ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Video: ಮಂಚದ ಸಮೇತ ವೃದ್ಧನನ್ನು ಮತಗಟ್ಟೆಗೆ ಕರೆತಂದ ಕುಟುಂಬಸ್ಥರು!

|
Google Oneindia Kannada News

ಪಾಟ್ನಾ, ನವೆಂಬರ್.07: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಆತಂಕದ ನಡುವೆ ಬಿಹಾರದಲ್ಲಿ ಅಂತಿಮ ಹಂತದ ಚುನಾವಣೆಯಲ್ಲಿ 16 ಜಿಲ್ಲೆಗಳ 78 ವಿಧಾನಸಭಾ ಕ್ಷೇತ್ರಗಳಿಗೆ ಚುರುಕಿನ ಮತದಾನ ಪ್ರಕ್ರಿಯೆ ನಡೆಯುತ್ತಿದೆ.

ನಡೆದಾಡಲು ಸಾಧ್ಯವಾಗ ಸ್ಥಿತಿಯಲ್ಲಿದ್ದ ವೃದ್ಧ ತನ್ನ ಹಕ್ಕು ಚಲಾವಣೆ ಮಾಡುವುದಕ್ಕೆ ಕುಟುಂಬದ ಸದಸ್ಯರೆಲ್ಲ ಹೆಗಲು ನೀಡಿತ್ತಾರೆ. ಮಂಚದ ಮೇಲೆ ಮಲಗಿದ್ದ ವೃದ್ಧನನ್ನು ಮಂಚದ ಸಮೇತವಾಗಿ ಮತಗಟ್ಟೆಗೆ ಕರೆದು ತಂದಿರುವ ಘಟನೆ ಕಟಿಹಾರ್ ನಲ್ಲಿ ನಡೆದಿದೆ.

ಕಟಿಹಾರ್ ಮತಗಟ್ಟೆಗೆ ವೃದ್ಧನನ್ನು ಕರೆದು ತಂದ ಕುಟುಂಬಸ್ಥರು ಮತ ಹಾಕುವುದಕ್ಕೆ ಸಹಾಯ ಮಾಡಿದ್ದಾರೆ. ಇಳಿವಯಸ್ಸಿನಲ್ಲಿ ಹಕ್ಕು ಚಲಾಯಿಸುವ ಹಂಬಲ ಹೊಂದಿರುವ ವೃದ್ಧನ ಬಗ್ಗೆ ಕುಟುಂಬಸ್ಥರು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಶನಿವಾರ ಬೆಳಗ್ಗೆ 11 ಗಂಟೆ ಹೊತ್ತಿಗೆ ರಾಜ್ಯದಲ್ಲಿ ಶೇ.19.77ರಷ್ಟು ಮತದಾನ ನಡೆದಿದೆ ಎಂದು ಚುನಾವಣಾ ಆಯೋಗವು ಮಾಹಿತಿ ನೀಡಿದೆ.

A Man Brought To Katihar Polling Booth For Cast Their Vote From Family Members

78 ಕ್ಷೇತ್ರಗಳಿಗೆ ಮತದಾನ:

ಬಿಹಾರದ 243 ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರನೇ ಹಾಗೂ ಅಂತಿಮ ಹಂತದಲ್ಲಿ 16 ಜಿಲ್ಲೆಗಳ 78 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಈ ಬಾರಿ 2.35 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಮೂರನೇ ಹಂತದ ಚುನಾವಣೆಯ ಕಣದಲ್ಲಿ 382 ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ 1204 ಅಭ್ಯರ್ಥಿಗಳ ನಡುವೆ ಪೈಪೋಟಿ ನಡೆಯುತ್ತಿದೆ. ಈ ಪೈಕಿ 1094 ಪುರುಷ ಅಭ್ಯರ್ಥಿಗಳಾಗಿದ್ದರೆ, 110 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ. 3ನೇ ಹಂತದಲ್ಲಿ ಒಟ್ಟು 2,35 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದು, ಈ ಪೈಕಿ 1.23 ಕೋಟಿ ಪುರುಷ ಹಾಗೂ 1.12ರಷ್ಟು ಮಹಿಳಾ ಮತದಾರರಿದ್ದಾರೆ.

Karnataka By Elections 2020 Live Updates; ಆರ್.ಆರ್ ನಗರ ಶೇ.45.24, ಶಿರಾದಲ್ಲಿ ಶೇ.82.31 ರಷ್ಟು ಮತದಾನKarnataka By Elections 2020 Live Updates; ಆರ್.ಆರ್ ನಗರ ಶೇ.45.24, ಶಿರಾದಲ್ಲಿ ಶೇ.82.31 ರಷ್ಟು ಮತದಾನ

ಬಿಹಾರದಲ್ಲಿ ಅಂತಿಮ ಹಂತದ ಚುನಾವಣಾ ಕಣದಲ್ಲಿ ರಾಷ್ಟ್ರೀಯ ಜನತಾ ದಳದ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿದೆ. 78 ಕ್ಷೇತ್ರಗಳ ಪೈಕಿ ಆರ್ ಜೆಡಿ 46 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೆ, 42 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಲೋಕಜನಶಕ್ತಿ ಪಕ್ಷವು 2ನೇ ಸ್ಥಾನದಲ್ಲಿದೆ. ಜೆಡಿಯು 37, ಬಿಜೆಪಿ 35, ಎನ್ ಸಿಪಿ 31, ಕಾಂಗ್ರೆಸ್ 25, ರಾಷ್ಟ್ರೀಯ ಲೋಕ ಸಮತಾ ಪಕ್ಷ 23, ಬಹುಜನ ಸಮಾಜವಾದಿ ಪಕ್ಷ 19 ಹಾಗೂ ಸಿಪಿಐ ಪಕ್ಷದ ಇಬ್ಬರು ಅಭ್ಯರ್ಥಿಗಳು ಕಣದಲ್ಲಿ ಸ್ಪರ್ಧಿಸಿದ್ದಾರೆ.

English summary
Bihar Assembly Election 2020: A Man Brought To Katihar Polling Booth For Cast Their Vote From Family Members.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X