ಬಿಹಾರ ಬಿಜೆಪಿ ಕಚೇರಿಯಲ್ಲಿ 75 ಮುಖಂಡರಿಗೆ ಕೊರೊನಾ ಸೋಂಕು

ಪಾಟ್ನಾ, ಜುಲೈ 14: ಬಿಹಾರದ ಪಾಟ್ನಾದಲ್ಲಿರುವ ಬಿಜೆಪಿ ಮುಖ್ಯ ಕಚೇರಿಯಲ್ಲಿ ಸಿಬ್ಬಂದಿ ಸೇರಿ 75 ಜನ ನಾಯಕರಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ.

ಬಿಜೆಪಿ ಪಕ್ಷದ ಪ್ರಾದೇಶಿಕ ಸಭೆಯಲ್ಲಿ ಭಾಗವಹಿಸಿದ್ದ ಓರ್ವ ವ್ಯಕ್ತಿಗೆ ಕೊರೊನಾ ತಗುಲಿದ್ದ ಹಿನ್ನೆಲೆ ನಿನ್ನೆ ನೂರು ಜನ ಬಿಜೆಪಿ ಕಾರ್ಯಕರ್ತರ ಮಾದರಿ ಸಂಗ್ರಹಿಸಲಾಗಿತ್ತು. ಇದರಲ್ಲಿ ಸಿಬ್ಬಂದಿ ಸೇರಿ 75 ಮಂದಿಗೆ ಪಾಸಿಟಿವ್ ಎಂದು ಫಲಿತಾಂಶ ಬಂದಿದೆ.

ಮಂಗಳವಾರ ಬೆಳಗ್ಗೆ 75 ಮುಖಂಡರಿಗೆ ಕೊವಿಡ್ ಖಚಿತವಾಗಿದೆ ಎಂಬ ವರದಿ ಬಂದಿದ್ದು, ಇದರಲ್ಲಿ ರಾಜ್ಯದ ಪ್ರಮುಖ ನಾಯಕರು ಸಹ ಒಳಗೊಂಡಿದ್ದಾರೆ. ಸಾಂಸ್ಥಿಕ ಪ್ರಧಾನ ಕಾರ್ಯದರ್ಶಿ ನಾಗೇಂದ್ರ, ರಾಜ್ಯ ಪ್ರಧಾನ ಕಾರ್ಯದರ್ಶಿ ದೇವೇಶ್ ಕುಮಾರ್, ಪಕ್ಷದ ರಾಜ್ಯ ಉಪಾಧ್ಯಕ್ಷ ರಾಜೇಶ್ ವರ್ಮಾ, ಮಾಜಿ ಎಂಎಲ್ಸಿ ರಾಧಾ ಮೋಹನ್ ಶರ್ಮಾಗೂ ಸೋಂಕು ದೃಢವಾಗಿದೆ.

75 BJP Leaders have tested positive for Covid19 at bihar

ಇವರ ಜೊತೆಗೆ ರಾಜ್ಯ ಬಿಜೆಪಿ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಮೂವರು ಸಿಬ್ಬಂದಿಗೂ ಕೊರೊನಾ ಅಂಟಿಕೊಂಡಿದೆ ಎಂದು ತಿಳಿದಿದೆ. 75 ಜನರಿಗೆ ಸೋಂಕು ಬಂದಿದೆ ಎಂದು ತಿಳಿದ ಜಿಲ್ಲಾಡಳಿತ ಬಿಜೆಪಿ ಕಚೇರಿಯನ್ನು ಸೀಲ್‌ಡೌನ್ ಮಾಡಿದೆ. ಜೊತೆ ಕಂಟೈನ್‌ಮೆಂಟ್ ಜೋನ್ ಎಂದು ಗುರುತಿಸಿದೆ. ಸಂಪೂರ್ಣವಾಗಿ ಔಷಧಿ ಸಿಂಪಡಣೆ ಮಾಡಲಾಗಿದೆ.

ಮುಂಬರುವ ದಿನದಲ್ಲಿ ಬಿಹಾರ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಹಾಗಾಗಿ, ಬಿಜೆಪಿ ಕಚೇರಿಯಲ್ಲಿ ಕಳೆದ ಹಲವು ದಿನಗಳಿಂದ ಭಾರಿ ಜನಸಂದಣಿ ಕಂಡು ಬಂದಿತ್ತು. ಟಿಕೆಟ್ ಆಕಾಂಕ್ಷಿಗಳು ಹೆಚ್ಚು ಭೇಟಿ ನೀಡುತ್ತಿದ್ದರು.

ಮತ್ತೊಂದೆಡೆ ಬಿಹಾರದಲ್ಲಿ ಜುಲೈ 16 ರಿಂದ 31ರವರೆಗೂ ಲಾಕ್‌ಡೌನ್ ವಿಸ್ತರಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ತಿಳಿಸಿದ್ದಾರೆ. ಇಂದು ಹೊಸದಾಗಿ 1432 ಜನರಿಗೆ ಕೊರೊನಾ ವೈರಸ್ ಅಂಟಿಕೊಂಡಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 18853ಕ್ಕೆ ಏರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+