• search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ಬಿಹಾರದಲ್ಲಿ ವಿಶ್ವಾಸಮತ ಗೆದ್ದ ನಿತೀಶ್ ಕುಮಾರ್

|
Google Oneindia Kannada News

ಪಾಟ್ನಾ, ಆಗಸ್ಟ್ 24: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಹೊಸ ಮಹಾಮೈತ್ರಿಕೂಟ ಸರ್ಕಾರವು ವಿಶ್ವಾಸಮತ ಗೆದ್ದುಕೊಳ್ಳುವಲ್ಲಿ ಯಶಸ್ವಿ ಆಗಿದೆ. ಬುಧವಾರ ವಿಧಾನಸಭೆಯಲ್ಲಿ ವಿಶ್ವಾಸ ಮತ ಗೆದ್ದಿದ್ದು, ಮತದಾನಕ್ಕೂ ಮುನ್ನ ಅವರು ಭಾಷಣ ಮಾಡುವ ವೇಳೆಯಲ್ಲೇ ಬಿಜೆಪಿ ಶಾಸಕರು ಹೊರ ನಡೆದರು.

ಬಿಹಾರದ 243 ಸದಸ್ಯರ ಸಂಖ್ಯೆಯುಳ್ಳ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್, 164 ಸದಸ್ಯರ ಬೆಂಬಲವನ್ನು ಪಡೆದುಕೊಳ್ಳುವುದರ ಮೂಲಕ ಬಹುಮತ ಪಡೆದುಕೊಂಡಿದ್ದಾರೆ.

Breaking: ಬಿಹಾರ ವಿಧಾನಸಭೆಯ ಸ್ಪೀಕರ್ ಸ್ಥಾನಕ್ಕೆ ಸಿನ್ಹಾ ರಾಜೀನಾಮೆBreaking: ಬಿಹಾರ ವಿಧಾನಸಭೆಯ ಸ್ಪೀಕರ್ ಸ್ಥಾನಕ್ಕೆ ಸಿನ್ಹಾ ರಾಜೀನಾಮೆ

ವಿಶ್ವಾಸಮತ ಯಾಚನೆಯ ಮೇಲಿನ ಚರ್ಚೆಯ ಸಂದರ್ಭದಲ್ಲಿ ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಮತ್ತು ನಿತೀಶ್ ಕುಮಾರ್ ಮತ್ತು ಆರ್ ಜೆಡಿಯ ತೇಜಸ್ವಿ ಯಾದವ್ ನಡುವಿನ ಮೈತ್ರಿಯು ಹೊಸ ಇತಿಹಾಸವನ್ನು ಸೃಷ್ಟಿಸಲಿದೆ ಎಂದು ಉಲ್ಲೇಖಿಸಿದರು.

ನಿತೀಶ್ ಕುಮಾರ್ ಸಚಿವ ಸಂಪುಟ:

ನಿತೀಶ್ ಕುಮಾರ
Know all about
ನಿತೀಶ್ ಕುಮಾರ

ನಿತೀಶ್ ಕುಮಾರ್ ತಮ್ಮ ಸಂಪುಟವನ್ನು ವಿಸ್ತರಿಸಿದ ಕೆಲವೇ ದಿನಗಳಲ್ಲಿ ಬಹುಮತದ ಪರೀಕ್ಷೆಯು ಬಂದಿದ್ದು, ಆರ್‌ಜೆಡಿಗೆ ಹೆಚ್ಚಿನ ಸ್ಥಾನಗಳು ಸಿಗಲಿವೆ. ಈ ಸಚಿವ ಸಂಪುಟದಲ್ಲಿ ಇರುವ 31 ಸಚಿವರಲ್ಲಿ ಆರ್‌ಜೆಡಿ 16, ನಿತೀಶ್‌ ಕುಮಾರ್‌ ಅವರ ಜೆಡಿ(ಯು) 11 ಮಂದಿಯನ್ನು ಉಳಿಸಿಕೊಂಡಿದೆ. ಇಬ್ಬರು ಕಾಂಗ್ರೆಸ್ ನಾಯಕರು, ಜಿತನ್ ರಾಮ್ ಮಾಂಝಿ ಅವರ ಹಿಂದೂಸ್ತಾನಿ ಅವಾಮ್ ಮೋರ್ಚಾದ ನಾಯಕ ಮತ್ತು ಒಬ್ಬ ಸ್ವತಂತ್ರ ಶಾಸಕ ಕೂಡ ಮಂತ್ರಿಯಾಗಿದ್ದಾರೆ.

English summary
Bihar CM Nitish Kumar Wins Majority Test In state Assembly after BJP Walks Out. Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X