ಲಾಲೂ ಪುತ್ರ ತೇಜ್ ಪ್ರತಾಪ್ ಗೆ ರಸ್ತೆಯಲ್ಲಿ ಅಡ್ಡಾಡಲು ಭಯವಂತೆ!
ಪಾಟ್ನಾ, ಜನವರಿ 03: ರಾಷ್ಟ್ರೀಯ ಜನತಾ ದಳ (ಆರ್ ಜೆ ಡಿ) ನಾಯಕ, ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರ ಪುತ್ರ ತೇಜ್ ಪ್ರತಾಪ್ ಯಾದವ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಪತ್ನಿ ಐಶ್ವರ್ಯಾ ರೈ ಜತೆ ವಿವಾಹ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿ ನಂತರ ವಾಪಸ್ ಪಡೆದ ಪ್ರಸಂಗದ ಬಳಿಕ ತೇಜ್ ಪ್ರತಾಪ್ ಅವರು ಇಂದು ಸುದ್ದಿಗೋಷ್ಠಿ ನಡೆಸಿ, ತಮಗೆ ಜೀವ ಬೆದರಿಕೆ ಇದೆ, ರಸ್ತೆಯಲ್ಲಿ ಅಡ್ಡಾಡಲು ಭಯವಾಗುತ್ತಿದೆ ಎಂದಿದ್ದಾರೆ.
"ನನಗೆ ರಸ್ತೆಯಲ್ಲಿ ಓಡಾಡಲು ಭಯವಾಗುತ್ತಿದೆ. ಯಾರು ಯಾರನ್ನು ಬೇಕಾದರೂ ಕೊಲ್ಲಬಹುದು" ಎಂದು ತೇಜ್ಪ್ರತಾಪ್ ಯಾದವ್ಅವರು ಹೇಳಿದ್ದಾರೆ.

ಬಿಹಾರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ನನಗೆ ಭಯವಾಗುತ್ತಿದೆ. ಪ್ರತಿನಿತ್ಯ ಕೊಲೆಗಳು ಜರುಗುತ್ತಿವೆ. ನನಗೆ ಒದಗಿಸಿರುವ ಭದ್ರತೆಯನ್ನು ಹೆಚ್ಚಿಸುವಂತೆ ಮುಖ್ಯಮಂತ್ರಿ ಅವರನ್ನು ವಿನಂತಿಸುತ್ತೇನೆ" ಎಂದರು.
ಔರಂಗಾಬಾದ್ನಲ್ಲಿ ಡಿಸೆಂಬರ್ 30ರಂದು ವ್ಯಕ್ತಿಯೊಬ್ಬನನ್ನು ಉಗ್ರರು ಕೊಂದು ಹಾಕಿದ್ದರು. ಜತೆಗೆ ನಾಲ್ಕು ಬಸ್ಗಳನ್ನು ಸುಟ್ಟಿದ್ದರು.ಈ ಘಟನೆಯನ್ನು ತೇಜ್ ಪ್ರತಾಪ್ ಉಲ್ಲೇಖಿಸಿ, ಕೆಲವೊಮ್ಮೆ ಭದ್ರತೆಗೆ ಬಾಡಿಗಾರ್ಡ್ಸ್ಗಳೂ ಸಾಲುವುದಿಲ್ಲ ಎನಿಸುತ್ತದೆ ಎಂದಿದ್ದಾರೆ.












Click it and Unblock the Notifications