ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರದಲ್ಲಿ 16 ದಿನ ಲಾಕ್ ಡೌನ್ ವಿಸ್ತರಣೆ

|
Google Oneindia Kannada News

ಪಾಟ್ನಾ, ಜುಲೈ 29 : ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯಲು ಬಿಹಾರದಲ್ಲಿ ಲಾಕ್ ಡೌನ್ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ. ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 43,591.

Recommended Video

ಬೆಂಗಳೂರಿನಲ್ಲಿ ನೆಲಸಮವಾಯ್ತು 4 ಅಂತಸ್ತಿನ ಕಟ್ಟಡ | Oneindia Kannada

ಬಿಹಾರ ಸರ್ಕಾರ ಬುಧವಾರ ಲಾಕ್ ಡೌನ್ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಆಗಸ್ಟ್ 1 ರಿಂದ 16ರ ತನಕ ಕಂಟೈನ್ಮೆಂಟ್ ಝೋನ್‌ಗಳಲ್ಲಿ ಲಾಕ್ ಡೌನ್ ಜಾರಿಯಲ್ಲಿರುತ್ತದೆ. ಲಾಕ್ ಡೌನ್ ಮಾರ್ಗಸೂಚಿಯನ್ನು ಸರ್ಕಾರ ಬಿಡುಗಡೆ ಮಾಡಿದೆ.

ಕೊರೊನಾ ಭೀತಿಯ ನಡುವೆಯೂ ಬಿಹಾರ ಚುನಾವಣೆ ಸಿದ್ಧತೆ ಕೊರೊನಾ ಭೀತಿಯ ನಡುವೆಯೂ ಬಿಹಾರ ಚುನಾವಣೆ ಸಿದ್ಧತೆ

Bihar Govt Extended Lockdown Till August 16

ಕೇಂದ್ರ ಗೃಹ ಇಲಾಖೆ ಪ್ರಕಟಿಸಿರುವ ಅನ್ ಲಾಕ್ ಮಾರ್ಗಸೂಚಿ ಜುಲೈ 30ರ ತನಕ ಜಾರಿಯಲ್ಲಿರುತ್ತದೆ. ಬಳಿಕ ಸರ್ಕಾರ ಮತ್ತೊಂದು ಮಾರ್ಗಸೂಚಿಯನ್ನು ಪ್ರಕಟಿಸುವ ನಿರೀಕ್ಷೆ ಇದೆ. ಇದಕ್ಕೂ ಮೊದಲೇ ಬಿಹಾರ ಸರ್ಕಾರ ಲಾಕ್ ಡೌನ್‌ ಅನ್ನು ಆಗಸ್ಟ್ 16ರ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.

ಪಶ್ಚಿಮ ಬಂಗಾಳದಲ್ಲಿ ಲಾಕ್ ಡೌನ್ ಆ.31ರ ತನಕ ವಿಸ್ತರಣೆ ಪಶ್ಚಿಮ ಬಂಗಾಳದಲ್ಲಿ ಲಾಕ್ ಡೌನ್ ಆ.31ರ ತನಕ ವಿಸ್ತರಣೆ

ಬಿಹಾರದಲ್ಲಿ ಇದುವರೆಗೂ 43,591 ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದೆ. 269 ಜನರು ಮೃತಪಟ್ಟಿದ್ದಾರೆ. ರಾಜ್ಯದ ರಾಜಧಾನಿ ಪಾಟ್ನಾದಲ್ಲಿಯೇ 7,481 ಪ್ರಕರಣಗಳಿವೆ.

ಕೊರೊನಾ ಹರಡುವಿಕೆ ತಡೆಯಲು ದಿಟ್ಟ ಹೆಜ್ಜೆ ಇಟ್ಟ ಬಿಹಾರ ಕೊರೊನಾ ಹರಡುವಿಕೆ ತಡೆಯಲು ದಿಟ್ಟ ಹೆಜ್ಜೆ ಇಟ್ಟ ಬಿಹಾರ

ಬಿಹಾರ ಸರ್ಕಾರ ಪಾಟ್ನಾದಲ್ಲಿ ಸೋಂಕು ಹರಡದಂತೆ ತಡೆಯಲು ಪ್ರತಿ ಭಾನುವಾರ ಸಂಪೂರ್ಣ ಲಾಕ್ ಡೌನ್ ಮಾಡುತ್ತಿತ್ತು. ಈಗ ಇಡೀ ರಾಜ್ಯದಲ್ಲಿ ಲಾಕ್ ಡೌನ್ ಆಗಸ್ಟ್ 16ರ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಪಶ್ಚಿಮ ಬಂಗಾಳ ಸರ್ಕಾರ ಈಗಾಗಲೇ ಲಾಕ್ ಡೌನ್ ಅವಧಿಯನ್ನು ಆಗಸ್ಟ್ 31ರ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಕೇಂದ್ರ ಗೃಹ ಇಲಾಖೆ ಜುಲೈ 31ರಂದು ಲಾಕ್ ಡೌನ್ ವಿಸ್ತರಣೆ ಮಾಡುವ ಕುರಿತು ಆದೇಶ ಹೊರಡಿಸುವ ನಿರೀಕ್ಷೆ ಇದೆ.

English summary
Bihar Govt extended lockdown for 16 days. New lockdown period effective from 1st August. State reported 43,591 COVID-19 cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X