• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರದಲ್ಲಿ ವಿಶ್ವಾಸಮತ: ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ಕೊಡಲ್ಲ ಎಂದ ಬಿಜೆಪಿ ನಾಯಕ

|
Google Oneindia Kannada News

ಪಾಟ್ನಾ, ಆಗಸ್ಟ್ 24: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಹೊಸ ಮೈತ್ರಿ ಸರಕಾರ ಇಂದು ಬುಧವಾರ ಬಹುಮತ ಪರೀಕ್ಷೆ ಎದುರಿಸುತ್ತಿದೆ. ಇದೇ ವೇಳೆ, ಹಿಂದಿನ ಜೆಡಿಯು-ಬಿಜೆಪಿ ಮೈತ್ರಿ ಸರಕಾರದ ವೇಳೆ ಸ್ಪೀಕರ್ ಆಗಿದ್ದ ಬಿಜೆಪಿ ಮುಖಂಡ ವಿಜಯ್ ಕುಮಾರ್ ಸಿನ್ಹಾ ಅದೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಜಾರಿ ಮಾಡಲಾಗಿದ್ದರೂ ಅವರು ರಾಜೀನಾಮೆ ಕೊಡದಿರಲು ನಿರ್ಧರಿಸಿದ್ದಾರೆ. "ನಾನು ರಾಜೀನಾಮೆ ನೀಡುವುದಿಲ್ಲ. ಬುಧವಾರ ವಿಧಾನಸಭೆ ಅಧಿವೇಶನದಲ್ಲಿ ನಾನೇ ಸಭಾಧ್ಯಕ್ಷತೆ ವಹಿಸುತ್ತೇನೆ" ಎಂದು ವಿಜಯ್ ಕುಮಾರ್ ಸಿನ್ಹಾ ಹೇಳಿದ್ದಾರೆ.

ಪಾಟ್ನಾದಲ್ಲಿ ಬಿಹಾರ ಸಿಎಂ ಬೆಂಗಾವಲು ವಾಹನದ ಮೇಲೆ ಕಲ್ಲು ತೂರಾಟ: 13 ಮಂದಿ ಬಂಧನಪಾಟ್ನಾದಲ್ಲಿ ಬಿಹಾರ ಸಿಎಂ ಬೆಂಗಾವಲು ವಾಹನದ ಮೇಲೆ ಕಲ್ಲು ತೂರಾಟ: 13 ಮಂದಿ ಬಂಧನ

"ನನ್ನ ಸ್ಥಾನಕ್ಕೆ ರಾಜೀನಾಮೆ ಕೊಡುವುದಿಲ್ಲ. ಆಗಸ್ಟ್ 9ರಂದು ಆರ್‌ಜೆಡಿ ಶಾಸಕರು ನನ್ನ ವಿರುದ್ಧ ಅವಿಶ್ವಾಸ ಗೊತ್ತುವಳಿ ಸಲ್ಲಿಸಿದ್ದರು. ಆದರೆ, ಅದು ಸರಿಯಾದ ವಿಧಾನದಲ್ಲಿ ಇರಲಿಲ್ಲ," ಎಂದು ಅವರು ವಾದಿಸಿದ್ದಾರೆ.

ಆಗಸ್ಟ್ 10ರಂದು ಆರ್‌ಜೆಡಿ ಶಾಸಕರು ಮತ್ತೊಮ್ಮೆ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ದರು. ನಿಯಮಗಳ ಪ್ರಕಾರ, 14 ದಿನಗಳ ನಂತರ ಅದನ್ನು ಕೈಗೆತ್ತಿಕೊಳ್ಳಲಾಗುತ್ತದೆ. ನಿರ್ಣಯ ಕೊಟ್ಟ ದಿನ ಮತ್ತು ಬಹುಮತ ಪರೀಕ್ಷೆಯ ದಿನ ಈ ಎರಡು ದಿನ ಹೊರತಾಗಿ 14 ದಿನಗಳಾಗಬೇಕು. ಆಗಸ್ಟ್ 9 ಅಥವಾ ಅದಕ್ಕಿಂತ ಮುಂಚೆ ಅವಿಶ್ವಾಸ ನಿರ್ಣಯ ಸಲ್ಲಿಸಬೇಕಿತ್ತು. ಅದು ಆಗಿಲ್ಲ. ಹೀಗಾಗಿ, ವಿಜಯ್ ಕುಮಾರ್ ಸಿನ್ಹಾ ಸ್ಪೀಕರ್ ಸ್ಥಾನಕ್ಕೆ ಬುಧವಾರ ರಾಜೀನಾಮೆ ನೀಡುವುದಿಲ್ಲ ಎಂದು ಹೇಳುತ್ತಿರುವುದು.

