• search
 • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಹಾರದ 92 ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಪ್ರಕಟ

|

ಪಾಟ್ನಾ, ನವೆಂಬರ್.10: ಬಿಹಾರದ 243 ವಿಧಾನಸಭಾ ಕ್ಷೇತ್ರಗಳ ಪೈಕಿ 92 ಕ್ಷೇತ್ರಗಳ ಚುನಾವಣಾ ಫಲಿತಾಂಶ ಪ್ರಕಟಿಸಲಾಗಿದೆ. 4.10 ಕೋಟಿ ಮತಗಳ ಪೈಕಿ 3.40 ಕೋಟಿ ಮತಗಳ ಎಣಿಕೆ ಕಾರ್ಯ ಪೂರ್ಣಗೊಂಡಿದೆ ಎಂದು ಬಿಹಾರ ಚುನಾವಣಾ ಆಯೋಗವು ಮಾಹಿತಿ ನೀಡಿದೆ.

   Bihar Election : ಊಹೆ ಮಾಡಿರಲಿಲ್ಲ ಎಂದ ತೇಜಸ್ವಿ!! | Oneindia Kannada

   ಮಂಗಳವಾರ ರಾತ್ರಿ 9 ಗಂಟೆ ವೇಳೆಗೆ ಬಿಹಾರದ 92 ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಹೊರ ಬಿದ್ದಿದೆ. ಈ ಪೈಕಿ ಬಿಜೆಪಿ 28, ಆರ್ ಜೆಡಿ 25, ಜೆಡಿಯು 17, ಕಾಂಗ್ರೆಸ್ 7, ಸಿಪಿಐ(ಎಂ-ಲ್) 6, ಹಾಗೂ ವಿಕಾಸಶೀಲ ಇನ್ಸಾನ್ 2, ಎಐಎಂಐಎಂ ಪಕ್ಷ 2, ಸಿಪಿಐ, ಸಿಪಿಐ(ಎಂ), ಹಿಂದೂಸ್ತಾನ್ ಅವಂ ಮೋರ್ಚಾ 1, ಹಾಗೂ ಒಬ್ಬ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

   Live Updates: ಬಿಹಾರದಲ್ಲಿ ಮಹಾಘಟಬಂಧನ್ ವಿರುದ್ಧ ಎನ್ ಡಿಎ ಮುನ್ನಡೆ

   ಕೊವಿಡ್-19 ಶಿಷ್ಟಾಚಾರ ಪಾಲನೆ ಹಿನ್ನೆಲೆ ಫಲಿತಾಂಶ ಪ್ರಕಟಿಸುವಲ್ಲಿ ವಿಳಂಬವಾಗಲಿದೆ ಎಂದು ಬಿಹಾರ ಚುನಾವಣಾ ಆಯೋಗದ ಮುಖ್ಯಸ್ಥ ಹೆಚ್.ಆರ್.ಶ್ರೀನಿವಾಸ್ ಈ ಮೊದಲೇ ಮಾಹಿತಿ ನೀಡಿದ್ದರು. ಕೇಂದ್ರ ಚುನಾವಣಾ ಆಯೋಗದ ಕಾರ್ಯದರ್ಶಿಗಳು ಕೂಡಾ ಇದೇ ಮಾತನ್ನು ಪುನರುಚ್ಛರಿಸಿದ್ದರು.

   ಏನ್ ಹೇಳುತ್ತೆ ಟ್ರೆಂಡ್:

   ಬಿಹಾರದಲ್ಲಿ ರಾತ್ರಿ 8 ಗಂಟೆ ವೇಳೆಗೆ ಚುನಾವಣಾ ಆಯೋಗದ ಟ್ರೆಂಡ್ ಪ್ರಕಾರ, ಎನ್ ಡಿಎ ಮೈತ್ರಿಕೂಟವು 126 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಮಹಾಘಟಬಂಧನ್ 110 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಎಐಎಂಐಎಂ 5 ಕಡೆಗಳಲ್ಲಿ ಮುನ್ನಡೆ ಕಂಡುಕೊಂಡಿದೆ. ಬಿಎಸ್ ಪಿ 1 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರು.

   English summary
   Bihar Election Results 2020: Results Declared For 92 Assembly Constituency Out Of The Total 243 Seats.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X