ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರ ಚುನಾವಣೆ ಫಲಿತಾಂಶ: ಎನ್‌ಡಿಎಯೊಳಗೆ ಕುಗ್ಗಿದ ಜೆಡಿಯು

|
Google Oneindia Kannada News

ಪಾಟ್ನಾ, ನವೆಂಬರ್ 10: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಹಾಘಟಬಂಧನ್ ಎನ್‌ಡಿಎ ನಡುವೆ ಕಠಿಣ ಹಣಾಹಣಿ ಏರ್ಪಟ್ಟಿದೆ. ಮತ ಎಣಿಕೆ ಕೇಂದ್ರದಿಂದ ಹೊರಬರುತ್ತಿರುವ ಮತಎಣಿಕೆಯ ಮಾಹಿತಿ ಪ್ರಕಾರ ಜೆಡಿಯು ಮೇಲೆ ಬಿಜೆಪಿಗೆ ಸ್ಪಷ್ಟ ಮುನ್ನಡೆ ಇರುವುದು ಗೋಚರಿಸುತ್ತದೆ.

Recommended Video

ಎಲ್ಲಾಕಡೆ ಅರಳಿದ ಕಮಲ!! | BJP | Oneindia Kannada

ಎನ್‌ಡಿಎ ಒಳಗೆ ಬಿಜೆಪಿ 75ನೇ ಸ್ಥಾನದಲ್ಲಿದ್ದರೆ ಜೆಡಿಯು 54ನೇ ಸ್ಥಾನದಲ್ಲಿದೆ.ಎನ್‌ಡಿಎ ಒಳಗೆ ಯುದ್ಧ ಆರಂಭವಾಗಿದೆ. ಈ ಅಂತರ್ ಮೈತ್ರಿ ಯುದ್ಧದಲ್ಲಿ ಮತ ಎಣಿಕೆ ಕೇಂದ್ರದಿಂದ ಹೊರ ಹೊಮ್ಮುತ್ತಿರುವ ಫಲಿತಾಂಶ ಜೆಡಿಯು ಮೇಲೆ ಸ್ಪಷ್ಟ ಮುನ್ನಡೆ ಇರುವುದು ಗೋಚರವಾಗುತ್ತಿದೆ.

Live Updates: ಬಿಹಾರದಲ್ಲಿ ಮಹಾಘಟಬಂಧನ್ ವಿರುದ್ಧ ಎನ್ ಡಿಎ ಮುನ್ನಡೆLive Updates: ಬಿಹಾರದಲ್ಲಿ ಮಹಾಘಟಬಂಧನ್ ವಿರುದ್ಧ ಎನ್ ಡಿಎ ಮುನ್ನಡೆ

ಮಹಾಘಟ್‌ಬಂಧನದ ವಿರುದ್ಧ ಎನ್‌ಡಿಎ 133 ಸ್ಥಾನಗಳಲ್ಲಿ ಜೆಡಿಯು 97ನೇ ಸ್ಥಾನದಲ್ಲಿದೆ. ಆದರೆ ಎನ್‌ಡಿಎಯೊಳಗಿನ ಬಿಜೆಪಿ 72ನೇ ಸ್ಥಾನದಲ್ಲಿದ್ದರೆ ಜೆಡಿಯು 54ನೇ ಸ್ಥಾನದಲ್ಲಿ ಉಳಿದಿದೆ.

