• search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಹಾರ ಚುನಾವಣೆಯಲ್ಲಿ ನೋಟಾ ಬಟನ್ ಒತ್ತಿದವರೆಷ್ಟು ಮಂದಿ?

|

ಪಾಟ್ನಾ, ನ. 11: ಕೊವಿಡ್19 ಸಂಕಷ್ಟದ ನಡುವೆ ಕೇಂದ್ರ ಚುನಾವಣಾ ಆಯೋಗವು ಬಿಹಾರದಲ್ಲಿ ವಿಧಾನಸಭೆ ಚುನಾವಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. 243 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ 3755 ಅಭ್ಯರ್ಥಿಗಳ ಚುನಾವಣಾ ಭವಿಷ್ಯ ಹೊರ ಬಂದಿದ್ದು, ಎನ್ಡಿಎ ಸರಳ ಬಹುಮತ ಪಡೆದುಕೊಂಡಿದೆ.

ಬಿಹಾರ ವಿಧಾನಸಭಾ ಚುನಾವಣೆಗೆ ಮೂರು ಹಂತಗಳಲ್ಲಿ ಮತದಾನ ನಡೆಸಲಾಯಿತು ಅಕ್ಟೋಬರ್ 28ರ ಮೊದಲ ಹಂತದಲ್ಲಿ ಶೇ.55.69ರಷ್ಟು ಮತದಾನ ನಡೆದಿದೆ. ನವೆಂಬರ್ 03ರ ಎರಡನೇ ಹಂತದಲ್ಲಿ ಶೇ.53.51ರಷ್ಟು ಮತದಾನ ನಡೆದಿದೆ. 3ನೇ ಹಂತದಲ್ಲಿ ಶೇ.51ರಷ್ಟು ಮತದಾನ ದಾಖಲಾಗಿತ್ತು. ಒಟ್ಟಾರೆ 4 ಕೋಟಿ ಮತದಾರರು ಮತಚಲಾಯಿಸಿದ್ದರು. ಈ ಪೈಕಿ ನೋಟಾ ಬಟನ್ ಒತ್ತಿದವರೆಷ್ಟು ಎಂದರೆ ಬರೋಬ್ಬರಿ 7 ಲಕ್ಷ ಮಂದಿ.

Infographics:ಶೇಕಡವಾರು ಮತ ಗಳಿಕೆ, ಅತಿ ಹೆಚ್ಚು ಸ್ಥಾನ RJD ಟಾಪ್

ಇವಿಎಂನಲ್ಲಿರುವ ಅಭ್ಯರ್ಥಿಗಳ ಪೈಕಿ ಯಾರಿಗೂ ಮತ ಹಾಕಲು ಇಚ್ಛಿಸದೆ None off the above ಆಯ್ಕೆಯನ್ನು 7 ಲಕ್ಷ ಮಂದಿ ಮಾಡಿದ್ದಾರೆ ಎಂದು ಚುನಾವಣಾ ಆಯೋಗವು ಅಂಕಿ ಅಂಶ ನೀಡಿದೆ. ಸುಮಾರು 7,06,252 ಮತದಾರರು (ಶೇ 1.7) ನೋಟಾ ಆಯ್ಕೆ ಮಾಡಿಕೊಂಡಿದ್ದಾರೆ

2013ರಿಂದ ಇವಿಎಂನಲ್ಲಿ ನೋಟಾ ಬಟನ್ ಅಳವಡಿಸಲಾಗಿದೆ. ಇದು ಮತಯಂತ್ರದ ಕೊನೆ ಆಯ್ಕೆ ಬಟನ್ ಆಗಿರಬೇಕು ಎಂದು ಸುಪ್ರೀಂಕೋರ್ಟ್ ಸೂಚನೆಯನ್ನು ಪಾಲಿಸಲಾಗುತ್ತಿದೆ. ನೋಟಾ ಬರುವುದಕ್ಕೂ ಮುನ್ನ ಬ್ಯಾಲೆಟ್ ಪತ್ರ ಬಳಸಿ ಮತ ಮುದ್ರೆ ಒತ್ತುವ ಪ್ರಕ್ರಿಯೆ ಜಾರಿಯಲ್ಲಿತ್ತು. ಆಗ ಕೂಡಾ 49 ಒ ಅರ್ಜಿ ನಮೂನೆ ಕೇಳಿ ಪಡೆದು ಅರ್ಜಿ ತುಂಬಿ ಯಾವುದೇ ಅಭ್ಯರ್ಥಿಗೆ ಮತ ಹಾಕುತ್ತಿಲ್ಲ ಎಂದು ದಾಖಲು ಮಾಡಬಹುದಾಗಿತ್ತು. ಈ ಬಾರಿ ಬಿಹಾರದಲ್ಲಿ ಗೆಲುವಿನ ಅಂತರಕ್ಕಿಂತ ಹೆಚ್ಚಿನ ನೋಟಾ ಮತಗಳು ದಾಖಲಾಗಿರುವುದು ವಿಶೇಷ.

ಬಿಹಾರ: ಸಿಎಂ ಆಕಾಂಕ್ಷಿಗೆ 'ನೋಟಾ'ಕ್ಕಿಂತಲೂ ಕಡಿಮೆ ಮತ!

ಈ ಮತದಾನ ಮಾಡಬೇಕಾದರೆ ಯಾವ ಕಾರಣಕ್ಕಾಗಿ ಯಾವ ಅಭ್ಯರ್ಥಿಯೂ ಹಿಡಿಸಿಲ್ಲ ಎಂದು ನಮೂದಿಸಬೇಕು ಮತದಾರನ ಹೆಸರು ವಿಳಾಸವನ್ನು ಚುನಾವಣಾ ಆಯೋಗ ಗುಪ್ತವಾಗಿರಿಸುತ್ತದೆ. ಒಂದು ವೇಳೆ ಫಾರ್ಮ್ 49 ಬಳಸಿ ಶೇ.40ಕ್ಕಿಂತ ಅಧಿಕ ಮತ ಬಿದ್ದರೆ ಮರು ಚುನಾವಣೆ ಮಾಡಬೇಕಾಗುತ್ತದೆ. ಆದರೆ, ಮರು ಚುನಾವಣೆ, ಅಭ್ಯರ್ಥಿಯ ಅನರ್ಹತೆ ಬಗ್ಗೆ ಸುಪ್ರೀಂಕೋರ್ಟ್ ವ್ಯತಿರಿಕ್ತ ತೀರ್ಪು ನೀಡಿದ್ದು, ನೋಟಾ ಪ್ರಮುಖ ಅಸ್ತ್ರವಾಗದೇ ಬಡವನ ಕೋಪ ದವಡೆಗೆ ಮೂಲ ಎಂಬಂತೆ ಆಗಿದೆ.

English summary
A little over seven lakh voters in Bihar used the 'none of the above' or NOTA option in the assembly elections, according to the Election Commission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X