ಸರಕಾರಕ್ಕೇನೂ ಸಮಸ್ಯೆ ಇಲ್ಲ
ಬಿಹಾರ ವಿಧಾನಸಭೆಯಲ್ಲಿ ಜೆಡಿಯು ಆರ್‌ಜೆಡಿ ಕಾಂಗ್ರೆಸ್ ಎಡಪಕ್ಷಗಳ ಮಹಾಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ಇದೆ. 243 ಸದಸ್ಯರಿರುವ ವಿಧಾನಸಭೆಯಲ್ಲಿ ಸರಕಾರದ ಪರವಾಗಿ 164 ಶಾಸಕರಿದ್ದಾರೆ. ಹೀಗಾಗಿ, ಸಿಎಂ ನಿತೀಶ್ ಕುಮಾರ್ ಬಹುಮತ ಸಾಬೀತುಪಡಿಸುವುದರಲ್ಲಿ ಅನುಮಾನ ಇಲ್ಲ. ಸ್ಪೀಕರ್ ಯಾರೇ ಇದ್ದರೂ ವ್ಯತ್ಯಾಸ ಆಗದು.

ವಿಜಯ್ ಕುಮಾರ್ ಸಿನ್ಹಾ ಇಂದು ವಿಧಾಸಸಭೆಯ ಅಧ್ಯಕ್ಷತೆ ವಹಿಸಬಹುದಾದರೂ ನಾಳೆ ಗುರುವಾರ ಅವರು ಅವಿಶ್ವಾಸ ಗೊತ್ತುವಳಿ ಎದುರಿಸಬೇಕಾಗುತ್ತದೆ, ರಾಜೀನಾಮೆ ನೀಡಬೇಕಾಗುತ್ತದೆ.

ನಿತೀಶ್ ಪ್ರಬಲ ಪ್ರಧಾನಿ ಅಭ್ಯರ್ಥಿಯಾಗಬಲ್ಲರು; ತೇಜಸ್ವಿನಿತೀಶ್ ಪ್ರಬಲ ಪ್ರಧಾನಿ ಅಭ್ಯರ್ಥಿಯಾಗಬಲ್ಲರು; ತೇಜಸ್ವಿ

ಸರಕಾರಕ್ಕೇನೂ ಸಮಸ್ಯೆ ಇಲ್ಲ
ಬಿಹಾರ ವಿಧಾನಸಭೆಯಲ್ಲಿ ಜೆಡಿಯು ಆರ್‌ಜೆಡಿ ಕಾಂಗ್ರೆಸ್ ಎಡಪಕ್ಷಗಳ ಮಹಾಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತ ಇದೆ. ೨೪೩ ಸದಸ್ಯರಿರುವ ವಿಧಾನಸಭೆಯಲ್ಲಿ ಸರಕಾರದ ಪರವಾಗಿ ೧೬೪ ಶಾಸಕರಿದ್ದಾರೆ. ಹೀಗಾಗಿ, ಸಿಎಂ ನಿತೀಶ್ ಕುಮಾರ್ ಬಹುಮತ ಸಾಬೀತುಪಡಿಸುವುದರಲ್ಲಿ ಅನುಮಾನ ಇಲ್ಲ. ಸ್ಪೀಕರ್ ಯಾರೇ ಇದ್ದರೂ ವ್ಯತ್ಯಾಸ ಆಗದು.

ವಿಜಯ್ ಕುಮಾರ್ ಸಿನ್ಹಾ ಇಂದು ವಿಧಾಸಸಭೆಯ ಅಧ್ಯಕ್ಷತೆ ವಹಿಸಬಹುದಾದರೂ ನಾಳೆ ಗುರುವಾರ ಅವರು ಅವಿಶ್ವಾಸ ಗೊತ್ತುವಳಿ ಎದುರಿಸಬೇಕಾಗುತ್ತದೆ, ರಾಜೀನಾಮೆ ನೀಡಬೇಕಾಗುತ್ತದೆ.