Bihar Election Results: BJP Nudges Out JDU Within NDA

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಜೆಡಿಯು ದೊಡ್ಡ ಪಾಲುದಾರರಾಗಿದ್ದು, 2000ದ ಚುನಾವಣೆಯನ್ನು ಹೊರತುಪಡಿಸಿ, ಮುಖ್ಯಮಂತ್ರಿ ನಿತೀಶ್ ಕುಮಾರ್ ಪಕ್ಷವು ಯಾವಾಗಲೂ ಎನ್‌ಡಿಎಯೊಳಗೆ ಇದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿರುವ ಚುನಾವಣಾ ಆಯೋಗ, ಫಲಿತಾಂಶ ಘೋಷಣೆ ವಿಳಂಬವಾಗಲಿದೆ ಎಂದು ಸ್ಪಷ್ಟಪಡಿಸಿದೆ. ಮಾರಕ ಕೊರೊನಾ ವೈರಸ್ ಹಾವಳಿಯ ಹಿನ್ನೆಲೆಯಲ್ಲಿ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಫಲಿತಾಂಶ ವಿಳಂಬವಾಗಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ತೇಜಸ್ವಿಗೆ ಬಲ ತಂದ ಎಡಪಕ್ಷಗಳು, 20ಕ್ಷೇತ್ರಗಳಲ್ಲಿ ಮುನ್ನಡೆತೇಜಸ್ವಿಗೆ ಬಲ ತಂದ ಎಡಪಕ್ಷಗಳು, 20ಕ್ಷೇತ್ರಗಳಲ್ಲಿ ಮುನ್ನಡೆ

ತಡರಾತ್ರಿ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಅಲ್ಲದೇ ಈ ಬಾರಿ ಮತ ಎಣಿಕೆ ಕೇಂದ್ರಗಳ ಸಂಖ್ಯೆ ಹೆಚ್ಚು ಮಾಡಿರುವುದರಿಂದ ಮತ ಎಣಿಕೆ ಪ್ರಕ್ರಿಯೆ ತಡವಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

243 ಸದಸ್ಯ ಬಲದ ವಿಧಾನಸಭೆ ಪೈಕಿ ಗೆಲುವಿಗೆ 122 ಸೀಟುಗಳ ಅವಶ್ಯಕತೆ ಇದೆ. ಪ್ರಮುಖ ಮೈತ್ರಿಕೂಟಗಳಾದ ಎನ್‌ಡಿಎ ಹಾಗೂ ಮಹಾ ಘಟಬಂಧನ್‌ ನಡುವೆ ನೇರ ಹಣಾಹಣಿ ಈ ಬಾರಿ ಇದೆ. ಎನ್‌ಡಿಯಲ್ಲಿ ಬಿಜೆಪಿ, ಜೆಡಿಯು, ಮಾಜಿ ಸಿಎಂ ಜಿತಿನ್‌ರಾಮ್‌ ಮಾಂಝಿ ಅವರ ಹಿಂದೂಸ್ತಾನ್‌ ಅವಾಮಿ ಮೋರ್ಚಾ ಹಾಗೂ ಮುಕೇಶ್‌ ಸಾಹ್ನಿಯವರ ವಿಕಾಸಶೀಲ ಇನ್ಸಾನ್‌ ಪಾರ್ಟಿ ಇವೆ.

ಮಹಾ ಘಟಬಂಧನ್‌ನಲ್ಲಿಆರ್‌ಜೆಡಿ, ಕಾಂಗ್ರೆಸ್‌, ಸಿಪಿಐ(ಎಂಎಲ್‌), ಸಿಪಿಐ, ಸಿಪಿಐ(ಎಂ) ಇವೆ. ಉಪೇಂದ್ರ ಖುಶ್ವಾಹ ಅವರ ರಾಷ್ಟ್ರೀಯ ಲೋಕ ಸಮತಾ ಪಾರ್ಟಿಯು ಬಿಎಸ್ಪಿ ಬೆಂಬಲದೊಂದಿಗೆ ಸ್ಪರ್ಧಿಸಿದ್ದರೆ, ಚಿರಾಗ್‌ ಪಾಸ್ವಾನ್‌ ನೇತೃತ್ವದ ಲೋಕ ಜನಶಕ್ತಿ ಪಾರ್ಟಿಯು ಸ್ವತಂತ್ರವಾಗಿ ಸ್ಪರ್ಧೆ ನಡೆಸಿದೆ.

English summary
Bihar Election Results 2020: hile the NDA is locked in a tough battle with the Mahagathbandhan in the Bihar Assembly election, there is a battle going on within the NDA. In this intra-alliance battle, the BJP has a clear lead over the JDU in the trends emerging from the counting centres.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X