• search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಹಾರ; 71 ಕ್ಷೇತ್ರದಲ್ಲಿ ಮರು ಚುನಾವಣೆ ಇಲ್ಲ

|

ಪಾಟ್ನಾ, ಅಕ್ಟೋಬರ್ 30: ಬಿಹಾರ ವಿಧಾನಸಭೆಯ ಮೊದಲ ಹಂತದ ಮತದಾನ ಅಕ್ಟೋಬರ್ 28ರಂದು ನಡೆದಿತ್ತು. 71 ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಯಾವುದೇ ಕ್ಷೇತ್ರದಲ್ಲೂ ಮರು ಮತದಾನ ನಡೆಸುವಂತೆ ವೀಕ್ಷಕರು ಶಿಫಾರಸು ಮಾಡಿಲ್ಲ.

ಶುಕ್ರವಾರ ಚುನಾವಣಾ ಆಯೋಗ ಈ ಕುರಿತು ಮಾಹಿತಿ ನೀಡಿದೆ. ರಾಜ್ಯ ಮುಖ್ಯ ಚುನಾವಣಾಧಿಕಾರಿ ಹೆಚ್. ಆರ್. ಶ್ರೀನಿವಾಸ್, "ಜಿಲ್ಲಾ ಚುನಾವಣಾಧಿಕಾರಿ, ವೀಕ್ಷಕರು ನೀಡಿದ ವರದಿಯಂತೆ ಅಗತ್ಯವಿದ್ದರೆ ಮರು ಚುನಾವಣೆ ನಡೆಸಲಾಗುತ್ತದೆ" ಎಂದರು.

ಬಿಹಾರ: 2 ಹಂತದ ಚುನಾವಣೆಯ 389 ಕಲಿಗಳ ವಿರುದ್ಧ ಕ್ರಿಮಿನಲ್ ಕೇಸ್!

"ಚುನಾವಣೆ ನಡೆದ 71 ಕ್ಷೇತ್ರಗಳ ಸಾಮಾನ್ಯ ವೀಕ್ಷಣೆಯನ್ನು ನಡೆಸಲಾಗುತ್ತದೆ. 31,371 ಮತಗಟ್ಟೆಗಳಲ್ಲಿ ಎಲ್ಲಿಯೂ ಮರು ಮತದಾನ ನಡೆಸುವಂತೆ ವೀಕ್ಷಕರು ಶಿಫಾರಸು ಮಾಡಿಲ್ಲ. 16 ಜಿಲ್ಲೆಗಳಲ್ಲಿ ಮತದಾನ ನಡೆದಿದೆ" ಎಂದು ಚುನಾವಣಾಧಿಕಾರಿಗಳು ತಿಳಿಸಿದರು.

ಬಿಹಾರ: ಮೊದಲ ಹಂತದಲ್ಲಿ ಶೇ.55.69ರಷ್ಟು ದಾಖಲೆ ಮತದಾನ

ಮೊದಲ ಹಂತದಲ್ಲಿ ಶೇ 55.69ರಷ್ಟು ಮತದಾನವಾಗಿದೆ. ನವೆಂಬರ್ 3ರಂದು (94 ಸೀಟು), ನವೆಂಬರ್ 7ರಂದು (78) ಸೀಟುಗಳಿಗೆ ಚುನಾವಣೆ ನಡೆಯಲಿದೆ. ನವೆಂಬರ್ 10ರಂದು ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ.

ಬಿಹಾರ ವಿಧಾನಸಭಾ ಚುನಾವಣೆ: 71 ಕ್ಷೇತ್ರದಲ್ಲಿ ಮತದಾನ ಮುಕ್ತಾಯ

ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದ ದಿನದಿಂದ ಇದುವರೆಗೂ ರಾಜ್ಯದಲ್ಲಿ 50 ಕೋಟಿ ಹಣವನ್ನು ವಶಕ್ಕೆ ಪಡೆಯಲಾಗಿದೆ. ವಿವಿಧ ಪ್ರದೇಶದಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿ 3.21 ಕೋಟಿ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

English summary
Bihar Chief Electoral Officer H. R. Srinivas said that observers have not recommended re-polling in any of the 71 seats that went to polls in the first phase on October 28.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X