• search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಹಾರ: ಒಂದೇ ಕುಟುಂಬದ 20ಕ್ಕೂ ಹೆಚ್ಚು ಮಂದಿಗೆ ಕೊರೊನಾ ಸೋಂಕು

|

ಪಾಟ್ನಾ, ಏಪ್ರಿಲ್ 10: ಬಿಹಾರದಲ್ಲಿರುವ ಒಟ್ಟು 60 ಕೊರೊನಾ ಪ್ರಕರಣಗಳ ಪೈಕಿ 23 ಕೊರೊನಾ ಪ್ರಕರಣಗಳು ಒಂದೇ ಕುಟುಂಬದಲ್ಲಿದೆ.

ಪಾಟ್ನಾದಿಂದ 130 ಕಿ.ಮೀ ದೂರವಿರುವ ಸಿವನ್ ಜಿಲ್ಲೆಯಲ್ಲಿ ಘಟನೆ ನಡೆದಿದೆ. ಕಳೆದ ತಿಂಗಳು ಓಮನ್‌ನಿಂದ ಬಂದಿದ್ದ ವ್ಯಕ್ತಿಯಿಂದ ಇಷ್ಟೂ ಮಂದಿಗೆ ಸೋಂಕು ತಗುಲಿದೆ.

ಓಮನ್‌ನಿಂದ ಸಿವನ್‌ನಲ್ಲಿರುವ ಪಂಜ್ವಾರ ಹಳ್ಳಿಗೆ ಮಾರ್ಚ್ 16ರಂದು ಬಂದಿದ್ದ, ಏಪ್ರಿಲ್ 4 ರಂದು ಆತನಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಈ ಸಂದರ್ಭದಲ್ಲಿ ಆತ ಜಿಲ್ಲೆಯ ಸಾಕಷ್ಟು ಭಾಗಗಳಲ್ಲಿ ಓಡಾಡಿದ್ದ.

ಕುಟುಂಬದಲ್ಲಿರುವ ಮಹಿಳೆ, ಮಕ್ಕಳು ಎಲ್ಲರನ್ನೂ ಸೇರಿ ಒಟ್ಟು 22 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಹಾಗೆಯೇ ಇನ್ನೂ ಹಲವರಿಗೆ ಯಾವುದೇ ಲಕ್ಷಣಗಳಿಲ್ಲದಿದ್ದರೂ ಕೊರೊನಾ ಪಾಸಿಟಿವ್ ಬಂದಿದೆ.

ಕುಟುಂಬದ 23 ಮಂದಿ ಪೈಕಿ ನಾಲ್ವರು ಗುಣಮುಖರಾಗಿದ್ದಾರೆ. ಇನ್ನೂ ಎರಡು ವಾರಗಳ ಕಾಲ ಕ್ವಾರಂಟೈನ್‌ನಲ್ಲಿರಬೇಕಾಗುತ್ತದೆ. ಕುಟುಂಬದ ಇನ್ನೂ ಹತ್ತು ಮಂದಿಯ ವರದಿ ಬರಬೇಕಿದೆ.

43 ಹಳ್ಳಿಗಳನ್ನು ಸೀಲ್ ಮಾಡಲಾಗಿದೆ. ಆದರೆ ರೋಗಿಗಳನ್ನು ಕಂಡು ಹಿಡಿಯುವಲ್ಲಿ ಆರೋಗ್ಯ ಇಲಾಖೆ ಯಶಸ್ವಿಯಾಗಿದೆ. ಬಿಹಾರದಲ್ಲಿ ಒಟ್ಟು 60 ಪ್ರಕರಣಗಳು ಪತ್ತೆಯಾಗಿವೆ. ಓರ್ವ ಮೃತಪಟ್ಟಿದ್ದಾರೆ.

English summary
Nearly a third of Bihar's 60 coronavirus cases have been reported from one family in Siwan district, a COVID-19 hotspot about 130 km from state capital Patna.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X