• search
 • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜೆಡಿಯು ಸೋತರೆ ಅದು ಕೊರೊನಾದಿಂದ ಮಾತ್ರ: ಜೆಡಿಯು ವಕ್ತಾರ

|

ಪಾಟ್ನಾ, ನ. 10: ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆಯೂ ಬಿಹಾರದಲ್ಲಿ 243 ವಿಧಾನಸಭಾ ಸ್ಥಾನಗಳಿಗಾಗಿ ಮೂರು ಹಂತಗಳಲ್ಲಿ ಚುನಾವಣೆ ನಡೆಸಲಾಗಿದ್ದು, ನವೆಂಬರ್ 10ರಂದು ಅಂತಿಮ ಫಲಿತಾಂಶ ಹೊರಬರಲಿದೆ. ಆರಂಭಿಕ ಮತ ಎಣಿಕೆಯಂತೆ ಆರ್ ಜೆ ಡಿ-ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿರುವುದು ಜೆಡಿಯು -ಬಿಜೆಪಿಗೆ ಆಘಾತ ತಂದಿದೆ.

   ಎಲ್ಲಾಕಡೆ ಅರಳಿದ ಕಮಲ!! | BJP | Oneindia Kannada

   ಆದರೆ, ಟ್ರೆಂಡ್ ಪ್ರತಿ ಸುತ್ತಿನಲ್ಲೂ ಬದಲಾಗುತ್ತಿದ್ದು, ಭಾರಿ ಪ್ರತಿಸ್ಪರ್ಧೆ ಕಂಡು ಬಂದಿದೆ. ಆದರೆ, ಜೆಡಿಯು ವಕ್ತಾರ ಕೆಸಿ ತ್ಯಾಗಿ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದು, ಜೆಡಿಯುವನ್ನು ಆರ್ ಜೆಡಿ ಅಥವಾ ತೇಜಸ್ವಿ ಯಾದವ್ ಸೋಲಿಸಲು ಸಾಧ್ಯವಿಲ್ಲ. ನಮಗೆ ಸೋಲುಂಟಾದರೆ ಅದು ಕೊರೊನಾದಿಂದ ಮಾತ್ರ ಎಂದಿದ್ದಾರೆ.

   Live Updates: ಬಿಹಾರದ ರಾಘೋಪುರ್ ಕ್ಷೇತ್ರದಲ್ಲಿ ತೇಜಸ್ವಿ ಯಾದವ್ ಮುನ್ನಡೆ

   ಜನತೆ ನೀಡುವ ತೀರ್ಪನ್ನು ಮುಕ್ತವಾಗಿ ಸ್ವೀಕರಿಸುತ್ತೇವೆ. ದೇಶಕ್ಕೆ ಮಹಾಮಾರಿಯಾಗಿರುವ ಕೊರನಾವೈರಸ್ ಜೊತೆ ನಿತೀಶ್ ಅವರು ಹೋರಾಟದಲ್ಲಿ ತೊಡಗಿದ್ದರಿಂದ ಚುನಾವಣೆ ತಂತ್ರಗಾರಿಕೆಯಲ್ಲಿ ಸೋತರು. ನಾವು ಕೋವಿಡ್ ವಿರುದ್ಧ ಹೋರಾಟದಲ್ಲಿ ಸೋತಿದ್ದೇವೆ. ಕೋವಿಡ್19ನಿಂದ ನಮಗೆ ಇಂಥ ಪರಿಸ್ಥಿತಿ ಬಂದಿದೆ ಎಂದು ಜೆಡಿಯು ಮುಖಂಡ ಹೇಳಿದ್ದಾರೆ.

   ಟ್ರೆಂಡ್ ಏನು ಹೇಳುತ್ತಿದೆ

   ಸದ್ಯದ ಪರಿಸ್ಥಿತಿಯಲ್ಲಿ ಸಮಯ 10:31ರ ವೇಳೆಗೆ

   ಎನ್ಡಿಎ: 112, ಮಹಾಘಟಬಂಧನ್ : 110, ಇತರೆ 18 ಬಂದಿದೆ. ಪ್ರತಿಕ್ಷಣ ಟ್ರೆಂಡ್ ಬದಲಾಗುತ್ತಿದ್ದು, ರೋಚಕ ಕ್ಲೈಮ್ಯಾಕ್ಸ್ ನಂಥ ಸಾಗುತ್ತಿದೆ.

   ಕಳೆದ ಲೋಕಸಭೆ ಚುನಾವಣೆಯಲ್ಲಿ ನಿತೀಶ್ ನೇತೃತ್ವದಲ್ಲಿ 40 ಸ್ಥಾನ ಗಳಿಸಲಾಯಿತು ಆದರೆ, ಆರ್ ಜೆಡಿ ಅಸ್ತಿತ್ವ ಕಂಡು ಬಂದಿರಲಿಲ್ಲ. ಆದರೆ, ನೈಸರ್ಗಿಕ ವಿಕೋಪ, ಮಹಾಮಾರಿಯಿಂದ ನಾವು ಸೋಲು ಕಾಣುವಂಥ ಪರಿಸ್ಥಿತಿ ಬಂದಿದೆ ಎಂದಿದ್ದಾರೆ.

   ಚಿರಾಗ್ ಪಾಸ್ವಾನ್ ಜೊತೆಗಿನ ಗುದ್ದಾಟವೂ ಎನ್ಡಿಎ ಮೈತ್ರಿಕೂಟಕ್ಕೆ ಮಾರಕವಾಗಬಲ್ಲುದು ಎಂದಿದ್ದಾರೆ. ನಿತೀಶ್ ವಿರುದ್ಧ ಚಿರಾಗ್ ಅವರು ಸತತ ವಾಗ್ದಾಳಿ ನಡೆಸಿದ್ದು, ನಿತೀಶ್ ವಿರೋಧಿಗಳಿಗೆ ಲಾಭವಾಗತೊಡಗಿತು. ಮುಖ್ಯವಾಗಿ ಬಿಹಾರಿ ಮೊದಲು ಘೋಷಣೆ, ವಲಸೆ ಕಾರ್ಮಿಕರ ಸಮಸ್ಯೆ ಬಲವಾಗಿ ನಿತೀಶ್ ಸರ್ಕಾರಕ್ಕೆ ಹೊಡೆತ ನೀಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

   English summary
   Nitish Kumar's party conceded defeat early as the ruling National Democratic Alliance (NDA) trailed the opposition alliance led by Tejashwi Yadav.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X