Positive For Coronavirus

ಯಾರ್ಯಾರು ಸಚಿವರ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದರು ಎನ್ನುವ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ. ಅವರ ಮಾದರಿಯನ್ನು ಕೂಡ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ. ಜೂನ್ 22 ರಂದು ಬಿಜೆಪಿ ಶಾಸಕ ಜಿಬೇಶ್ ಕುಮಾರ್ ಮಿಶ್ರಾ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು. ಪಾಟ್ನಾದ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+