ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇವಿಎಂ ದೂಷಿಸಬೇಡಿ ಎಂದ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ!

|
Google Oneindia Kannada News

ಪಾಟ್ನಾ, ನವೆಂಬರ್.10: ದೇಶದಲ್ಲಿ ಯಾವುದೇ ಚುನಾವಣೆಗಳ ಫಲಿತಾಂಶವು ಏನೇ ಬಂದರೂ ಮೊದಲು ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್(EVM) ವಿರುದ್ಧ ಬೊಟ್ಟು ಮಾಡುವುದನ್ನು ಮೊದಲು ಬಿಡಬೇಕು ಎಂದು ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಟ್ವೀಟ್ ಮಾಡಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆ ಮತ್ತು ಹಲವು ರಾಜ್ಯಗಳಲ್ಲಿ ನಡೆಯುತ್ತಿರುವ ಉಪ ಚುನಾವಣೆಗಳ ಮತಎಣಿಕೆ ಕಾರ್ಯ ಪ್ರಗತಿಯಲ್ಲಿರುವಾಗಲೂ ಕಾರ್ತಿ ಚಿದಂಬರಂ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಯಾವುದೇ ಪಕ್ಷ ಆದರೂ ಇವಿಎಂ ದೋಷದಿಂದ ಫಲಿತಾಂಶದಲ್ಲಿ ವ್ಯತ್ಯಾಸ ಆಗುತ್ತಿದೆ ಎನ್ನುವ ಆರೋಪ ಮಾಡುವಂತಿಲ್ಲ. "ನನ್ನ ಅನುಭವದ ಪ್ರಕಾರ, ಎಲೆಕ್ಟ್ರಾನಿಕ್ ವೋಟಿಂಗ್ ಮಷಿನ್ ಗಳು ಹೆಚ್ಚು ಉಪಯುಕ್ತ, ನಿಖರ ಹಾಗೂ ವಿಶ್ವಾಸಾರ್ಹವಾಗಿವೆ ಎಂದು ಸಂಸದ ಕಾರ್ತಿ ಚಿದಂಬರಂ ಟ್ವೀಟ್ ಮಾಡಿದ್ದಾರೆ.

 Bihar Election Results 2020: Congress MP Karti Chidambaram Told To Dont Blames EVM

 Live Updates: ಬಿಹಾರದಲ್ಲಿ ಮಹಾಘಟಬಂಧನ್ ವಿರುದ್ಧ ಎನ್ ಡಿಎ ಮುನ್ನಡೆ Live Updates: ಬಿಹಾರದಲ್ಲಿ ಮಹಾಘಟಬಂಧನ್ ವಿರುದ್ಧ ಎನ್ ಡಿಎ ಮುನ್ನಡೆ

ಬಿಹಾರದ 243 ವಿಧಾನಸಭಾ ಚುನಾವಣಾ ಫಲಿತಾಂಶ ಸಾಕಷ್ಟು ರಣರೋಚಕವಾಗಿದೆ. ಒಂದು ಕಡೆಯಲ್ಲಿ ಮತಎಣಿಕೆ ಕಾರ್ಯವು ವಿಳಂಬವಾಗುತ್ತಿದ್ದರೆ, ಇನ್ನೊಂದು ಕಡೆಯಲ್ಲಿ ಅಭ್ಯರ್ಥಿಗಳ ನಡುವೆ ಮತಗಳ ಅಂತರ ಸಾಕಷ್ಟು ಕದನ ಕುತೂಹಲವನ್ನು ಕೆರಳಿಸುವಂತಿದೆ.

ಏನ್ ಹೇಳುತ್ತೆ ಟ್ರೆಂಡ್:

ಬಿಹಾರ ಚುನಾವಣಾ ಆಯೋಗದ ಟ್ರೆಂಡ್ ಪ್ರಕಾರ, ಮಹಾಘಟಬಂಧನ್ ಮೈತ್ರಿಕೂಟದ ಎದುರಿಗೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ಮುನ್ನಡೆ ಸಾಧಿಸಿದೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಧ್ಯಾಹ್ನ 3 ಗಂಟೆ ಅಂಕಿ ಅಂಶಗಳ ಪ್ರಕಾರ, ಎನ್ ಡಿಎ ಮೈತ್ರಿಕೂಟ 128 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ 73, ಜೆಡಿಯು 49, ವಿಐಪಿ 5 ಮತ್ತು ಹಿಂದೂಸ್ಥಾನ್ ಅವಂ ಮೋರ್ಚಾ 1 ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಮಹಾಘಟಬಂಧನ್ 105 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಈ ಪೈಕಿ ಆರ್ ಜೆಡಿ 67, ಕಾಂಗ್ರೆಸ್ 20, ಎಡಪಕ್ಷ 18, ಬಿಎಸ್ ಪಿ 2, ಎಐಎಂಐಎಂ 2, ಎಲ್ ಜೆಪಿ 2, ಪಕ್ಷೇತರರು 4 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿರುವ ಬಗ್ಗೆ ಬಿಹಾರ ಚುನಾವಣಾ ಆಯೋಗದಿಂದ ಮಾಹಿತಿ ನೀಡಿದೆ.

English summary
Bihar Election Results 2020: Congress MP Karti Chidambaram Told To Don't Blames EVM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X