Bihar CM Trust Vote on 24th: Speaker Refuses to Resign

ಸ್ಪೀಕರ್‌ಗೆ ಯಾಕೆ ಹಠ?
ಸ್ಪೀಕರ್ ಸ್ಥಾನದಲ್ಲಿ ಮುಂದುವರಿಯಲು ಅಸಾಧ್ಯ ಎಂದು ಗೊತ್ತಿದ್ದರೂ ವಿಜಯ್ ಕುಮಾರ್ ಸಿನ್ಹಾ ಪಟ್ಟು ಹಿಡಿದಿರುವುದು ಯಾಕೆ? ಇದು ಕೇವಲ ಹಠಮಾರಿತನವಾ ಎಂಬುದು ಪ್ರಶ್ನೆ. ಆದರೆ, ಬಿಜೆಪಿ ಮೂಲಗಳ ಪ್ರಕಾರ, ವಿಜಯ್ ಕುಮಾರ್ ಸಿನ್ಹಾ ಅವರು ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡುವ ಮೊದಲು ಸಭೆಯನ್ನು ಉದ್ದೇಶಿಸಿ ಕೆಲವಿಷ್ಟು ವಿಚಾರಗಳನ್ನು ಹಂಚಿಕೊಳ್ಳಲು ಬಯಸಿದ್ದಾರೆ. ಸ್ಪೀಕರ್ ಆಗಿ ತಮ್ಮ ಅವಧಿಯಲ್ಲಿನ ಕೆಲ ಬೆಳವಣಿಗೆ ಬಗ್ಗೆ ಮಾತನಾಡಲು ಬಯಸಿದ್ದಾರೆ ಎಂದು ಹೇಳಲಾಗುತ್ತಿದೆ.

ಅಷ್ಟೇ ಅಲ್ಲ, ಕಳೆದ ಬಾರಿ ವಿಧಾನಸಭೆ ಅಧಿವೇಶನ ನಡೆದ ಸಂದರ್ಭದಲ್ಲಿ ಒಂದೇ ಮೈತ್ರಿಕೂಟದಲ್ಲಿದ್ದರೂ ಸಿಎಂ ನಿತೀಶ್ ಕುಮಾರ್ ಮತ್ತು ಸ್ಪೀಕರ್ ವಿಜಯ್ ಕುಮಾರ್ ಸಿನ್ಹಾ ಮಧ್ಯೆ ವಾಗ್ಯುದ್ಧ ನಡೆದಿತ್ತು. ಇದೀಗ ನಿತೀಶ್ ಕುಮಾರ್ ಅನ್ನು ಎದಿರುಗೊಳ್ಳಲು ವಿಜಯ್ ಕುಮಾರ್ ಸಮರ್ಥ ವ್ಯಕ್ತಿ ಎಂಬ ಅಭಿಪ್ರಾಯಕ್ಕೆ ಬಿಜೆಪಿ ಬಂದಿದೆ. ವಿಪಕ್ಷ ನಾಯಕ ಸ್ಥಾನದಲ್ಲಿ ಕೂರುವ ಮುನ್ನ ವಿಜಯ್ ಕುಮಾರ್ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ಈ ವೇದಿಕೆ ಬಳಸಿಕೊಳ್ಳುವ ನಿರೀಕ್ಷೆ ಇದೆ.

ಆರ್‌ಜೆಡಿ ಟೀಕೆ
ಅವಿಶ್ವಾಸ ಗೊತ್ತುವಳಿ ಇರುವಾಗ ಸ್ಪೀಕರ್ ಸ್ಥಾನದಲ್ಲಿ ಮುಂದುವರಿಯುವ ಯಾವ ಸಂವಿಧಾನಿಕ ನೈತಿಕತೆ ಅವರಿಗಿಲ್ಲ. ಅವರು ಮುಂದುವರಿದರೆ ಅವರ ವಿರುದ್ಧ ಸಭೆಯಲ್ಲಿ ನಿರ್ಣಯ ಹೊರಡಿಸಿ, ಹಂಗಾಮಿ ಸ್ಪೀಕರ್ ನೇಮಕ ಮಾಡಬೇಕಾಗುತ್ತದೆ ಎಂದು ಆರ್‌ಜೆಡಿ ರಾಷ್ಟ್ರೀಯ ವಕ್ತಾರ ಸುಬೋಧ ಕುಮಾರ್ ಹೇಳಿರುವುದು ವರದಿಯಾಗಿದೆ.

(ಒನ್ಇಂಡಿಯಾ ಸುದ್ದಿ)

Recommended Video

   ಮುಂದಿನ ಚುನಾವಣೆ: ಸಿದ್ದರಾಮಯ್ಯ ಇಲ್ಲಿಂದಲೇ ಸ್ಪರ್ಧೆ? | Oneindia Kannada
   ನಿತೀಶ್ ಕುಮಾರ
   Know all about
   ನಿತೀಶ್ ಕುಮಾರ
   English summary
   BJP leader and Bihar Assembly speaker Vijay Kumar Sinha has refused to resign even after served with no-confidence motion by RJD. Today is trust vote on the government.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X