ಬಿಹಾರದಲ್ಲಿ ನಿಗೂಢ ಕಾಯಿಲೆ: 36 ಮಕ್ಕಳ ದುರ್ಮರಣ
ಪಾಟ್ನಾ, ಜೂನ್ 12: ಬಿಹಾರದ ಮುಜಾಫರ್ಪುರದಲ್ಲಿ ಕಂಡುಬಂದ ವಿಚಿತ್ರ ಕಾಯಿಲೆಯಿಂದಾಗಿ ಕಳೆದ 24 ಗಂಟೆಯಲ್ಲಿ 36 ಮಕ್ಕಳು ದುರ್ಮರಣಕ್ಕೀಡಾಗಿದ್ದು, ಈ ಕಾಯಿಲೆಯ ಬಗ್ಗೆ ನಿಖರ ಮಾಹಿತಿ ಲಭ್ಯವಾಗಿಲ್ಲ.
ಮೇಲ್ನೋಟಕ್ಕೆ ಇದು ಮೆದುಳಿನ ಉರಿಯೂತ(Acute Encephalitis Syndrome)ದ ಸಮಸ್ಯೆಯಿಂದ ಮತ್ತು ರಕ್ತದಲ್ಲಿ ಸಕ್ಕರೆ ಪ್ರಮಾಣ ಇದ್ದಕ್ಕಿದ್ದಂತೆ ಕಡಿಮೆಯಾದ(Hypoglycemia) ಕಾರಣ ಉಂಟಾದ ದುರಂತ ಎಂದು ವೈದ್ಯರು ಅಂದಾಜಿಸಿದ್ದಾರೆ.

ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಈ ಸಮಸ್ಯೆ ಕಂಡುಬರುತ್ತಿದ್ದು, 15 ವರ್ಷದೊಳಗಿನ ಮಕ್ಕಳೇ ಹೆಚ್ಚಾಗಿ ಈ ರೋಗಕ್ಕೆ ತುತ್ತಾಗಿದ್ದಾರೆ. ಬೇಸಿಗೆಯ ಸಮಯದಲ್ಲಿ ಮುಜಾಫರ್ಪುರದಲ್ಲಿ ಹೈಪೋಗ್ಲೆಸಿಮಿಯಾ ಕಾಯಿಲೆ ಆಗಾಗ ಕಂಡುಬರುತ್ತಿತ್ತು. ಆದರೆ AES ಸಮಸ್ಯೆ ಕಂಡುಬಂದಿರಲಿಲ್ಲ.
ಅತಿಯಾದ ಜ್ವರ, ಮಾನಸಿಕ ಸ್ಥಿತಿಯಲ್ಲಿ ಅಸ್ಥಿರತೆ, ಕೋಮಾ ಸ್ಥಿತಿಗೆ ತಲುಪುವ ಪರಿಸ್ಥಿತಿ ಉಂಟಾಗುವುದು ಈ ರೋಗದ ಲಕ್ಷಣ. ಕಳೆದ ಎರಡು ವರ್ಷಗಳಿಂದ ಬಿಹಾರದಲ್ಲಿ ಈ ಸಮಸ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿತ್ತು. ಆದರೆ ಈ ವರ್ಷ ಮತ್ತೆ ಹೆಚ್ಚಾಗಿರುವುದು ಆತಂಕ ಸೃಷ್ಟಿಸಿದೆ.











Click it and Unblock the Notifications